ಪರಿಚ್ಛೇದ ೩ ೧೬೩ ಗುರಿಯಾಗುವರು, ಕೆಟ್ಟ ಮೇಲೆ, ಇದು ಸ್ವಯಂಕೃತಾಪರಾಧವೆಂದು ತಿಳಿದುಕೊಂಡು ವ್ಯಸನಪಡುವರು, ಕೆಟ್ಟ ಮೇಲೆ ಬಂದ ಬುದ್ದಿಯು ಪ್ರಯೋಜನಕಾರಿಯಾಗುವುದು ಬಹಳ ಅಪೂರೈ, ವಿಘ್ನಗಳಿಗೆ ಅಧೀನ ರಾಗಿ, ವ್ಯಾಸಂಗವನ್ನು ಕೆಡಿಸಿಕೊಂಡು, ಪರೀಕ್ಷೆಗಳಲ್ಲಿ ತೇರ್ಗಡೆಯಾಗದೆ, ಉದರಪೋಷಣೆಗೆ ಸಾಧ್ಯವಾದ ಯಾವ ವಿದ್ಯೆ ಗಳಯ ಕಲೆಗಳಲ್ಲಿಯ ಸರಿಯಾದ ಯೋಗ್ಯತೆಯನ್ನು ಸಂಪಾದಿಸದೆ ವಿವಾಹವನ್ನು ಮಾಡಿ ಕೊಂಡು, ಸಂಸಾರಿಗಳಾಗಿ, ಕುಟುಂಬಭರಣವನ್ನು ಮಾಡುವುದಕ್ಕೆ ಶಕ್ತಿ ಯಿಲ್ಲದೆ, ಪರಾಧೀನರಾಗಿ ಕ್ಷೌಶಪಡತಕ್ಕವರು, ನೂರಕ್ಕೆ ಎಪ್ಪತ್ತನ್ನು ಜನಗಳಿಗೆ ಕಡಿಮೆಯಿಲ್ಲದೆ ಇರುತ್ತಾರೆ. ತಮ್ಮ ವ್ಯಾಸಂಗದಲ್ಲಿ ನಿರತ ರಾಗಿ ವ್ಯಾಸಂಗಕ್ಕೆ ಉಂಟಾದ ಪ್ರತಿಬಂಧಕಗಳಿಗೆ ಒಳಗಾಗದೆ ಸ್ಪಿರಸಂಕ ಲ್ಪದಿಂದ ವ್ಯಾಸಂಗಮಾಡಿದ್ದರೆ, ಅವರಿಗೆ ಇಂಧ ಅನರ್ಧಕ್ಕೆ ಅವಕಾಶವಾ ಗುತ್ತಿರಲಿಲ್ಲ. ಅಪ್ರತಿಹತವಾದ ವಿಘ್ನಗಳು ಬರುವುದು ಅವೂ ; ಸೈರವುಳ್ಳವರು ಗೆಲ್ಲಬಹುದಾದ ಎಮ್ಮಗಳೇ ವಿಶೇಷವಾಗಿ ಬರುತ್ತವೆ. ಅಂಧವುಗಳನ್ನು ಗೆಲ್ಲದವರು, ಪ್ರಸಂಚದಲ್ಲಿ ಲಾಭಕರವಾದ ಯಾವ ಕೆಲಸ ವನ್ನೂ ಮಾಡಲಾರರು, ಅವರಿಗೆ ದಾರಿದ್ರವೆಂದಿಗೂ ತಪ್ಪುವುದಿಲ್ಲ. ವಿಷಯಾಂತರಗಳಿಗೆ ಮನಸ್ಸನ್ನು ಕೊಡದೆ, ಲಾಭಕರವಾದ ವ್ಯಾಸಂಗಕ್ಕೆ ದಿನಕ್ಕೆ ಎಂಟು ಘಂಟೆಗಳಾದರೂ ಕೊಡಬೇಕು, ಹಾಗೆ ಕೊಡತಕ್ಕ ಎರು, ಸಕಲವಾದ ಇಷ್ಟಾರ್ಥಗಳನ್ನೂ ಪಡೆಯುವರು. ಅಂಧ ವ್ಯಾಸಂಗಕ್ಕೆ ಉಂಟಾಗತಕ್ಕ ವಿಘ್ನ ಗಳಿಗೆ ಅಧೀನರಾಗತಕ್ಕವರು, ಎಂದಿಗೂ ದಾರಿದ್ರ, ದಿಂದ ವಿಮೋಚನೆಯನ್ನು ಹೊಂದುವುದಿಲ್ಲ. ವ್ಯಾಸಂಗ ಮೊದಲಾದುವು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.