ಪರಿಚ್ಛೇದ ೨ ೧೧೫ ವರು, ಅಸತ್ಕಾವ್ಯಗಳುಳ್ಳ ಪುಸ್ತಕ ಭಂಡಾರಗಳೂ ಕೂಡ ಸದಿಷ್ಟಾರ್ಧ ಸಿದ್ದಿಗೆ ಕುಠಾರಪ್ರಾಯವಾದ ವಿಷದ ಚಿಲುಮೆಯೆಂದು ಧಾರಾಳವಾಗಿ ಹೇಳಬಹುದು ಸರ್ಕಾರದವರೂ, ಪಾರಕರೂ, ವಿದ್ಯಾರ್ಥಿಗಳ ಹಿತಚಿಂತ ಕರೂ, ದೇಶದ ಏಳಿಗೆಯಲ್ಲಿ ಆಸಕ್ತರಾದವರೂ, ನಿರ್ದುಷ್ಟವಾದ ಸೌಖ್ಯ ವನ್ನೂ ಶ್ರೇಯಸ್ಸನ್ನೂ ಅಪೇಕ್ಷಿಸತಕ್ಕ ವಿದ್ಯಾರ್ಥಿಗಳೂ ಕೂಡ, ಸತ್ಯಕ್ಕೂ ಧರಕ್ಕೂ ತಪ್ಪಿ ನಡೆಯುವಂತೆ ಮಾಡತಕ್ಕ ಪುಸ್ತಕಗಳನ್ನು ಎಂದಿಗೂ ಅವಲೋಕಿಸಬಾರದು ; ಅವುಗಳನ್ನೆಂದಿಗೂ ತಮ್ಮ ಭಂಡಾರಕ್ಕೆ ಸೇರಿಸ ಬಾರದು, ಹಾಗೆ ಮಾಡಿದರೆ, ವಿಷವು ಹೇಗೆ ದೇಹವಿನಾಶಹೇತುವಾಗು ವುದೋ, ಹಾಗೆ ಇಹಪರಗಳ ನಷ್ಟಕ್ಕೆ ದುಷ್ಟಗ್ರಂಧಗಳು ಸಾಧಕಗಳಾಗು ವುವು, ದುಷ್ಟಗ್ರಂಧಗಳು ಹೇಗೋ, ಹಾಗೆ ದುಷ್ಟರ ಸಹವಾಸವೂ ಕೂಡ ಅಪ್ರತಿಹತವಾದ ವಿಷದ ಚಿಲುಮೆಯಾಗಿ ಪರಿಣಮಿಸುವುದು, ಶ್ರೇಯ ಸೃನ್ನು ಅಪೇಕ್ಷಿಸತಕ್ಕವರು, ಮನೋವಾಕ್ಕರಗಳಲ್ಲಿ ಧರವನ್ನವಲಂಬಿಸಿ, ಅಧರಕ್ಕೆ ಸಾಧಕವಾದ ಗ್ರಂಧಗಳನ್ನೂ ಸಹವಾಸಗಳನ್ನೂ ಪರಿತ್ಯಾಗ ಮಾಡುವುದರಲ್ಲಿ ಸ್ಥಿರಸಂಕಲ್ಪರಾಗಿರಬೇಕು. ವಿದ್ಯಾರ್ಧಿಗಳು ಕೆಡುವುದಕ್ಕೆ ಕಾರಣಗಳು ಅನೇಕವಾಗಿರುವುವು. ಚುಟ್ಟಾ ಬೀಡಿ ನಸ್ಯ ಮೊದಲಾದುವುಗಳ ಉಪಯೋಗವು, ಈ ದುರಭ್ಯಾಸ ಗಳಲ್ಲಿ ಮೊದಲನೆಯದಾಗಿರುವುದು ಇದರ ಉಪಯೋಗದಿಂದ ಆಗತಕ್ಕ ಅನರ್ಧಗಳನ್ನು, ವಿದ್ಯಾರ್ಥಿಗಳು ಸಾವಧಾನವಾಗಿ ಪರಾಲೋಚಿಸಬೇಕು. ಹೊಗೇಸೊಪ್ಪನ್ನು ಪಯೋಗಿಸುವುದರಿಂದ, ಕೆಲವು ರೋಗಗಳು ನಿವಾರಣೆ ಯಾಗುವುದುಂಟು. ವೈದ್ಯರು ಅದನ್ನು ಔಷಧವಾಗಿ ಉಪಯೋಗಿಸ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.