ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ವಿದ್ಯಾರ್ಥಿ ಕರಭೂಷಣ ಗಳಿಗೆ ಕಾಲವನ್ನು ಕ್ರೈಸ್ತಮಾಡಿ, ಹಾಗೆ ಕ್ರೈಸ್ತವಾದ ಕಾಲಗಳಿಗೆ ಯಾವ ವಿಘ್ನ ಬಂದಾಗ ಅದನ್ನು ಜಯಿಸಿ ಕೆಲಸಮಾಡತಕ್ಕವರಿಗೇ ಇಪ್ಯಾರ್ಧಪ್ರಾಪ್ತಿಯಾಗುವುದು ; ಉಳಿದವರ ಇಷ್ಕಾರ್ಧವೆಂದಿಗೂ ಕೈಗೂಡುವುದಿಲ್ಲ. ಅನೇಕ ಜನಗಳಿಗೆ, ವಿಶ್ರಾಂತಿಯನ್ನು ಹೊಂದುವ ವಿಧಾನಗಳೇ ಗೊತ್ತಿಲ್ಲ ; ಎರಡು ಮೂರು ಗಂಟೆಗಳು ವ್ಯಾಸಂಗಮಾಡಿ ಬೇಸರಿಕೆಯನ್ನು ಹೊಂದುವರು. ಆ ಕ್ಷಣದಲ್ಲಿಯೇ ಪುಸ್ತಕವನ್ನು ಬಿಸುಟು, ನಿರುದ್ಯೋ ಗಿಗಳಾಗಿ ಸೋಮಾರಿತನದಿಂದ ಕಾಲಹರಣಮಾಡುವರು, ಬುದ್ಧಿಶಾಲಿ ಗಳಾದವರು, ಒಂದು ಕೆಲಸದಲ್ಲಿ ಬೇಚಾರಾದ ಕೂಡಲೆ ಮತ್ತೊಂದು ಕನಕ್ಕೆ ಉಪಕ್ರಮ ಮಾಡುವರು. ಅದೇ, ಅವರಿಗೆ ವಿಶ್ರಾಂತಿಯಾಗಿ ಸರಿಣಮಿಸುವುದು, ಗಣಿತಶಾಸ್ತ್ರವನ್ನು ವ್ಯಾಸಂಗಮಾಡಿ ಬೇಚಾರಾದರೆ, ಭೌತಿಕ ಶಾಸ್ತ್ರವನ್ನು ವ್ಯಾಸಂಗಮಾಡುವರು ; ಅದರಲ್ಲಿ ಬೇಚಾರಾದರೆ, ರಸಾಯನಶಾಸ್ತ್ರಕ್ಕೆ ಮನಸ್ಸನ್ನು ಕೊಡುವರು , ಅದರಲ್ಲಿ ಬೇಜಾರಾದರೆ, ವೇದಾಂತವನ್ನು ವ್ಯಾಸಂಗಮಾಡುವರು , ಅದರಲ್ಲಿ ಬೇಚಾರಾದಮೇಲೆ, ಕಾವ್ಯ ನಾಟಕ ಆಖ್ಯಾನ ಆಯ್ಕೆಯು ಮೊದಲಾದ ಗ್ರಂಥಗಳ ಅವಲೋಕ ನದಿಂದ ಮನಸ್ಸನ್ನು ವಿನೋದಗೊಳಿಸುವರು , ತರುವಾಯ, ಚರಿತ್ರೆ ಭೂಗೋಳ ಖಗೋಳ ಶಾರೀರಕಶಾಸ್ತ್ರ ವೈದ್ಯಶಾಸ್ತ್ರ ಮೊದಲಾದ ವಸಂಗಗಳನ್ನು ಮಾಡುವರು. ಆಮೇಲೆ, ವ್ಯಾಯಾಮರೂಪವಾದ ಕೆಲಸಗಳನ್ನು ಮಾಡುವರು. ತೋಟವನ್ನು ಮಾಡುವುದು, ಪ್ರಷ್ಟಗಳನ್ನು ಬೆಳೆಯುವದು, ತರಕಾರಿಗಿಡಗಳನ್ನು ಹಾಕುವುದು, ಗಾಳಿಸವಾರಿ