೧೧೬ ಕರಭೂಷಣ MMmmmmmmM MMwwwmmmmmmmmmmmmmmmmmmmmmmmM ಬೇಕೆಂದು ನಿಯಮಿಸಿದರೆ, ಆಗ ಕೆಲವುವಿಧವಾದ ರೋಗದ ಬೀಜಗಳನ್ನೂ ಕ್ರಿಮಿಗಳನ್ನೂ ಕೊಲ್ಲುವುದಕ್ಕೋಸ್ಕರ ಹೊಗೆಯಸೊಪ್ಪನ್ನು ಪಯೋಗಿನ ಬೇಕು, ಅಂಧ ರೋಗಗಳಿಗೆ ಗುರಿಯಾಗದಿರತಕ್ಕ ವರು ಈ ವಿಷರೂಪ ವಾದ ಎಲೆಯನ್ನು ಪ್ರಯೋಗಿಸಿದರೆ, ಅದು ನಮ್ಮ ದೇಹಕ್ಕೆ ವಿಷವಾಗಿ ಪರಿಣಮಿಸಿ, ಹೊಸ ರೋಗಗಳನ್ನು ಕಲ್ಪಿಸುವುದೇನೂ ಆಶ್ಚರವಲ್ಲ, ಇದ ನ್ನುಪಯೋಗಿಸುವುದರಿಂದ, ಆರೋಗ್ಯಕ್ಕೆ ಮಾತ್ರವೇ ಅಲ್ಲದೆ, ಬುದ್ಧಿವಿಕಾ ಸಕ್ಕೂ ತುಂಬ ಪ್ರತಿಬಂಧಕವಾಗುವುದು ಸಿಗರೆಟ್ಟು ಸೇದತಕ್ಕವರ ಅವಸ್ಥೆ ಯನ್ನು ಪರೀಕ್ಷಿಸಬಹುದು, ರಾತ್ರಿ ವೇಳೆಯಲ್ಲಿ ಯಥೇಚ್ಛವಾಗಿ ಚುಟಾ ಸೇದಿ ಮಲಗಿಕೊಂಡವರು ಬೆಳಗ್ಗೆ ಎದ್ದ ಕೂಡಲೆ ಹೇಗಿರುತ್ತಾರೆ-ಪರೀಕ್ಷಿ ಸೋಣ, ಇವರ ಬಾಯಿ ಅಂಟಾಗಿರುತ್ತದೆ; ಬಾಯಲ್ಲಿ ದುರಂಧ ಹೊರಡು ಇದೆ , ಅನ್ನ ಕೋಶ ಕೆಟ್ಟು ಹೋಗಿರುತ್ತದೆ, ಚಟುವಟಿಕೆಯಿರುವುದಿಲ್ಲ. ಆಕಳಿಕೆ ಬರುತ್ತಲೇ ಇರುತ್ತದೆ. ಇದನ್ನು ಸೇವಿಸತಕ್ಕವರಿಗೆ, ಪಾನಾ ಸಕ್ತಿ ಹೆಚ್ಚುತ್ತದೆ. ವಿಶೇಷವಾಗಿ ಕುಟ್ಟಾ ಸೇದತಕ್ಕವರ ಕಣ್ಣುಗಳು ಕೆಟ್ಟು ಹೋಗುತ್ತದೆ , ಆYಾಣಶಕ್ತಿ ಮಂದವಾಗುತ್ತದೆ ; ಮೆದುಳಿನ ಧಾರಣಾಶಕ್ತಿ ಹೋಗುತ್ತದೆ. ಶ್ವಾಸಕೋಶಗಳ ಬಲ ಕಡಮೆಯಾಗು ಇದೆ ಚುಟ್ಟಾಗಳು ಮಾತ್ರವೇ ಇಂಧ ಅನರ್ಧಗಳಿಗೆ ಕಾರಣವೆಂದು ತಿಳಿಯಕೂಡದು , ಹೊಗೆಯಸೊಪ್ಪನ್ನು ಯಾವ ರೂಪದಲ್ಲುಪಯೋಗಿಸಿ ದಾಗ್ಯೂ, ಅದು ಅನರ್ಧಕ್ಕೆ ಕಾರಣವಾಗುವುದೆಂದು ತಿಳಿಯಬೇಕು. ಕೆಲವು ರೋಗಗಳಿಗೆ ಔಷಧವಾಗಿ ವೈದ್ಯರಿಂದ ಕೊಡಲ್ಪಟ್ಟರೆ ಅದನ್ನು ಪ ಯೋಗಿಸಬೇಕೇ ಹೊರತು, ಇತರವಿಧದಲ್ಲುವಯೋಗಿಸಕೂಡದು, ಹಾಗೆ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.