ಪರಿಚ್ಛೇದ ೧ ನಾವೇ ಪರಿಶೀಲಿಸಿಕೊಂಡರೆ, ನಾವು ಮಾಡಿದ ತಪ್ಪುಗಳು ನಮಗೆ ಗೊತ್ತಾಗದಿರುವುದಿಲ್ಲ. « ಇಂತಹ ಸಂದರ್ಭದಲ್ಲಿ ನಾವು ತಪ್ಪು ಮಾಡಿ ದೆವು ; ಇಂತಹ ನಮಯವನ್ನು ವ್ಯರ್ಥವಾಗಿ ಕಳೆದುಕೊಂಡೆವು ; ಇಲ್ಲಿ ಅಪಾರ್ಥಗಳನ್ನು ಮಾಡಿಕೊಂಡೆವು , ಇಂತಹ ಕಡೆಯಲ್ಲಿ ದುರಭಿಮಾನ ದಿಂದ ಅನ್ಯಾಯವನ್ನು ಮಾಡಿದೆವು. ಎಂಬುದು, ನಮಗೇ ಗೊತ್ತಾಗು ವುದು, ಹಿಂದೆ ಕಳೆದುಹೋದ ಕಾಲವು ಪುನಃ ಬರುವುದಿಲ್ಲ, ಮುಂದಣ ಕಾಲವು ಇನ್ನೂ ಬಂದಿರುವುದಿಲ್ಲ. ವರ್ತಮಾನಕಾಲಕ್ಕೆ ಮಾತ್ರ ನಾವು ಅಧಿಕಾರಿಗಳಾಗಿರುತ್ತೇನೆ ಈ ಕಾಲದಲ್ಲಿ ನಾವು ಯಾವ ರೀತಿಯಲ್ಲಿ ನಡೆ ದರೆ ಇದ್ಯಾ ರ್ಧಪ್ರಾಪ್ತಿಗೆ ಅವಕಾಶವಾಗುವುದೋ, ಅದನ್ನು ಉಪದೇಶ ಮಾಡತಕ್ಕೆ ಗುರುಗಳೇ ಆಗಲಿ- ಅಧವಾ ಪುಸ್ತಕಗಳೇ ಆಗಲಿ ದೊರೆತರೆ, ಅವುಗಳ ಸಹಾಯದಿಂದ ನಿರ್ವಿಘ್ನವಾಗಿ ನಾವು ಇಷ್ಟಾರ್ಧಸಿದ್ದಿಯನ್ನು ಹೊಂದಬಹುದು ಇಷ್ಟಾರ್ಧಪ್ರಾಪ್ತಿಗೆ ಸಾಧಕವಾದ ಹಿತೋಪದೇಶ ಗರ್ಭತಗಳಾದ ಪ್ರಸ್ತಕಗಳೂ ಇವಗ ನನ್ನು ತೋರಿಸುವ ಗುರುಗಳೂ ದೊರೆಯುವುದು, ಬಹಳ ಕಷ್ಟ ಪುಣ್ಯವಂತರಿಗೆ ಮಾತ್ರವೇ ಈ ಲಾಭ ವ್ರಂಟಾಗು ವುದು. ಅದು ಕಾರಣ, ಸರ್ವರಿಗೂ ಅವರವರ ಇಷ್ಟಾರ್ಥ ಪ್ರಾಪ್ತಿಗೆ ಸಾಧಕವಾಗುವಂತೆ ಮಾರ್ಗದರ್ಶನವನ್ನು ಮಾಡುವ ಹಿತೋ ಕಿಗಳುಳ್ಳ ಒಂದು ಗ್ರಂಧವನ್ನು ರಚಿಸುವುದು ಅತ್ಯಂತ ಆವಶ್ಯಕವಾಗಿರು ವುದು, ಈ ವುದ್ದೇಶದಿಂದಲೇ ಈ ಗ್ರಂಧವು ರಚಿಸಲ್ಪಟ್ಟಿರುವುದು. ಲೋಕದಲ್ಲಿ ಸಕಲರೂ, ತಾವು ವಿದ್ಯಾವಂತರಾಗಿಯ ಆಯುರಾ ರೋಗೈಶ್ವರ್ಯಗಳುಳ್ಳವರಾಗಿಯೂ ಆಗಬೇಕೆಂದು ಅಪೇಕ್ಷಿಸುವರು.
ಪುಟ:ವಿದ್ಯಾರ್ಥಿ ಕರಭೂಷಣ.djvu/೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.