ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುಚ್ಛೇದ ೨ ೧೩೬ ಮಾಡಿದರೂ, ನಿಸರ್ಗಜನ್ಯವಾಗಿಯ ಅಕೃತ್ರಿಮವಾಗಿಯೂ ಇರತಕ್ಕ ಸ್ನೇಹವು, ಕೇವಲಧರ್ಮಿಷ್ಟರಲ್ಲಿ ವಿನಾ ಇತರರಲ್ಲಿ ದೊರೆಯುವುದಿಲ್ಲ. ನಿಜವಾದ ಸ್ನೇಹಿತನು ದೊರೆಯುವುದು ಕಷ್ಟ, ಒಂದುವೇಳೆ ದೊರೆ ತಾಗ್ಯೂ, ಅಂಧ ಸ್ನೇಹವು ಶಾಶ್ವತವಾಗಿರುವಂತೆ ಮಾಡಿಕೊಳ್ಳುವುದು ಇನ್ನೂ ಕಷ್ಟ, ಸುಖವಾಗಿ ಲಬ್ಧವಾದ ಸ್ನೇಹವು ಸುಖವಾಗಿ ಹೋಗು ವುದೂ ಉಂಟು. ಆಪ್ತವಾದ ಸ್ನೇಹವನ್ನು ಮಾಡಿ ಕೊಳ್ಳುವುದಕ್ಕೆ ಮುಂದಕೆ, ಅಂಧ ಸ್ನೇಹಕ್ಕೆ ಉಪ್ಪಿಷ್ಟನಾದ ಮನುಷ್ಯನು ಅರ್ಹನೇ ಅಲ್ಲವೇ ಎಂಬುದನ್ನು ಪರೀಕ್ಷಿಸಬೆ ಕು. ನಂಬುಗೆಗೆ ಪಾತ್ರರಾದ ಹೊರತು, ಜನಗಳು ಆಸ್ತಸ್ನೇಹಿತರಾಗುವುದಕ್ಕೂ, ಒಬ್ಬರ ರಹ ಗಳನ್ನು ಮತ್ತೊ ಬ್ಬರು ತಿಳಿದುಕೊಳ್ಳುವುದಕ್ಕೂ ಅರ್ಹರಾಗುವುದಿಲ್ಲ ಸ್ನೇಹಿತರ ಗಣ ದೋಷ ಗಳಿಗೆ ಸ್ನೇಹಿತರೆಲ್ಲರೂ ಪರಸ್ಪರ ಉತ್ತರವಾದಿಗಳಾಗಬೇಕಾಗು ತದೆ. ಯಾರ ಸಹವಾಸದಲ್ಲಿ ನಾವು ಇರುತ್ತೇವೋ, ಅವರ ಗಣ ದೋಷಗಳೆಲ್ಲ ನಮ್ಮಲ್ಲೂ ಇರುವುವೆಂದು ಜನಗಳು ತಿಳಿದುಕೊಳ್ಳು ತಾರೆ ಮನೋವಾಕ್ಕರ್ಮಗಳಲ್ಲಿ ಧದಿಂದ ನಡೆಯತಕ್ಕ ವರ ಸಹ ವಾಸದಲ್ಲಿ ನಾವಿದ್ದರೆ, ನಾವು (ುಷರೆಂದು ಭಾವಿಸಲ್ಪಡುತ್ತೇವೆ. ಮರೋವಾಕ್ಕರ್ಮಗಳಲ್ಲಿ ಒಂದೊಂದು ವಿಧವಾಗಿದ್ದುಕೊಂಡು, ಸುಳ್ಳು ತಟವಟ ಮೋಸ ಅಭಕ್ಷ್ಯಭೋಜನ ಅಪೇಯಪಾನ ಅಗಮ್ಯಾಗಮನ ಮೊದಲಾದುವುಗಳಲ್ಲಿ ಮುಳುಗಿ ತೇಲುತಿರತಕ್ಕೆ ಮನುಷ್ಯರ ಸಹವಾಸದಲ್ಲಿ ನಾವಿದ್ದರೆ, ಈ ದೋಷಗಳೆಲ್ಲ ನಮ್ಮಲ್ಲಿಯೂ ಇರುವುವೆಂದು ಭಾವನೆ ಯು.ಟಾಗುತ್ತದೆ. ಹಾಗೆ ಉಂಟಾಗತಕ್ಕುದು ಆಶ್ಚರವಲ್ಲ. ಆ ದೋಷ Y) 18