ಪರಿಚ್ಛೇದ ೨ ೧೧೭ ಒw ಉಪಯೋಗಿಸುವುದರಿಂದ, ನರಗಳು ದುರ್ಬಲವಾಗುವುವು ; ಗಂಟಲು ಒಣಗಿಹೋಗುವುದು , ಕುಡುಕತನಕ್ಕೆವಕಾಶವಾಗುವುದು ; ಶರೀರ ಕೆಡು ವುದು ; ಕ್ಷಯರೋಗವೂ ಬರುವುದು, ಇದರಿಂದುಂಟಾಗತಕ್ಕ ಅನರ್ಧ ಗಳನ್ನೆಲ್ಲ ಸಂಪೂರ್ಣ ವಾಗಿ ವಿವರಿಸುವುದಸಾಧ್ಯವು ಇದರ ಉಪಯೋಗ ದಿಂದ ದೇವರಿಗೆ ಸಮಾನನಾದ ಮನುಷ್ಯನೂ ಹಂದಿಗೆ ಸಮಾನನಾಗುವು ನೆಂದು ಒಬ್ಬ ಲೇಖಕನು ಬರೆದಿರುವನು. ಇದು ನಿಜವೆಂಬುದಕ್ಕೆ ಯಾವ ಸಂದೇಹವೂ ಇಲ್ಲ ಜನಗಳು ತಮ್ಮ ಉಡುಗೆಯ ಎಷಯದಲ್ಲಿ ಬಹಳ ಜಾಗರೂಕರಾ ಗಿರಬೇಕು, ಉಡುಗೆಗಳು ನಿರ್ಮಲವಾಗಿಯ ಶುಭ್ರವಾಗಿಯೂ ಇರ ಬೇಕು. ಕೂಡಿದಮಟ್ಟಿಗೂ ಒಳ್ಳೆಯ ಬಟ್ಟೆಗಳನ್ನು ಹಾಕಿ ಕೊಳ್ಳಬೇಕು. ಆ ಬಟ್ಟೆಗಳು, ಬಾಳಿಕೆಬರತಕ್ಕುವುಗಳಾಗಿಯೂ ಇರಬೇಕು ಕೆಲಸಮಾಡು ವಾಗ ಮನೆಯಲ್ಲಿರುವಾಗಲೂ ಹಾಕಿಕೊಳ್ಳತಕ್ಕ ಬಟ್ಟೆಗಳು ನಿರ್ಮಲವಾಗಿರಬೇಕು ಆದರೆ, ನೋಡುವುದಕ್ಕೆ ಲಕ್ಷಣವಾಗಿರಬೇಕೆಂದು, ಅದಕ್ಕೋಸ್ಕರ ಹೆಚ್ಚು ಖರ್ಚುಮಾಡಬಾರದು, ಹಳೆಯ ಉಡುಗೆಗಳನ್ನು ಮನೆಯಲ್ಲಿರುವಾಗ ಹಾಕಿಕೊಳ್ಳಬಹುದು, ಹೊರಗೆ ಹೋಗುವಾಗ್ಗೆ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳತಕ್ಕುದು ಅತ್ಯಂತಾವಶ್ಯಕ. ಪ್ರಾಯಕ ವಾಗಿ ಜನಗಳು ನಮ್ಮ ಉಡುಗೆಗಳನ್ನು ನೋಡಿ ನನ್ನ ಗಣ್ಯತೆಯನ್ನು ಗೊತ್ತುಮಾಡುವರು. ಸರಿಯಾದ ಉಡುಗೆಗಳನ್ನು ಹಾಕಿ ಕೊಳ್ಳದಿರತಕ್ಕ ವರ ಯೋಗ್ಯತೆಯು, ಪರಿಚಿತರಲ್ಲಿ ಗಣನೆಗೆ ಬರುವುದೇ ಹೊರತು, ಅಪರಿ ಚಿತರಲ್ಲಿ ಗಣನೆಗೆ ಬರುವುದಿಲ್ಲ, ಒಳ್ಳೆಯ ಉಡುಗೆಗಳನ್ನು ಹಾಕಿ ಸ.
ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.