೧೬೨ ವಿದ್ಯಾರ್ಧಿ ಕರಭೂಷಣ ವಿದ್ಯಾರ್ಥಿಗಳು, ಆಹಾರ ವಿಹಾರಗಳಲ್ಲಿ ಬಹಳ ಕ್ಯಸ್ತವಾಗಿರ ಬೇಕು, ಮಿತಿಮಿಾರಿ ಭೋಜನಮಾಡು ವುದರಿಂದಲೂ, ಅಭಕ್ಷ್ಯಭೋಜನ ಗಳಿಂದಲೂ, ಅಪೇಯಪಾನಗಳಿಂದಲೂ, ಅಗಮ್ಯಾಗಮನಗಳಿಂದಲೂ, ದಿನಕ್ಕೆ ಏಳೆಂಟು ಘಂಟೆ ನಿದ್ರೆಗೆ ಅವಕಾಶ ಸಿಕ್ಕದಂತೆ ನಾಟಕ ಮೊದ ಲಾದ ಆಟಗಳಿಗೆ ಅವಕಾಶ ಕೊಡುವುದರಿಂದಲೂ, ತಮ್ಮ ಅಭ್ಯಾಸದ ಪಾಠಗಳಿಗೂ ಅನಘವಾದ ಚಿಂತನೆಗೂ ಅವಕಾಶವನ್ನು ತಪ್ಪಿಸಿಕೊಂಡು, ತಮ್ಮ ಶ್ರೇಯಸ್ಸಿಗೆ ವಿಘ್ರ ಬರುವಂತೆ ಮಾಡಿ ಕೊಳ್ಳುತ್ತಾರೆ. ನಿರ್ವಿವ್ಯ ವಾಗಿ ನಡೆಯತಕ್ಕ ಕೆಲಸವು ಸಮರ್ಪಕವಾಗಿ ನಡೆಯುವುದು, ಒಂದು ದಿವಸ ವಿಪ್ಪಕ್ಕೆ ಅವಕಾಶವನ್ನು ಕೊಟ್ಟರೆ, ಅದು ಪುನಃ ಕ್ರಮವಾದ ಸ್ಥಿತಿಗೆ ಬರುವುದಕ್ಕೆ ಕನಿಷ್ಠ ಪಕ್ಷ ನಾಲ್ಕು ದಿವಸಗಳು ಹಿಡಿಯುವುವು ಯಾವ ವಿದ್ಯಾರ್ಥಿಗಳು ವಿಘ್ರ ಕ್ಕೆ ಒಂದು ನಿಮಿಷವೂ ಅವಕಾಶ ಕೊಡದೆ ತಮ್ಮ ವ್ಯಾಸಂಗಗಳನ್ನು ಸರಿಯಾಗಿ ಮಾಡುವರೋ, ಅವರು ಹದಿನೆಂಟು ಇಪ್ಪತ್ತು ವಯಸ್ಸಾಗುವುದರೊಳಗಾಗಿ ವ್ಯಾಸಂಗದ ಪರಾಕಾಷ್ಠ ದತೆ ಯನ್ನು ಹೊಂದಿ, ಪರಿಣತ ಪಂಡಿತರಾಗಿ, ಗೃಹಸ್ಥಾಶ್ರಮವನ್ನು ವಹಿಸಿ, ಸಂಸಾರಿಗಳಾಗಿದ್ದು ಗೊಂಡು, ತಾವು ಆರ್ಜಿಸಿದ ಪಾಂಡಿತ್ಯದ ಫಲವನ್ನನು ಭವಿಸುವುದಕ್ಕೆ ಸಮರ್ಥರಾಗುತ್ತಾರೆ, ನಿರ್ವಿಘ್ನವಾಗಿ ವ್ಯಾಸಂಗಮಾಡು ವುದಕ್ಕೆ ಆವಶ್ಯಕವಾದ ಮನಸ್ಟ್ರವನ್ನು ಸಂಪಾದಿಸಿಕೊಳ್ಳುವುದಕ್ಕೆ ಅನರ್ಹರಾದವರು, ಇಪ್ಪತ್ತು ಮೂವತ್ತು ವಯಸ್ಸಾದಾಗ ಪರೀಕ್ಷೆ ಗಳಲ್ಲಿ ಸರಿಯಾಗಿ ತೇರ್ಗಡೆಯಾಗದೆ ಭಗ್ನಮನೋರಧರಾಗಿ, ಸುಖವಾಗಿ ಕುಟುಂಬಭರಣವನ್ನು ಮಾಡುವುದಕ್ಕೆ ಶಕ್ತಿಯಿಲ್ಲದೆ, ಬಹಳ ಕ್ಷೇಶಕ್ಕೆ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.