ಪರಿಚ್ಚೇದ ೧೬೯ ಇರುತಿದ್ದನು. ವೆಟಾ ಎಂಬ ಮಹಾ ಕವಿಯು, ಒಂದು ನಿಮಿಷವಾದರೂ ಉದ್ಧಂಧಗಳ ವ್ಯಾಸಂಗವಿಲ್ಲದೆ ಇರುತ್ತಿರಲಿಲ್ಲ ಇವನು ಸದಾ ವ್ಯಾಸಂಗ ಮಾಡುತಿರುವುದನ್ನು ನೋಡಿ, ಇವನಿಗೆ ಎಂಟು ಹತ್ತು ದಿನ ವಿಶ್ರಾಂತಿ ಯನ್ನು ಕೊಡಬೇಕೆಂದು, ಇವನ ಪರಮಾನ್ಯನಾದ ಕಾರ್ಡಿನಲ್ ಕಲೋನಾ ಎಂಬವನು, ಇವನ ಪುಸ್ತಕಭಂಡಾಲದ ಬೀಗದಕೈಯನ್ನು ಕೇಳಿದನು. ಅವನ ಅಭಿಪ್ರಾಯವನ್ನು ತಿಳಿದುಕೊಳ್ಳದೆ, ಇವನು ಬೀಗದಕೈಯನ್ನು ಕೊಟ್ಟನು, ಪುಸ್ತಕಭಂಡಾರಕ್ಕೆ ಬೀಗವನ್ನು ಹಾಕಿ * ಇನ್ನು ಹತ್ತು ದಿನ ವಿಶ್ರಾಂತಿ ತೆಗೆದು ಕೊಳ್ಳಬೇಕು ; ಯಾವ ಗ್ರಂಧವನ್ನೂ ಓದಕೂಡದು.' ಎಂದು ಅವನು ಆಜ್ಞಾಪಿಸಿದನು. ಇವನು ಅತ್ಯಂತ ಅಸಮಾಧಾನದಿಂದ ಆ ಆಜ್ಞೆಗೆ ಒಳಪಟ್ಟನು. ಮೊದಲನೆಯ ದಿವಸ ರೇ 'ಇವನಿಗೆ ಒಂದು ಯುಗವಾಗಿ ಪರಿಣಮಿಸಿತು. ಎರಡನೆಯ ದಿವಸ ತಲೆನೋವೂ ಜ್ವರವೂ ಉಂಟಾದುವು. ಈ ಅವಸ್ಥೆಯನ್ನು ನೋಡಿ, ಅವನ ಸ್ನೇಹಿತನು ಬೀಗದ ಕೈಯನ್ನು ಕೊಟ್ಟನು. ಎರಡುಮೂರು ಗಂಟೆಗಳೊಳಗಾಗಿ ಅವನಿಗೆ ತಲೆ ನೋವೂ ಜ್ವರವೂ ಹೋದುವು ; ಆರೋಗ್ಯವೂ ಉಂಟಾಯಿತು. ಓದುವುದರಿಂದ ಮನುಷ್ಯನು ತುಂಬಿದ ಕೊಡದಂತಾಗುವನೆಂದು, ಲೋಕವ್ಯವಹಾರಜ್ಞರಲ್ಲಿ ಅಗ್ರಗಣ್ಯನಾದ ಲಾರ್ಡ್ ಬೇಕನ್ನಿನಿಂದ ಹೇಳ ಲ್ಪಟ್ಟಿರುವುದು, ಇದು ನಿಜವಾದ ಮಾತು, ಪ್ರಪಂಚ ಸೃಷ್ಟಿಯಾದುದು ಮೊದಲು ಇದುವರೆಗೂ, ಯಾವದ್ಗೀವವೂ ಕಷ್ಟಪಟ್ಟು ವ್ಯಾಸಂಗಮಾಡಿ, ವ್ಯಾಸಂಗರೂಪವಾದ ತಪಃಪ್ರಭಾವದಿಂದ ಸಕಲಶಾಸ್ತ್ರ ವಿಶಾರದರಾಗಿ, ಅನೇಕರು ಅನೇಕ ಗ್ರಂಧಗಳನ್ನು ಬರೆದಿಟ್ಟಿರುವರು, ಈ ಗ್ರಂಧಗಳು 22
ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.