ಸರಿಟ್ಟೆ ದ ೧ ೧೩ ಮುಖವಾಗಿರುತ್ತವೆ. ಹಿಡಿದ ಕೆಲಸಗಳು ಸಫಲವಾಗಿ ವಿದ್ಯೆ ವಿನಯ ಮೊದಲಾದ ಸಕಲ ಸಂಪತ್ತುಗಳೂ ಲಭ್ಯವಾಗಬೇಕಾದರೆ, ಈ ಸಂದರ್ಭ ಗಳೆಲ್ಲ ಅನುಕೂಲವಾಗಿರಬೇಕು. ಇವುಗಳು ಪ್ರತಿಕೂಲವಾಗಿ ಪರಿಣಮಿ ಸಿದರೆ, ಕೇಶಪರಂಪರೆಗಳು ಹೆಚ್ಚಿ, ಯಾವ ಇಷ್ಟಾರ್ಧವೂ ಕೈಗೂಡುವು ದಿಲ್ಲ, ಹೀಗಿದ್ದಾಗ್ಯೂ, ಪ್ರತಿ ಮನುಷ್ಯನೂ ಯಾವುದಾದರೊಂದು ಕೆಲಸ ದಲ್ಲಿ ಅಸಾಧಾರಣವಾದ ಕೌಶಲ್ಯವನ್ನು ಪಡೆಯುವುದು ಕಷ್ಟವಲ್ಲ. ಸಮಸ್ತ ಕ್ಷೇಶಗಳನ್ನೂ ಮರೆತು, ದಿನಕ್ಕೆ ಎರಡುಮೂರು ಘಂಟೆಗಳನ್ನಾ ದರೂ, ಯಾವುದಾದರೊಂದು ಕೆಲಸವನ್ನು ಚೆನ್ನಾಗಿ ಮಾಡುವುದಕ್ಕೆ ವಿನಿಯೋಗಿಸಬಹುದು. ಹಾಗೆ ವಿನಿಯೋಗಿಸತಕ್ಕವರು, ಕ್ರಮೇಣ ಸಕಲ ಕ್ಷೇಶಗಳನ್ನೂ ತಪ್ಪಿಸಿಕೊಂಡು, ಇಷ್ಟಾರ್ಥಗಳನ್ನು ಹೊಂದುವುದಕ್ಕೆ ಅರ್ಹರಾಗುವರು. ಜನಗಳ ಒದ್ದಿಯು ಒಂದೇ ವಿಧವಾಗಿರುವುದಿಲ್ಲ ಎಲ್ಲ ಕೆಲಸ ಗಳಲ್ಲಿ ಎಲ್ಲರಿಗೂ ಪ್ರವೇಶವುಂಟಾಗುವುದಿಲ್ಲ. ಒಂದೊಂದು ಕೆಲಸ ದಲ್ಲಿ ಒಬ್ಬೊಬ್ಬರಿಗೆ ಸುಲಭವಾಗಿ ಪ್ರವೇಶವುಂಟಾಗುವುದು, ಕುಬೇರಪದವಿ ಯಲ್ಲಿರತಕ್ಕ ಬಹುಜನಗ', ತಮ್ಮ ಮಕ್ಕಳನ್ನು ಸರ್ವಜ್ಞರನ್ನಾಗಿ ಮಾಡ ಬೇಕೆಂದು ಬಹು ದ್ರವ್ಯವನ್ನು ಎ-ಯೋಗಿಸಿ, ಸಕಲಶಾಸ್ತ್ರ ವಿಶಾರದರಾದ ಪಂಡಿತರನ್ನು ಪಾರಕರನ್ನಾಗಿ ಮಾಡುವರು ಪರಿಣಮದಲ್ಲಿ, ಪಾರಕರಿಗೆ ಬಂದ ವಿದ್ಯೆ ಮರೆಯುವುದಿಲ್ಲ ;- ಮಕ್ಕಳಿಗೆ ಬರುವುದಿಲ್ಲ. ಹೀಗಾಗು ತಲಿರುವುದು, ಎಲ್ಲರಿಗೂ ಅನುಭವಸಿದ್ಧವಾದುದು, ಇದಕ್ಕೆ ಕಾರಣ ವ್ರಂಟು. ಇದರಿಂದ, ಹುಡುಗರು ಶುಂಠರೆಂದು ತಿಳಿಯಕೂಡದು, ಅವರಿಗೆ
ಪುಟ:ವಿದ್ಯಾರ್ಥಿ ಕರಭೂಷಣ.djvu/೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.