ಪರಿಚ್ಛೇದ ೨ ೯ ೩ ಬಾಣಭಟ್ಟನಿಗೆ ಇಂತಹ ಪಾಂಡಿತ್ಯ ಬರುವುದಕ್ಕೆ, ಅವನು ಏಕಾಗ್ರಚಿತ್ರ ದಿಂದ ಅನೇಕ ಸಕ್ಕೋತ್ರಮಗ್ರಂಧಗಳನ್ನು ಕೇಳಿ ಚಿಂತಿಸಿ ಗಟ್ಟಿ ಮಾಡಿ ಸ್ವಾಧೀನಪಡಿಸಿಕೊಂಡುದುದೇ ಮುಖ್ಯ ಕಾರಣವು ; ಇದರಿಂದಲೇ, ಸರ ಸ್ವತಿಯು ಇವನಿಗೆ ಪ್ರಸನ್ನಳಾದಳು. ಇವನ ಪ್ರಯತ್ನ ನಿಲ್ಲದೆ ಸರಸ್ವತಿಯು ಇವನಿಗೆ ಸ್ವಾಧೀನಳಾಗಲಿಲ್ಲ. ಈ ರೀತಿಯಲ್ಲಿ, ವಿದ್ಯಾರ್ಜನೆಗೋಸ್ಕರ ತಪಸ್ಸು ಮಾಡತಕ್ಕವರಿಗೆ, ಸರಸ್ವತಿಯ ಲಕ್ಷ್ಮಿಯೂ ಇಬ್ಬರೂ ಮನಃ ಪೂರ್ವಕವಾಗಿ ದಾಸಿಯರಾಗಿರುವರು. ಮಹಮ್ಮದೀಯರಲ್ಲಿ ಕೆಲವು ಗಾದೆಗಳಿರುವುವು, ಅವುಗಳಲ್ಲೊಂದು ಹೇಳುವುದೇನೆಂದರೆ .-ಉದ್ಯೋಗಿಯನ್ನು ಒಂದು ವಿಶಾಚವು ಹಿಡಿದಿರು ವದು , ಅನುದ್ಯೋಗಿಯನ್ನು ಸಾವಿರಾರು ಪಿಶಾಚಿಗಳು ಹಿಡಿದಿರುವುವು. ಇದರ ಅರ್ಧವನ್ನು ಸರಿಯಾಗಿ ತಿಳಿದು ಕೊಳ್ಳಬೇಕು, ಉದ್ಯೋಗಿಯನ್ನು ಉತ್ಸಾಹರೂಪವಾದ ಪಿತಾಚವು ಹಿಡಿಯುವದು. ಈ ಉತ್ಸಾಹದಿಂದ ಪ್ರೇರಿತನಾಗಿ, ಇವನು ಹಗಲೂ ರಾತ್ರಿಯ ಅವಿಚ್ಛಿನ್ನ ವಾಗಿ ಹಿಡಿದ ಕೆಲಸದ ಫಲ ಪ್ರಾಪ್ತಿಯಾಗುವವರೆಗೂ ಕೆಲಸಮಾಡುವನು. ಕೆಲಸ ಮಾಡುವಾಗ್ಗೆ ಉತ್ಸಾಹಪರವಶನಾಗಿರುವನು. ಕೆಲಸವು ಪೂರಯಿಸಿದ ಮೇಲೆ, ಅದರ ಫಲಗಳಿಂದ ತೃಪ್ತಿ ಹೊಂದಿ ಸಂತೋಷಪಡುವನು. ಉದ್ಯೋಗಮಾಡುವಾಗಲೂ, ಉದ್ಯೋಗ ಪೂರಯಿಸಿದಮೇಲೂ, ಇವನಿಗೆ ಸಂತೋಷವೂ ಪ್ರಯೋಜನವೂ ಅಭ್ಯವಾಗುವುವು, ಸೋಮಾರಿಯಾದ ಮನುಷ್ಯನಿಗೆ ಉತ್ಸಾಹ ಉದ್ಯೋಗದ ಫಲ ಇವೆರಡೂ ದೊರೆಯುವುದಿಲ್ಲ. ನಿಮಿಷಕ್ಕೊಂದು ಸಂಕಲ್ಪವನ್ನು ಮಾಡಿ, ಅದು ಸರಿಯಲ್ಲವೆಂದು ಬದ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.