೧೪ ಕರಭೂಷಣ MMMMMMwwwMMM MM PM ಅಂಧ ಪಾರಕರು ಹೇಳುವ ವಿದ್ಯೆಯನ್ನು ಕಲಿಯುವುದರಲ್ಲಿ ಶ್ರದ್ದೆಯಿಲ್ಲ ವೆಂದು ತಿಳಿದುಕೊಳ್ಳಬೇಕು. ಒಹುದ್ರವ್ಯವ್ಯಯದಿಂದ ಏರ್ಪಾಡುಮಾಡ ಲ್ಪಟ್ಟ ವ್ಯಾಸಂಗಗಳಲ್ಲಿ ಅಶ್ರದ್ದೆಯಿಂದ ದಡ್ಡರಾಗಿದ್ದಾಗ್ಯೂ, ಹಾಗೆ ದಡ್ಡ ರೆಂದು ಭಾವಿಸಲ್ಪಟ್ಟ ವರು, ಅನೇಕವಾದ ಇತರ ವಿಷಯಗಳಲ್ಲಿ ಬಹಳ ನಿಪುಣರಾಗಿರುತ್ತಾರೆ. ಕಾವ್ಯಗಳಲ್ಲಿ ಆಸಕ್ತಿಯಿಲ್ಲದವನಿಗೆ ಗಣಿತಶಾಸ್ತ್ರ ದಲ್ಲಿ ಆಸಕ್ತಿಯಿರುವುದುಂಟು. ಇವೆರಡರಲ್ಲಿ ಯೂ ಆಸಕ್ತಿಯಿಲ್ಲದವನಿಗೆ ಯಾವುದಾದರೊಂದು ಕೈಗಾರಿಕೆಯಲ್ಲಿ ಆಸಕ್ತಿಯಿರುವುದುಂಟು. ಇವು ಗಳಾವುದರಲ್ಲೂ ಅಭಿರುಚಿಯಿಲ್ಲದವನು, ವ್ಯಾಪಾರ ಮೊದಲಾದ ಯಾವು ದಾದರೊಂದು ವೃತ್ತಿಯಲ್ಲಿ ಅಭಿನಿವೇಶವುಳ್ಳವನಾಗಿರುವುದುಂಟು. ಯಾವ ಹುಡುಗನಿಗೆ ಯಾವ ಕೆಲಸವನ್ನು ಮಾಡುವುದರಲ್ಲಿ ಶ್ರದ್ದೆಯಿರುವುದೋಅದನ್ನು ಪರೀಕ್ಷಿಸಿ, ಅದರಲ್ಲಿ ಅವನಿಗೆ ಶಿಕ್ಷೆಯನ್ನು ಕೊಡಿಸುವುದಕ್ಕೆ ಪ್ರಯತ್ನ ಮಾಡಿದರೆ, ಅದರಿಂದ ಇಷ್ಟಾರ್ಧಸಿದ್ದಿಯಾಗುವದು, ಬಹುಜನ ತಾಯಿತಂದೆಗಳ, ಪೋಷಕರೂ, ಇತರರ, ಈ ತತ್ವವನ್ನು ಗೊತ್ತು ಮಾಡುವುದರಲ್ಲಿ ಅನಾದರಣೆಯುಳ್ಳವರಾಗಿರುತ್ತಾರೆ. ಬಹುಜನ ವಿದ್ಯಾರ್ಥಿಗಳು ತಮ್ಮ ಶಕ್ತಿಗನುರೂಪವಾದ ಪದವಿಯನ್ನು ಹೊಂದದಿರು ವುದಕ್ಕೆ, ಇದೇ ಮುಖ್ಯ ಕಾರಣವು. ವಿಲಾಯಿತಿಯಲ್ಲಿ ಒಂದು ಗೋಪುರವಿರುವುದು, ಅದಕ್ಕೆ ವಿದ್ಯು ಜೋಕ್ಕಿಯನ್ನು ಆಕರ್ಷಿಸುವ ಒಂದು ಸಲಾಕಿ ಹಾಕಲ್ಪಟ್ಟಿರುವುದು. ಆ ಗೋಪುರದ ಅಡಿಯಿಂದ ಸಲಾಕಿಯ ಶಿಖರಕ್ಕೆ ೧೯೫ ಅಡಿಗಳಾಗು ವುವು, ಒಬ್ಬ ಹುಡುಗನು ಈ ಸಲಾ ಕಿಯ ಮೇಲೆ ಹತ್ತುತ್ತಿದ್ದನು. ಆಗ
ಪುಟ:ವಿದ್ಯಾರ್ಥಿ ಕರಭೂಷಣ.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.