೧೮೮ ವಿದ್ಯಾರ್ಥಿ ಕರಭೂಷಣ ಉಪಕ್ರಮಮಾಡಿದರೆ, ವ್ಯಾಸಂಗದಿಂದ ಎಷ್ಟು ಪ್ರಯೋಜನವಾಗಬೇಕೋ ಅಪ್ಪಾಗುವುದಿಲ್ಲ. ಲೋಕವ್ಯವಹಾರಜ್ಞಾನವು ಸಾಕ್ಷಾತ್ಕಾಗಿಯ ಪರೋಕ್ಷವಾ ಗಿಯೂ ಲಭ್ಯವಾಗುವುದುಂಟು. ಸಾಕ್ಷಾತ್ತಾಗಿ ಸಾವಿರಾರು ಮೈಲಿಗಳ ಲ್ಲಿರತಕ್ಕ ಪದಾರ್ಧದ ಜ್ಞಾನವನ್ನು ಪಡೆಯಬೇಕಾದರೆ, ಪ್ರಯಾಣವ್ಯಯಶರೀರಕ್ಷೇಶ ಮೊದಲಾದುವುಗಳು ಹೆಚ್ಚಾಗುವುವು, ಅಂಧ ಸಂದರ್ಭದಲ್ಲಿ ಪುಸ್ತಕಗಳಿಂದ ಅದೇ ಜ್ಞಾನವನ್ನು ಬಹಳಸುಲಭವಾಗಿ ಹೊಂದಬಹುದು. ಇಂಧ ಜ್ಞಾನವನ್ನು ಒದಗಿಸಿಕೊಡುವುದಕ್ಕೋಸ್ಕರ, ಕೋಟ್ಯಂತರ ಗ್ರಂಧ ಗಳು ಬರೆಯಲ್ಪಟ್ಟಿವೆ. ಆ ಗ್ರಂಧಕರ್ತರು, ಸಾಕ್ಷಾತ್ತಾಗಿ ನೋಡಿ ಪರಿಶೋಧಿಸಿ ಗ್ರಂಧಗಳನ್ನು ಬರೆದಿಟ್ಟಿರುವರು. ಪಸ್ತುಕಗಳ ದ್ವಾರಾ ಇಂಧ ಜ್ಞಾನವನ್ನು ಪಡೆಯಬೇಕು, ಇದರಜತೆಗೆ ಸಾಕ್ಷಾತ್ಕಾಗಿ ನೋಡಿ ಪಡೆಯುವುದಕ್ಕೆ ಯಾವುದು ಸಾಧ್ಯವೋ, ಅದನ್ನು ಸಾಕ್ಷಾತ್ತಾಗಿಯೂ ಪಡೆಯಬೇಕು, ಎಲ್ಲ ವಿಧದಲ್ಲಿಯೂ ಜ್ಞಾನಾರ್ಜನೆಮಾಡಿಕೊಳ್ಳುವು ದಕ್ಕೆ ಸಿದ್ಧರಾಗಿರಬೇಕು, ಅನುಪಯುಕ್ತವಾದ ಜ್ಞಾನವು ಪ್ರಪಂಚದಲ್ಲಿ ಯಾವುದೂ ಇರುವುದಿಲ್ಲ. ಆದರೆ, ಬುದ್ಧಿಶಾಲಿಗಳು, ಅನರ್ಧಕ್ಕೆ ಗುರಿಯಾಗಿ ಸಂಪಾದಿಸಬೇಕಾಗುವ ಜ್ಞಾನವನ್ನು ಸಾಕ್ಷಾತ್ಕಾಗಿ ಸಂಪಾದಿಸುವುದರಲ್ಲಿ ಉದ್ಯುಕ್ತರಾಗಕೂಡದು, ಲೋಕದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿ ಕ್ಷೇಶಕ್ಕೆ ಗುರಿಯಾಗುತಲಿರುವವರು ಅನೇಕರಿರುತ್ತಾರೆ. ಅವರ ಅನುಭವದ ಪ್ರಯೋಜನವನ್ನು ಹೊಂದುವುದುತ್ತಮವೇ ಹೊರತು, ಇಂಧ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.