೧೮೨ ಕರಭೂಷಣ ಜನ ಮಹಾಕವಿಗಳು ಹೇಳಿರುವರು. ಇದಕ್ಕೆ ಕಾರಣವೇನು ? ವ್ಯಾಸನು ತನ್ನ ಕಾಲದಲ್ಲಿ ಪ್ರಚಾರದಲ್ಲಿದ್ದ ಸಕಲಗ್ರಂಧಗಳನ್ನೂ ಕರತಲಾಮಲಕ ವಾಗಿರುವಂತೆ ಅರ್ಧವತ್ತಾಗಿ ತಿಳಿದುಕೊಂಡಿದ್ದನು. ಆದುದರಿಂದಲೇ, ಅಂಧ ಅದ್ವಿತೀಯವಾದ ಕೀರ್ತಿ ಅವನಿಗೆ ಬಂದಿತು, ವ್ಯಾಸನೇ ಎಷ್ಟು ಸ್ವರೂಪನೆಂಬ ಹೆಸರುವಾಸಿಯೂ ಕೂಡ ಅವನಿಗೆ ಲಭ್ಯವಾಯಿತು, ಈ ಹೆಸರುವಾಸಿಯು ಅಪ್ರಯತ್ನಪೂರ್ವಕವಾಗಿ ಲಭ್ಯವಾಗಲಿಲ್ಲ ; ಅವನು ಅಹೋರಾತ್ರಿಯ ಬೇಜಾರಿಲ್ಲದೆ ವ್ಯಾಸಂಗಮಾಡಿ, ಓದಿದ ವಿಷಯ ಗಳನ್ನೆಲ್ಲ ಚೆನ್ನಾಗಿ ಪರಾಲೋಚಿಸಿ, ಅನೇಕ ಗ್ರಂಧಗಳನ್ನು ಬರೆದಿಟ್ಟನು. ನಮ್ಮ ಭಾರತೀಯರಲ್ಲಿ ವ್ಯಾಸನಿಂದ ಪರಿಶೋಧಿಸಲ್ಪಟ್ಟು ಬರೆಯಲ್ಪ ಟ್ಟಷ್ಟು ಗ್ರಂಧಗಳನ್ನು ಇನ್ನಾ ರೂ ಬರೆದಿರುವುದಿಲ್ಲ. ಈ ಗ್ರಂಧಗಳಿಂದ, ಈ ಅಖಂಡ ಬ್ರಹ್ಮಾಂಡದ ಸೃಷ್ಟಿ ಸ್ಥಿತಿ ಪ್ರಳಯಗಳ ವಿಷಯದಲ್ಲಿಯೂ, ಇವುಗಳಿಗೆಲ್ಲ ಕಾರಣಭೂತನಾದ ಜಗದೀಶ್ವರನ ವಿಷಯದಲ್ಲಿಯೂ, ಜನಗಳು ಯಾವರೀತಿಯಲ್ಲಿ ನಡೆದು ಕೊಂಡರೆ ಜಗದೀಶ್ವರನ ಅನುಗ್ರಹಕ್ಕೆ ಪಾತ್ರರಾಗಿ ಸದ್ಧತಿಯನ್ನು ಹೊಂದುವರೋ- ಅದರ ಎಷಯದಲ್ಲಿಯ, ವ್ಯಾಸನಿಗಿಂತಲೂ ಹೆಚ್ಚಾಗಿ ಶೋಧನೆಮಾಡಿ ಬರೆದಿಟ್ಟವರು ಯಾರೂ ಇರುವುದಿಲ್ಲ ಎಂಬುದು ಗೊತ್ತಾಗುವುದು. ಆದುದರಿಂದಲೇ, ಮನುಷ್ಯ ರಲ್ಲಿ ಇವನು ಮಹಾವಿಷ್ಣುವಿಗೆ ಸಮಾನನಾದವನೆಂದು ಭಾವಿಸ ಲ್ಪಟ್ಟನು. ಅವನಂತೆ ಬೇಜಾರಿಲ್ಲದೆ ಅಹೋರಾತ್ರಿಯ ಆಧುನಿಕರು ವ್ಯಾಸಂಗಮಾಡಿದರೆ, ಅವನಿಗಿಂತಲೂ ದೊಡ್ಡವರಾಗುವುದು ಕಷ್ಟವಲ್ಲ. ಅವನ ಕಾಲದಲ್ಲಿ ಎಷ್ಟು ಗ್ರಂಧಗಳಿದ್ದು ವೋ ಅವುಗಳನ್ನು ಮಾತ್ರ ಅವನು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೯೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.