ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೧೩೪. ಶರ್ಮಿಷ್ಠೆ ಪೂರ್ವದಲ್ಲಿ ವೃಷಪರ್ವನೆಂಬ ದೈತ್ಯರಾಜನಿದ್ದನು. ಶರ್ಮಿಷ್ಠೆ ಈತನ ಮಗಳು. ದೈತ್ಯಗುರುವಾದ ಶುಕ್ರಾಚಾರ್ಯನ ಮಗಳಾದ ದೇವಯಾನಿಯು ಶರ್ಮಿಷ್ಠೆಯ ಸವತಿಯಾಗಿದ್ದಳು. ಒಮ್ಮೆ ಇವರಿಬ್ಬರಲ್ಲಿ ಜಗಳವಾದಾಗ ಶರ್ಮಿಷ್ಠೆ ದೇವಯಾನಿಯನ್ನು ಬಾವಿಯಲ್ಲಿ ತಳ್ಳಿಬಿಟ್ಟಳು. ಆಗ ಶುಕ್ರಾಚಾರ್ಯನು ಕ್ರೋಧಗೊಂಡನು. ತನ್ನ ಕುಲದ ಒಳಿತಿಗಾಗಿ ಇವಳು ದೇವಯಾನಿಯ ದಾಸ್ಯತ್ವವನ್ನು ಅಂಗೀಕರಿಸಿದಳು. ದೇವಯಾನಿಯ ದಾಸಿಯಾಗಿ ಶರ್ಮಿಷ್ಠೆ ಯಯಾತಿಯ ಬಳಿಗೆ ಹೋದಳು. 'ಶರ್ಮಿಷ್ಠೆಯೊಡನೆ ಶಯನ ಸುಖವನ್ನು ಪಡೆಯಕೂಡದು” ಎಂಬ ಕಟ್ಟಪ್ಪಣೆಯನ್ನು ಶುಕ್ರಾಚಾರನು ಯಯಾತಿಗೆ ಮಾಡಿದ್ದನು. ಹೀಗಿದ್ದರೂ ಶರ್ಮಿಷ್ಠೆಗೆ ಮೂರು ಮಕ್ಕಳಾದರು. ರಾಮಾಯಣದಲ್ಲಿ ಪುರು ಎಂಬ ಮಗನ ಹೆಸರಿನ ಉಲ್ಲೇಖ ಮಾತ್ರ ಬಂದಿದೆ. ಶರ್ಮಿಷ್ಠೆ ಯಯಾತಿಗೆ ಮೆಚ್ಚಿನವಳಾಗಿದ್ದಳು. ದೇವಯಾನಿ, ವ್ಯಕ್ತಿವಿಶೇಷ ಕ್ರಮಸಂಖ್ಯೆ ೫೮ ಪರಿಶೀಲಿಸಿರಿ. ಶಿ ೧೩೫, ಶಿಬಿರಾಜ * ಈತನು ಉಶೀನರ ಮತ್ತು ಮಾಧವಿ ದಂಪತಿಗಳ ಪುತ್ರನಾಗಿದ್ದನು. ಮತ್ಯ ಪುರಾಣ, ಬ್ರಹ್ಮಾಂಡಪುರಾಣ ಮತ್ತು ವಾಯುಪುರಾಣಗಳಲ್ಲಿ ಈತನ ತಾಯಿಯ ಹೆಸರು ನೃಷದ್ವತಿ ಎಂದು ಕೊಡಲಾಗಿದೆ. ಈತನು ಮಂತ್ರದ್ರಷ್ಟಾರ. ಇವನನ್ನು ಪರೀಕ್ಷಿಸಲೆಂದು ಅಗ್ನಿಯು ಪಾರಿವಾಳದ ಮತ್ತು ಇಂದ್ರನು ಗಿಡಗ ಪಕ್ಷಿಯ ರೂಪವನ್ನು ಧರಿಸಿದರು. ಗಿಡಗವು ಪಾರಿವಾಳದ ಬೆನ್ನಟ್ಟಿದಾಗ ಆ ಪಾರಿವಾಳವು ಶಿಬಿರಾಜನಿಗೆ ಮೊರೆಹೋಯಿತು. ಶಿಬಿರಾಜನು ಆ ಪಾರಿವಾಳಕ್ಕೆ ಅಭಯವನ್ನಿತ್ತನು. ಆಗ ಗಿಡುಗವು ಶಿಬಿಯನ್ನುದ್ದೇಶಿಸಿ 'ನನ್ನ ಆಹಾರವಾದ ಪಾರಿವಾಳವನ್ನು ನನಗೆ ಒಪ್ಪಿಸು! ಇಲ್ಲವಾದರೆ ಆ ಪಾರಿವಾಳದ ತೂಕದಷ್ಟು ಮಾಂಸವನ್ನು ನಿನ್ನ ಶರೀರದಿಂದ ತೆಗೆದು ನನಗೆ ಕೊಡು!” ಎಂದಿತು. ಆಗ ಇದಕ್ಕೆ ಒಪ್ಪಿಕೊಂಡ ಶಿಬಿರಾಜನು ತನ್ನ ಶರೀರದ ಸ್ವಲ್ಪಸ್ವಲ್ಪ ಭಾಗಗಳನ್ನು ಕತ್ತರಿಸಿ ತೂಕಹಾಕಿ, ಕೊನೆಗೆ ತನ್ನ ಇಡೀ ಶರೀರವನ್ನೇ ಗಿಡಗನಿಗೆ ಕೊಟ್ಟು ಆ ಪಾರಿವಾಳವನ್ನು ರಕ್ಷಿಸಿದನು. ಆಗ ಅಗ್ನಿ ಮತ್ತು ಇಂದ್ರರು ತಮ್ಮ ಪಕ್ಷಿರೂಪವನ್ನು ತ್ಯಜಿಸಿ ನಿಜರೂಪವನ್ನು ಪ್ರಕಟಿಸಿದರು; ಶಿಬಿಯನ್ನು ಕೊಂಡಾಡಿದರು. ಶಿಬಿರಾಜನ ಹಿರಿಮೆಯ ಕಥೆಗಳು ಹಲವಾರು ಕಡೆಯಲ್ಲಿ ಕಂಡುಬರುತ್ತವೆ. ಇಂದ್ರನು ಕೆಲವು ಕಾಲದವರೆಗೆ ತನ್ನ