ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೩ ಪರಿಚ್ಛೇದ ೪ ವ್ಯಾಸಂಗಮಾಡಿ, ಆ ವ್ಯಾಸಂಗಕ್ಕನುರೂಪವಾದ ಜ್ಞಾನವನ್ನು ತಾನು ಹೊಂದಿದ್ದನು. ಈಗ ಒಂದು ಕೋಟಿಪಾಲಿಗೆ ಕಡಮೆಯಿಲ್ಲದೆ ಗ್ರಂಧಗಳು ಹೆಚ್ಚಿವೆ. ಕಳೆದ ಹತ್ತು ವರುಷಗಳಲ್ಲಿ, ಪ್ರಪಂಚಸೃಷ್ಟಿಯಾದ ಮೊದಲು ಎಷ್ಟು ಶಾಸ್ತ್ರ ವಿಷಯಗಳು ಗೊತ್ತಾಗಿದ್ದು ವೋ ಅದರ ನೂರರಷ್ಟು ಹೆಚ್ಚಾಗಿ ಗೊತ್ತುಮಾಡಲ್ಪಟ್ಟಿವೆ. ಯೂರೋಪ್ ಅಮೆರಿಕಾ ಜರ್ಪಾ ಮೊದಲಾದ ದೇಶಗಳಲ್ಲಿ, ಕೋಟ್ಯಂತರಜನಗಳು, ವ್ಯಾಸನಂತೆ ಅಹೋ ರಾತ್ರಿಯ ಅನೇಕ ವಿಷಯಗಳನ್ನು ಶೋಧಿಸುತ್ತ ಅನೇಕ ಶಾಸ್ತ್ರಗಳನ್ನು ವ್ಯಾಸಂಗಮಾಡುತ್ತ ಅನೇಕ ವಸ್ತು ತತ್ವಗಳನ್ನು ನಿಷ್ಕರ್ಷಿಸುತ್ತ ಇದ್ದಾರೆ' ಸಂಸ್ಕೃತದ ಜತೆಗೆ ಇಂಗ್ಲೀಷ್ ವಿದ್ಯಾಭ್ಯಾಸವನ್ನೂ ಮಾಡಿರತಕ್ಕವರಿಗೆ, ಈ ಪ್ರಪಂಚದ ಯಾವಯಾವ ಭಾಗಗಳಲ್ಲಿ ಯಾವಯಾವ ಶಾಸ್ತ್ರಗಳು ಎಂಧ ನರಕಾಷ್ಟ ದಶೆಯನ್ನು ಹೊಂದುತ್ತಲಿವೆಯೋ -ಅದು ಗೊತ್ತಾಗು ವುದು. ಆದುದುಂದೆ, ಆಧುನಿಕ ವ್ಯಾಸರು ಪೂತ್ವದ ವ್ಯಾಸರಿಗಿಂತಲೂ ವಿಶೇಷ ಜ್ಞಾನಿಶಾಲಿಗಳಾಗುವುದಕ್ಕೆ ಅವಕಾಶ ಹೆಚ್ಚಾಗಿರುವುದು. ವ್ಯಾಸಂಗವು ನಿಜವಾದ ತಪಸ್ಸು. ಈ ತಪಸ್ಸನ್ನು ಯಾರು ಚೆನ್ನಾಗಿ ಮಾಡುತ್ತಾರೋ ಅವರಿಗೆ ಅದು ಸಿದ್ಧಿಸುವುದು, ಉದ್ಧಂಧಗಳನ್ನು ಬರೆಯುವುದಕ್ಕೋಸ್ಕರ ನಿಯಮಿಸಲ್ಪಟ್ಟಿದ್ದ ಅನೇಕ ಲೇಖಕರು, ಮಹಾ ಕವಿಗಳಾಗಿ ಪರಿಣಮಿಸಿರುತ್ತಾರೆ. ಗ್ರಂಥಗಳನ್ನು ಅರ್ಥಮಾಡಿಕೊಂಡು ಬರೆಯುವವರಿಗೆ, ಓದುವುದರಿಂದುಂಟಾಗತಕ್ಕೆ ಶಕ್ತಿಗಿಂತಲೂ ಹೆಚ್ಚು ಶಕ್ತಿ ಬರುವುದು. ಆದುದರಿಂದ, ಪದ್ಯ ಗದ್ಯಗಳನ್ನು ಚೆನ್ನಾಗಿ ಬರೆಯ ಬೇಕೆಂಬ ಅಪೇಕ್ಷೆಯುಳ್ಳವರೂ, ಚೆನ್ನಾಗಿ ಮಾತನಾಡುವ ಶಕ್ತಿಯನ್ನು ಬ