೧೭೦ ೧೭೦ ವಿದ್ಯಾರ್ಥಿ ಕರಭೂಷಣ ರತ್ನಾ ಕರಗಳಂತೆ ಸುಣಮಿಸಿರುವುವು, ಸಾವಧಾನವಾಗಿ ವ್ಯಾಸಂಗಮಾಡ ತಕ್ಕಮಗೆ ಅವುಗಳು ಹಸ್ತಗತವಾಗುವುವು, ಅಂಧ ಗ್ರಂಧಗಳನ್ನು ವ್ಯಾಸಂಗಮಾಡಿ ತನ್ಮೂಲಕವಾಗಿ ಜ್ಞಾನರೂಪವಾದ ನಿಧಿಯನ್ನು ಯಾರು ತಮ್ಮ ಮನಸ್ಸಿನಲ್ಲಿ ತುಂಬಿಟ್ಟು ಕೊಳ್ಳುವರೋ, ಅವರು ತುಂಬಿದವ ರಾಗುವರು. ಇಂಧ ವಿದ್ಯಾ ಧನವುಳ್ಳವರೇ ನಿಜವಾದ ಧನಿಕರು. ಮಿಕ್ಕವರ ಧನಗಳೆಲ್ಲವೂ ನಶ್ವರವಾದುವುಗಳು , ಜಡವಾದುವುಗಳು , ಜ್ಞಾನ ಸಾಧಕವಾದ ಶಾಸ್ತ್ರಗಳಂತೆ ಅಮೂಲ್ಯವಾದುವುಗಳು, ಮನುಷ್ಯನನ್ನು ದೇವರಿಗೆ ಸಮಾನವಾಗಿ ಮಾಡತಕ್ಕುದು ಜ್ಞಾನವು, ಇಂಧ ಜ್ಞಾನಕ್ಕೆ ಸಾಧಕವಾದುವುಗಳು, ವಸ್ತುತತ್ವಜ್ಞಾನವನ್ನುಂಟುಮಾಡತಕ್ಕ ಗ್ರಂಧ ಗಳು, ಈ ಗ್ರಂಧ ಗಳ ವ್ಯಾಸಂಗದಿಂದ ಮನುಷ್ಯನು ನವೂರ್ಣನಾಗುವ ನೆಂದು..ಲಾರ್ಡ್ ಬೇಕನ್ನನು ಹೇಳಿರುವುದು, ತುಂಬ ಯುಕ್ತಿಯುಕ್ತವಾ ಗಿದೆ ಭಾಷಣವು ಮನುಷ್ಯನನ್ನು ಬೇಕಾದ ಕೆಲಸಗಳಲ್ಲೆಲ್ಲ ಸಿದ್ಧನನ್ನಾಗಿ ಮಾಡುವುದೆಂಬುದಾಗಿಯೂ, ಲೇಖನವು ತಪ್ಪಿಲ್ಲದವನನ್ನಾಗಿ ಮಾಡುವು ದೆಂಬುದಾಗಿಯೂ, ಲಾರ್ಡ್ ಬೇಕನ್ನನು ಹೇಳಿರುವನು. ಇದೂ ಸಹಜ ವಾದುದು, ಸಮಯೋಚಿತವಾಗಿ ಧರ್ಮವನ್ನು ಬಿಡದೆ ಮಾತನಾಡುವ ಶಕ್ತಿಯನ್ನು ಪಡೆದಿರತಕ್ಕ ವನು, ಎಲ್ಲ ಕೆಲಸಗಳಿಗೂ ಸಿದ್ಧನಾಗಿರುವನು. ಅದರಿಂದ, ಎಲ್ಲ ಕೆಲಸಗಳಲ್ಲಿಯ ಇವನಿಗೆ ಸಿದ್ಧಿಯುಂಟಾಗುವುದು. ಸರಿಯಾಗಿ ಬರೆಯತಕ್ಕೆ ಶಕ್ತಿಯುಳ್ಳವನು, ಎಂದಿಗೂ ನ್ಯೂನಾತಿರಿಕ್ತ ಗಳಿಗೆ ಗುರಿಯಾಗುವುದಿಲ್ಲ, ಓದುವುದು, ಮಾತನಾಡುವುದು, ಒರೆಯು ವುದು, ಈ ಮೂರೂ ಲೋಕವ್ಯವಹಾರಕ್ಕೆ ಅತ್ಯಂತಸಾಧಕವಾದುವುಗಳು. ಶ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.