೧೩೮ ವಿದ್ಯಾರ್ಥಿ ಕರಭೂಷಣ ಗಳು ನಮ್ಮಲ್ಲಿಲ್ಲದಿದ್ದರೆ, ಅಂಧವರ ಸಹವಾಸವು ಒಂದು ಕ್ಷಣವೂ ನಮಗೆ ರುಚಿಸುವುದಿಲ್ಲ. ಜನಗಳಲ್ಲಿ ಜಾತಿಭೇದಗಳು ಹುಟ್ಟುವುದಕ್ಕೆ ಈ ದೋಷ ಗಳೇ ಮುಖ್ಯ ಕಾರಣವು, ನಿಂದ್ಯವಾದ ಆಹಾರವಿಹಾರಗಳಲ್ಲಿ ಆಸಕ್ತ ರಾದವರಿಗೂ, ಅವುಗಳಲ್ಲಿ ಆಸಕ್ತರಾಗದಿರತಕ್ಕವರಿಗೂ, ಸಹವಾಸವೂ ಕೂಡ ಅಸಾಧ್ಯವಾಗುವುದು ; ಪರಸ್ಪರ ತಿರಸ್ಕಾರವೂ ಹುಟ್ಟುವುದು ; ತಿರಸ್ಕಾರವು ದ್ವೇಷವಾಗಿ ಪರಿಣಮಿಸುವುದು, ಜಾತಿದ್ವೇಷ ಮತದ್ವೇಷ ಗಳಿಗೆ ಇದೇ ಮುಖ್ಯ ಕಾರಣವು, ಸಜ್ಜನರಾಗಿಯ ಧರಿಷ್ಠರಾಗಿಯೂ ಇರತಕ್ಕವರ ಸ್ನೇಹವು, ಮರಣಾವಧಿ ಒಂದೇವಿಧವಾಗಿರುವುದು, ಧರ ಹೀನರಾಗಿಯ ದುರಾರ್ಗಪ್ರವೃತ್ತರಾಗಿಯೂ ಇರತಕ್ಕವರಿಗೂ ಸ್ನೇಹ ನಿರುವುದುಂಟು. ಈ ಸ್ನೇಹವು ಶಾಶ್ವತವಾದುದಲ್ಲ ; ಇದಕ್ಕೆ ಪ್ರತಿ ಬಂಧಕ ಬರುವುದುಂಟು. ಮಧುರವಾದ ವಾಕ್ಕಿನಿಂದ ವಿಶೇಷವಾಗಿ ಸ್ನೇಹಿತರಾಗುವರು. ಆದರೆ, ಅವರೆಲ್ಲರೂ ನಿಜವಾದ ಸ್ನೇಹಿತರಾಗಿ ಪರಿಣಮಿಸುವುದಿಲ್ಲ, ಸಾವಿರಜನರಲ್ಲಿ ಒಬ್ಬನಾದರೂ ಆಪ್ತ ಸ್ನೇಹಿತನು ಸಿಕ್ಕುವುದು ಕಷ್ಟ.. ಕಷ್ಟ ಕಾಲದಲ್ಲಿ ಸ್ನೇಹದ ಸ್ವಭಾವ ಗೊತ್ತಾ ಗುವುದು. ಡೇರ್ಮ ಮತ್ತು ಸಿಧಿಯಾಸ್ ಎಂಬ ಇಬ್ಬರು ಸ್ನೇಹಿತರು, ಸಿಸಿಲೀ ದ್ವೀಪದಲ್ಲಿದ್ದರು. ಇವರ ಕಾಲದಲ್ಲಿ, ಡಯೋನಿಸೆಸ್ ಎಂಬ ಹೆಸರುಳ್ಳ ನಿರಂಕುಶಪ್ರವರ್ತಕನಾದ ಒಬ್ಬ ದೊರೆಯು ಆ ದ್ವೀಪದಲ್ಲಿ ಪ್ರಭುತ್ವಮಾ ಡುತ್ತಿದ್ದನು. ಈ ಸ್ನೇಹಿತರಿಬ್ಬರೂ ಧರ್ಮಮಾರ್ಗೈಕಪರಾಯಣರಾಗಿ ದ್ದರು. ಇವರಿಬ್ಬರೂ, ಮನೋವಾಕ್ಕರ್ಮಗಳಲ್ಲಿಯೂ ಅಧರ ಪ್ರವರ್ತನೆಗೆ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.