ಪರಿಚ್ಛೇದ ೧ ೩೫ 6 >> ಅಸಾಧಾರಣವಾದ ಯಶಸ್ಸು ಬರುತಿದ್ದಿತೇ ? ನ್ಯೂರ್ಟ ಎಂಬ ಗಣಿತ ಶಾಸ್ತ್ರಜ್ಞನು ಆ ಶಾಸ್ತ್ರದಲ್ಲಿ ರಚಿಸಿರತಕ್ಕ ಗ್ರಂಧಗಳನ್ನು ನೋಡೋಣ. ಅವನಿಗೆ ಅಸಾಧಾರಣವಾದ ಸಹನವಿಲ್ಲದಿದ್ದರೆ, ಅವನು ಮಾಡಿರತಕ್ಕ ಅದ್ಭುತವಾದ ಶೋಧನೆಗಳು ಮಾಡಲ್ಪಡುತ್ತಲಿರಲಿಲ್ಲ ; ಅವನು ರಚಿಸಿರ ತಕ್ಕ ಗ್ರಂಧಗಳೂ ರಚಿಸಲ್ಪಡುತ್ತಲಿರಲಿಲ್ಲ. ಅವನು, ಪ್ರತಿದಿನವೂ ಹದಿ ನೈದು ಹದಿನಾರು ಘಂಟೆಗಳಿಗೆ ಕಡಮೆಯಿಲ್ಲದೆ, ಇಪ್ಪತ್ತಾರು ವರುಷ ಗಳು ಕಷ್ಟ ಪಟ್ಟು ತುಂಬ ಯೋಚಿಸಿ, ಅನೇಕ ಗ್ರಂಧಗಳನ್ನು ಬರೆದನು. ಒಂದು ದಿನ, ಬೇನರಾದುದರಿಂದ ಮೇಣದ ಬತ್ತಿಯ ದೀಪವನ್ನು ಮೇಜಿನ ಮೇಲೆ ಇಟ್ಟು ಗಾಳಿಸವಾರಿಗೆ ಹೊರಟುಹೋದನು. 65 ಡೈಮೆಂಡ್ ) ಎಂಬ ಅವನ ನಾಯಿಯು, ಅದನ್ನು ಉರುಳಿಸಿಬಿಟ್ಟಿತು ಅವನು ಹಿಂದಿರುಗಿ ಬರುವುದರೊಳಗಾಗಿ, ಇಪ್ಪತ್ತಾರು ವರುಷದಿಂದ ಬರೆದಿದ್ದ ಗ್ರಂಧಗಳೆಲ್ಲ ಸುಟ್ಟು ಹೋಗಿದ್ದುವು. ಆ ನಾಯಿಯು, ತಾನು ಮಾಡಿದ ಅನರ್ಧವನ್ನು ಅವನಿಗೆ ತಿಳಿಯಿಸುವುದಕ್ಕೋಸ್ಕರ ಹೋಗಿ, ಅವನನ್ನು ಮುಂದಕ್ಕೆ ಬಿಡದೆ, ಹಿಂದಿರುಗಿ ಕರೆದುಕೊಂಡು ಬಂದಿತು ಎಲ್ಲ ಗ್ರಂಧಗಳೂ ಸುಟ್ಟು ಹೋಗಿ ರುವುದನ್ನು ನೋಡಿ, ಅನಿರ್ವಚನೀಯವಾದ ವಿವಾದವನ್ನು ಹೊಂದಿ 6° ಅಯ್ಯೋ ! ಪ್ರಾಣೀ ! ನೀನು ಮಾಡಿದ ನಷ್ಟ ವೆಷ್ಟೆಂಬುದನ್ನು ನೀನ ರಿಯೆ ! " ಎಂದು ಹೇಳಿ, ಪುನಃ ಕೆಲಸಕ್ಕೆ ಉಪಕ್ರಮಿಸಿ, ವಿಶೇಷವಾಗಿ ವ್ಯವಸಾಯ ಮಾಡಿ, ಆ ಗ್ರಂಧಗಳನ್ನೆಲ್ಲ ಮತ್ತೆ ಬರೆದನು. ಇಂತಹ ಸಹನಶೀಲರಾದ ಮಹಾನುಭಾವರುಗಳು ಅನೇಕರಿರುತ್ತಾರೆ, ಪ್ರಪಂಚದ ಅಭ್ಯುದಯಕ್ಕೆ ಇವರೇ ಕಾರಣಭೂತರು. ಏಕಾಗ್ರಚಿತ್ತದಿಂದ ಕೆಲಸಮಾ
ಪುಟ:ವಿದ್ಯಾರ್ಥಿ ಕರಭೂಷಣ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.