ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೭೫

ಇಂದ್ರ ಪದವಿಯನ್ನು ಶಿಬಿರಾಜನಿಗೆ ಕೊಟ್ಟನು. ಶಿಬಿರಾಜನು ಸಂಪನ್ನನು,
ಉದಾರಬುದ್ಧಿಯವನು, ಪರಾಕ್ರಮಿಯು ಅಷ್ಟೇ ಅಲ್ಲದೆ ಉತ್ಕೃಷ್ಟ ರಾಜನಾಗಿದ್ದನು.
ಯಯಾತಿಗೆ ಸ್ವರ್ಗ ದೊರೆಯಲೆಂದು ಈತನು ಅವನಿಗೆ ಅಂತರಿಕ್ಷದ ಪ್ರದೇಶಗಳನ್ನು
ಬಿಟ್ಟುಕೊಟ್ಟನು. ಪದ್ಮಪುರಾಣದನುಸಾರ ಈತನು ಬ್ರಹ್ಮದೇವನ ಯಜ್ಞದಲ್ಲಿ
ಪ್ರತಿಷ್ಠಾತನಾಗಿದ್ದನು.

೧೩೬. ಶುಕ (ರಾಕ್ಷಸ)

ಈತನು ರಾವಣನ ಅಮಾತ್ಯನಾಗಿದ್ದನು. ಸಾರಣನ ಜೊತೆಗೆ ಇವನು
ಗುಪ್ತಚರನ ಕಾರ್ಯವನ್ನು ಮಾಡಿದನು. ಇವನು ಮೊದಲು ಬ್ರಾಹ್ಮಣನಾಗಿದ್ದನು.
ಒಮ್ಮೆ ಅಗಸ್ತ್ಯನು ಈತನ ಬಳಿ ಮಾಂಸದ ಊಟವನ್ನು ಕೇಳಿದ್ದನ್ನು ವಜ್ರದುಷ್ಟ್ರನು
ಕೇಳಿಸಿಕೊಂಡನು; ಮತ್ತು ಈತನ ಹೆಂಡತಿಯ ರೂಪವನ್ನು ಹೊಂದಿ ಅಗಸ್ತ್ಯನಿಗೆ
ನರಮಾಂಸವನ್ನು ಬಡಿಸಿದನು. ಆಗ ಅಗಸ್ತ್ಯನು ಇವನಿಗೆ ರಾಕ್ಷಸನಾಗುವ
ಶಾಪವನ್ನು ಕೊಟ್ಟನು. ಅನಂತರ ರಾಮನ ದರ್ಶನವಾದ ನಂತರ ಮತ್ತು
ರಾವಣನಿಗೆ ಉಪದೇಶಿಸಿದ ನಂತರ ಉಃಶಾಪದಂತೆ ಈತನು ಮುಕ್ತನಾದನು.
ರಾಮನ ಸೈನ್ಯದ ಬಲಾಬಲವನ್ನು ಕಂಡುಕೊಳ್ಳಲು ಗುಪ್ತಚರನಾಗಿ ಶುಕನನ್ನು
ರಾವಣನು ಕಳುಹಿದ್ದನು. ಆಗ ಶುಕನು ರಾಮನ ಮತ್ತು ಸುಗ್ರೀವನ ಸೈನ್ಯವನ್ನು
ಕಂಡುಕೊಂಡು ತನ್ನ ಸ್ಪಷ್ಟ ಅಭಿಪ್ರಾಯವನ್ನು ಗಾವಣನ ಮುಂದಿಟ್ಟನು. ಶುಕ
ಗುಪ್ತಚರನೆಂದು ವಿಭೀಷಣನಿಗೆ ಗೊತ್ತಾಯಿತು. ಇದನ್ನು ತಿಳಿದುಕೊಂಡರೂ
ರಾಮನು ತನ್ನ ಎಲ್ಲ ಸೈನ್ಯವನ್ನು ನಿರೀಕ್ಷಿಸಲು ಶುಕನಿಗೆ ಅವಕಾಶವನ್ನು ಕೊಟ್ಟನು.
ರಾವಣನಿಗೆ ಮರಣಕ್ಕೆ ಸಿದ್ಧನಾಗಿರಲು ಹೇಳಿಕಳುಹಿದನು. ಶುಕನು ರಾಮನ
ಜಯಕಾರವನ್ನು ಮಾಡಿ, ರಾಮನನ್ನು ಗೆಲ್ಲುವದು ಎಷ್ಟು ದುಸ್ತರವಾಗಿದೆ
ಎಂಬುದನ್ನು ರಾವಣನಿಗೆ ವಿವರಿಸಿದನು. ಆಗ ರಾವಣನು ಶುಕನನ್ನು ನಿಂದಿಸಿ
“ಇಲ್ಲಿಂದ ತೊಲಗು!” ಎಂದು ಶುಕನಿಗೆ ಹೇಳಿದನು.

೧೩.೭. ಶುಕ್ರಾಚಾರ್ಯ (ಉತನಸ, ಭಾರ್ಗವ)

ಮತ್ಸ್ಯ ಹಾಗೂ ಬ್ರಹ್ಮಪುರಾಣಗಳ ಮತದಂತೆ ಶುಕ್ರಾಚಾರ್ಯನು ವಾರುಣಿ
ಭೃಗು ಮತ್ತು ಪುಲೋಮಾ ಇವರ ಮಗನಿದ್ದಾನೆ. ಭೃಗುವಿನಿಂದ ದಿವ್ಯಳಿಗೆ
ಜನಿಸಿದ ಶುಕ್ರನೆಂದರೂ ಈತನೇ ಎಂದು ಬ್ರಹ್ಮಾಂಡಪುರಾಣದಲ್ಲಿದೆ. ಬೇರೆಬೇರೆ
ಗ್ರಂಥಗಳಲ್ಲಿ ಈತನ ತಾಯಿ-ತಂದೆಯರ ಬಗ್ಗೆ ಬೇರೆಬೇರೆ ಮಾಹಿತಿ ಇದೆ.