ಪರಿಚ್ಛೇದ ೧, ೩೯ ನ ತಿ ಬೈಂಡಿನ ಬುಕ್ಕು, ಇವೆರಡನ್ನೂ ಇಟ್ಟು ಕೊಂಡು, ಹಾಸಿಗೆಯಿಂದ ಎದ್ದು ಮತ್ತೆ ಮಲಗುವವರೆಗೂ ಮನೋವಾ ಕ್ಯಾಯಗಳಲ್ಲಿ ಯಾವಯಾವ ವ್ಯಾಪಾರಗಳು ನಡೆಯುವುವೋ ಅವುಗಳಲ್ಲಿ ಒಳ್ಳೆಯದನ್ನು ಬಿಳಿಯ ಬೈಂಡಿನ ಬುಕ್ಕಿನಲ್ಲಿಯ ಕೆಟ್ಟು ದುದನ್ನು ಕರಿಯ ಬೈಂಡಿನ ಬುಕ್ಕಿನಲ್ಲಿಯ ಬರೆಯುವುದಕ್ಕುಪಕ್ರಮಿಸಿದನು. ಮೊದಲಿನಲ್ಲಿ ಕರಿಯ ಬೈಂಡಿನ ಬುಕ್ಕಿನ ಬರವಣಿಗೆಯು ಬಹಳ ಹೆಚ್ಚಾಗಿದ್ದಿತು; ಬಿಳಿಯ ಬೈಂಡಿನ ಬುಕ್ಕಿನಲ್ಲಿ ಬರೆ ಯಲ್ಪಟ್ಟ ವಿಷಯಗಳು ಕಡಮೆಯಾಗಿದ್ದುವು. ಬರೆದಾಗುತ್ತಲೂ, ಪ್ರತಿ ರಾತ್ರಿಯ ಮಲಗುವುದಕ್ಕೆ ಮುಂಚೆ ಅದುವರೆಗೆ ತಾನು ಯೋಚಿಸಿದ್ದ ದುಷ್ಟವಾದ ಯೋಜನೆ ಯನ್ನೂ , ಆಡಿದ ದುಷ್ಟವಾದ ಮಾತನ್ನೂ , ಮಾಡಿದ ದುಷ್ಟವಾದ ಕೆಲಸವನ್ನ ಕುರಿತು, ತಸಿಗೆ ತಾನೇ ನಿಂದಿಸಿಕೊಳ್ಳುತಿದ್ದನು. ಹೀಗೆ ಮೂವತ್ತು ವರುಷ ಗಳು ಮಾಡುವುದರಲ್ಲಿ, ಕುಯಬೈಂಡಿನ ಬುಕ್ಕಿ ನೊಳಗೆ ಒಂದು ಸಂಕ್ತಿಯನ್ನೂ ಒರೆಯುವುದಕ್ಕೆವಕಾಶವಾಗಲಿಲ್ಲ. ಬಿಳಿಯ ಬೈಂಡಿನ ಬುಕ್ಕು ತುಂಬಿ, ಇನ್ನೂ ಅನೇಕ ಅಂಧ ಬುಕ್ಕುಗಳನ್ನು ಹೊಸದಾಗಿ ಇರಬೇಕಾಯಿತು - ಶ್ರೀ ಶಂಕರಾಚಾತ್ಯರು, ನಾಸೀ ಜಗದೀಶ್ವರನೆಂದು ಹೇಳಿರುವರಷ್ಟೆ ! ಈ ಜಗದೀಶ್ವರಪದವಿ ಒರಬೇಕಾದರೆ, ಮನಸ್ಸಿನಲ್ಲಿ ದುರಾಲೋಚ ನೆಯ, ವಾಕ್ಕಿನಲ್ಲಿ ದುರ್ಭಾಷೆಯ, ಕಾಯದಲ್ಲಿ ದುಷ್ಕಾರ್ಯವೂ, ಎಂದಿಗೂ ಇರಬಾರದು, ಮನುಷ್ಯನು ಮರ್ತಿಮತ್ತಾದ ಸತ್ವಗುಣ - ವಾಗಿ ಪರಿಣಮಿಸಬೇಕು. ಇಂಧ ಪರಿಣಾಮವನ್ನು ಹೊಂದಿ ಜಿತೇಂದ್ರಿ ಯನಾಗಿ ಜಗದೀಶ್ವರನಂತೆ ಲೋಕಕ್ಕೆ ಉಪಯುಕ್ತವಾದ ಕೆಲಸವನ್ನು
ಪುಟ:ವಿದ್ಯಾರ್ಥಿ ಕರಭೂಷಣ.djvu/೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.