ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೬೫

ನಿನಗೆ ನೂರು ವರ್ಷದ ಪೂರ್ಣ ಆಯಸ್ಸನ್ನು ಕೊಟ್ಟಿದ್ದಾರೆ. ನಾನು ನಿನ್ನ ಆರೋಗ್ಯವನ್ನು ಕಾಯ್ದು ಇಟ್ಟಿದ್ದೇನೆ. ನಿನ್ನ ಎಲ್ಲ ಪರಿಸ್ಥಿತಿಯ ಅರಿವು ನನಗಿದೆ. ಹೊಸ ದೇಹವನ್ನು ಪುನಃ ಪಡೆಯುವ ಪುರುಷನೇ, ನೀನು ಕೂಡ ಈಗ (ಉತ್ತಮ ಸ್ಥಿತಿಯಲ್ಲಿ) ಬಂದಿರುವೆ. ಹೇ ಪೂರ್ಣಾರೋಗ್ಯಯುಕ್ತನೇ, ನಿನ್ನ ನೇತ್ರಾದಿ ಎಲ್ಲ ಇಂದ್ರಿಯಗಳು ಅಲ್ಲದೇ ನಿನ್ನ ಭವಿಷ್ಯದ ಬದುಕು ಎಲ್ಲವೂ ಪೂರ್ಣವಾಗಿ ನನಗೆ ಗೊತ್ತಿದೆ."
ವರ ಅಥವಾ ಆಶೀರ್ವಾದವನ್ನು ಕೊಡಲು, ಸ್ಥಾನ, ಅಧಿಕಾರ, ಜ್ಞಾನಗಳಿಂದ ಉಂಟಾದ ಜ್ಯೇಷ್ಠತೆ, ಶ್ರೇಷ್ಠತೆ ಆವಶ್ಯಕ. ಸದಿಚ್ಛೆಯನ್ನು ಪ್ರಕಟಿಸಲು ಇಂಥ ಯಾವುದರ ಅವಶ್ಯಕತೆಯಿಲ್ಲ. ಕಿರಿಯನು ಹಿರಿಯನಿಗೆ ವರ ಅಥವಾ ಆಶೀರ್ವಾದವನ್ನು ಕೊಡುವಂತಿಲ್ಲ. ವರವೆಂದು ಆಡಿದ ನುಡಿಗಳ ಪರಿಣಾಮಗಳು ನಿಶ್ಚಿತವಿದ್ದು ಅವುಗಳಲ್ಲಿ ತಪ್ಪಾಗುವುದಿಲ್ಲ. ಆಶೀರ್ವಾದವು ನಿಜವಾಗಬಹುದು ಇಲ್ಲವೇ ಸುಳ್ಳಾಗಬಹುದು; ಒಂದು ಸಮಯ ಪರಿಣಾಮಕಾರಕವಾದರೆ ಅದು ಕೇವಲ ಯೋಗಾಯೋಗ ಅಥವಾ ಕಾಕತಾಲೀಯ ನ್ಯಾಯವೆನ್ನಬಹುದು. ಆಶೀರ್ವಾದವು ಫಲಪ್ರದವಾಗುವ ಬಗ್ಗೆ ದಿಟ, ಕೊಡುವವನಿಗೂ ಇರುವುದಿಲ್ಲ, ಆಶೀರ್ವಾದವನ್ನು ಪಡೆದವನಿಗೂ ಇರುವುದಿಲ್ಲ. ವರ ಮತ್ತು ಆಶೀರ್ವಾದಗಳಲ್ಲಿಯ ಭೇದ ಕಾಲಿದಾಸನಿಗೆ ಅಭಿಪ್ರೇತವಿತ್ತು. ಕಾಶ್ಯಪನಿಗೆ ನಮಸ್ಕರಿಸಲು
ಬಂದ ಶಕುಂತಲೆಗೆ:


           ಯಯಾತಿರಿವ ಶರ್ಮಿಷ್ಠಾ ಭರ್ತುರ್ಬಹುಮತಾ ಭವ |
           ಸುತಂ ತ್ವಮಪಿ ಸಮ್ರಾಜಂ ಸೇವ ಪೂರುಮವಾಪ್ನುಹಿ ‖

“ಯಯಾತಿಗೆ ಶರ್ಮಿಷ್ಠೆ ಹೇಗೋ ಅದರಂತೆ ನೀನು ನಿನ್ನ ಪತಿಗೆ ಪ್ರಿಯಳಾಗು! ಪುರುವಿನಂತಹ ಸಮ್ರಾಟಪುತ್ರನು ನಿನಗೆ ಜನಿಸಲಿ!” ಎಂದಿದ್ದಾನೆ. ಈ ಶಬ್ದಗಳು ಆಶೀರ್ವಾದದ ನುಡಿಗಳಾಗಿದ್ದರೂ ಕಾಶ್ಯಪ ಋಷಿಗಳ ಆಶೀರ್ವಾದವಾದ್ದರಿಂದ ವರದಷ್ಟೇ ಗುಣಮಟ್ಟದವೆಂದು ಗೌತಮಿಗೆ ಭರವಸೆ ಇತ್ತು. 'ಭಗವನ್ವರಃ ಖಲ್ವೇಷಃ | ನಾಶೀಃ | ಪೂಜ್ಯರೇ, ಇದು ವರವೇ ಸರಿ; ಆಶೀರ್ವಾದವಲ್ಲ೪೭ ಎಂದು ಗೌತಮಿಯು ನುಡಿದಳು. ಆಶೀರ್ವಾದ ಮತ್ತು ವರದಲ್ಲಿ ಸೂಕ್ಷ್ಮಭೇದವಿದೆ. ಬ್ರಹ್ಮಣರು ಅಥವಾ ಪುರೋಹಿತರು ತಮ್ಮ ಯಜಮಾನರಿಗೆ, ಹಿರಿಯರು ತಮ್ಮ

——————
೪೭. ಶಾಕುಂತಲ ನಾಟಕ, ಅಂಕ ೪/೭.