ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಚೇದ ೪ ೧೮೯ ವಿಷಯಗಳಲ್ಲಿಯೂ ತಾವೇ ಅನುಭವಗಳನ್ನು ಹೊಂದಿ ತನ್ಮೂಲಕ ತತ್ಕಾ ರ್ಧವನ್ನು ಗೊತ್ತು ಮಾಡಿಕೊಳ್ಳುವುದು ಪ್ರಯೋಜನಕಾರಿಯಲ್ಲ. ಗ್ರಂಧಗಳು ನಿಷಾದ್ರವ್ಯಕ್ಕೆ ಹೋಲಿಸಲ್ಪಡುವುದುಂಟು. ಎಲ್ಲ ಗ್ರಂಧ ಗಳನ್ನೂ ಹಾಗೆ ಹೋಲಿಸುವುದಕ್ಕಾಗುವುದಿಲ್ಲ, ಶೃಂಗಾರರಸದಿಂದ ತುಂಬಿ ತುಳುಕುತ್ತಲಿರುವ ಗ್ರಂಥಗಳನ್ನು, ದ್ರವ್ಯಾರ್ಜನೆಗೋಸ್ಕರ ಅನೇ ಕರು ಬರೆಯುವರು. ಇವು ವಿಚಿತ್ರವಾದ ಒಂದು ಮೋಹವನ್ನು ಹುಟ್ಟಿಸುವುವು ಈ ಗ್ರಂಧಗಳನ್ನು ವ್ಯಾಸಂಗಮಾಡತಕ್ಕವರು ಉನ್ಮತ್ತ ರಾಗುವರು; ಯುಕ್ತಾಯುಕ್ತ ವಿವೇಚನೆಯು ಇವರಿಗೆ ಹೋಗುವುದು ; ಅಂಧ ಗ್ರಂಧಗಳಲ್ಲಿ ನಿರೂಪಿಸಲ್ಪಟ್ಟ ಸುಖವೇ ಪರಮಸುಖವೆಂದು ತಿಳಿದು ಕೊಳ್ಳುವರು ; ಅದನ್ನು ಪರೀಕ್ಷಿಸುವುದಕ್ಕೆ ಉಪಕ್ರಮಮಾಡುವರು ; ಅರ್ಧಹಾನಿ ಮಾನಹಾನಿ ಪ್ರಾಣಹಾಸಿಗಳಿಗೆ ಗುರಿಯಾಗುವರು. ಶೃಂಗಾರ ರಸಪ್ರಧಾನವಾದ ಅಸತ್ಯಾವ್ಯಗಳು, ಈ ರೀತಿಯಲ್ಲಿ ಅನರ್ಧಕ್ಕೆ ಕಾರಣ ವಾಗುವುವು, ಇತರರಸಪ್ರಧಾನವಾದ ಕಾವ್ಯಗಳೂ ಕೂಡ ಬೇಕಾದ ಹಾಗಿರುತ್ತವೆ. ವೇಣೀಸಂಹಾರನಾಟಕವನ್ನೋದಿದರೆ, ವೀರರಸವುಂಟಾಗಿ ಹಿಡಿದ ಕೆಲಸವನ್ನು ಮಾಡುವುದರಲ್ಲಿ ಅಸಾಧಾರಣವಾದ ಸೈರವೂ ಉಂಟಾಗುವುದು. ಬದುಕಿದರೆ-ಸಲ್ವರಿಂದಲೂ ಪೂಜ್ಯನಾಗಿ ಲೋಕೈಕ ವೀರನಾಗಿ ಬದುಕಬೇಕು ! ಇಲ್ಲದಿದ್ದರೆ-ಧರೆಯುದ್ದದಲ್ಲಿ ದೇಹವನ್ನು ಬಿಟ್ಟು ಪೀರಸ್ವರ್ಗವನ್ನು ಹೊಂದಬೇಕು ! ಎಂಬ ಸಂಕಲ್ಪವು ಹುಟ್ಟುತ್ತದೆ. ಮುದ್ರಾರಾಕ್ಷಸವನ್ನೋದಿದರೆ, ಪಾಪಿಷ್ಠರನ್ನು ಮೂಲೋತ್ಪಾಟನ ಮಾಡುವುದಕ್ಕೆ ಬೇಕಾದ ತಂತ್ರಗಳನ್ನು ವಿನಿಯೋಗಿಸಿ ದುಷ್ಟನಿಗ್ರಹ