೧೧೮ ವಿದ್ಯಾರ್ಥಿ ಕರಭೂಷಣ ಕೊಂಡು ಯಾವ ಕೆಲಸದಮೇಲೆ ಹೋದಾಗ್ಯೂ, ಅಂಧವರಿಗೆ ಎಲ್ಲ ಸ್ಥಳ ಗಳಿಗೂ ಪ್ರವೇಶ ದೊರೆಯುವುದು ; ಅನೇಕ ಸಂದರ್ಭಗಳಲ್ಲಿ ಕಾರ್ ಸಿದ್ದಿ ಯ ಆಗುವುದು, ಒಳ್ಳೆಯ ಉಡುಗೆಗಳನ್ನು ಹಾಕಿಕೊಂಡು ಬಹಳ ವಿಜೃಂಭಣೆಯಿಂದ ಬರತಕ್ಕ ಭಿಕ್ಷುಕನಿಗೂ ಕೂಡ, ಅವನ ವೇಷಕ್ಕನುರೂಪ ವಾದ ಭಿಕ್ಷೆ ಕೊಡಲ್ಪಡುವುದು, ಹರುಕು ಬಟ್ಟೆಗಳನ್ನು ಹಾಕಿ ಕೊಂಡು ಅಸಹ್ಯವಾದ ರೀತಿಯಲ್ಲಿ ಬರತಕ್ಕೆ ಭಿಕ್ಷುಕನು, ಧರ್ಮಕ್ಕೆ ವಿಶೇಷ ಪಾತ್ರ ನಾಗಿದ್ದಾಗ್ಯೂ, ಅವನ ಪಾತ್ರತೆಗೆ ತಕ್ಕ ಭಿಕ್ಷೆ ದೊರೆಯುವುದಿಲ್ಲ ಕಾರ್ ಸಿದ್ದಿ ಯ ಕೂಡ, ವೇಷಕ್ಕೂ ಭಾಷೆಗೂ ಅನುಸಾರವಾಗಿರುವುದು ಹೀಗೆ ಉಡುಗೆಯು ಇಷ್ಟಾರ್ಧಸಿದ್ದಿಗೆ ಅತ್ಯಂತಾವಶ್ಯಕವಾಗಿದ್ದಾಗ್ಯೂ, ಅದು ವಿಶೇಷ ಕಾಂತಿಯುಳ್ಳುದಾಗಿಯೂ ಇರಬಾರದು. ನಿರ್ಮಲವಾಗಿಯೂ ಶುಭ್ರವಾಗಿ ಇದ್ದರೆ ಸಾಕಾಗಿರುತ್ತದೆ. ಉಡುಗೆಯಲ್ಲಿ ವಿಶೇಷ ವಿಜೃಂ ಭಣೆಯನ್ನು ಮಾಡತಕ್ಕವರು, ಇವರು ದೊಡ್ಮನುಷ್ಯರಹುದೋ ಅಲ್ಲವೋ ಎಂಬ ಸಂದೇಹಕ್ಕೆ ಪಾತ್ರರಾಗುವುದೂ ಉಂಟು. ಆದುದರಿಂದ, ವೇಷದಲ್ಲಿ ವಿಶೇಷವಿಜೃಂಭಣೆಯು, ಕಾಠ್ಯಸಿದ್ಧಿಗೆ ಹೆಚ್ಚಾಗಿ ಸಹಕಾರಿ ಯಾಗಲಾರದು. ಯಾರಲ್ಲಿ ನಾವು ಕಾಶ್ಯಾರ್ಧಿಗಳಾಗಿ ಹೋಗುತ್ತೇವೋಅವರ ಉಡುಗೆಗಳಿಗಿಂತಲೂ ಹೆಚ್ಚಾದ ಬೆಲೆಯ ಕಾಂತಿಯ ಉಳ್ಳ ಉಡು ಗೆಗಳನ್ನು ಹಾಕಿಕೊಂಡು ಅವರೆದುರಿಗೆ ವಿಜೃಂಭಿಸಿದರೆ, ಕೆಲವು ಸಂದರ್ಭ ಗಳಲ್ಲಿ ಅವರ ತಿರಸ್ಕಾರಕ್ಕೆ ಪಾತ್ರರಾಗುವ ಸಂಭವವೂ ಬರಬಹುದು. ಆದುದರಿಂದ, ಉಡುಗೆಗಳನ್ನು ಹಾಕಿಕೊಳ್ಳುವುದರಲ್ಲಿ ವಿಶೇಷ ವಿಜೃಂಭಣೆ ಯನ್ನು ಮಾಡಕೂಡದು. ಎಲ್ಲಾ ಸ್ತ್ರೀ ಪುರುಷರೂ, ತಮ್ಮ ಆಯತಿಗೆ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.