೪೨ ವಿದ್ಯಾರ್ಥಿ ಕರಭೂಷಣ ಇದನ್ನು ಕೇಳಿ ಸಂತುಷ್ಟನಾಗಿ, ಆ ಫಕೀರನನ್ನು ಬಹುಮಾನಿಸಿ ಕಳುಹಿಸಿ ಕೊಟ್ಟನು. ತರುವಾಯ, ಆ ವುಪದೇಶವನ್ನು, ತಾನು ಕುಳಿತುಕೊಳ್ಳ ತಕ್ಕ ಸ್ಥಳಗಳಲ್ಲೆಲ್ಲ ಚಿನ್ನದ ಅಕ್ಷರಗಳಲ್ಲಿ ಕೆತ್ತಿಸಿದನು. ಒಂದಾ ನೊಂದು ದಿವಸ, ಆಯುಷ್ಕರ್ಮಮಾಡಿಸಿಕೊಳ್ಳುವುದಕ್ಕೆ ಸಿದ್ದನಾಗಿ, ನಾಪಿತನನ್ನು ಕರೆಯಿಸಿದನು, ನಾಪಿತನು ಬಂದು, ಕತ್ತಿಯನ್ನು ಉಜ್ಜಿ ಸರಿಮಾಡಿಕೊಂಡು, ತಲೆಯನ್ನು ಮೇಲಕ್ಕೆತ್ತಿದಾಗ, ಎದುರಿಗೆ ಗೋಡೆಯ ಮೇಲೆ ಚಿನ್ನದ ಅಕ್ಷರಗಳಲ್ಲಿ ಧಳಧಳಿಸುತ್ತಲಿರುವ ಒಂದು ಲಕ್ಷ ರೂಪಾ ಯಿಗಳಿಗೆ ಕೊಂಡುಕೊಳ್ಳಲ್ಪಟ್ಟ ಹಿತೋಕ್ತಿಯನ್ನು ಓದಿದನು. ಕೂಡಲೆ ಅವನಿಗೆ ತೇಜಸ್ಸು ಕಡಮೆಯಾಯಿತು ; ಕೈಕಾಲುಗಳು ನಡುಗಿದುವು. ಇದನ್ನು ನೋಡಿ ನೃತ್ಯರು ಅವನ ಕೈಯಿಂದ ಕತ್ತಿಯನ್ನು ಕಿತ್ತು ಕೊಂಡರು. ಆ ಪ್ರಭುವು ನಿನಗೆ ಈ ಅವಸ್ಥೆಯಾಗುವುದಕ್ಕೆ ಕಾರಣವೇನು? ನಿಜವನ್ನು ಹೇಳು 'ಎಂದು ಕೇಳಿದನು. ಆ ನಾಪಿತನು,ಭಯಪಟ್ಟು 'ಮಹಾಸ್ವಾಮಿ! ನಾನು ದೊಡ್ಡ ಕುಟುಂಬವುಳ್ಳವನು ; ಬಹಳ ದರಿದ್ರನು, ಕ್ಷೌರ ಮಾಡು ವಾಗ್ಗೆ ತಮ್ಮ ಶಿರಸ್ಸೇದವನ್ನು ಮಾಡಿದರೆ ಲಕ್ಷಾಂತರರೂಪಾಯಿಗಳನ್ನು ಕೊಡುವುದಾಗಿ, ತಮ್ಮ ಶತ್ರುವಾದ ದುರ್ಬುದ್ದಿ ಯೆಂಬವನು ನನಗೆ ಹೇಳಿ ದನು, ನಾನು ದುರಾಶೆಯುಳ್ಳವನಾಗಿ, ಈ ಪಾಪಕೃತ್ಯಕ್ಕೊಪ್ಪಿಕೊ೦ ಡೆನು. ಇಲ್ಲಿ ಈ ಗೋಡೆಯಮೇಲಿರತಕ್ಕೆ ಜಾಜ್ವಲ್ಯಮಾನವಾದ ಹಿತೋ ಕ್ರಿಯು ನನ್ನ ದೃಷ್ಟಿಗೆ ಬಿದ್ದಿತು. ಅದನ್ನು ನೋಡಿದ ಕೂಡಲೆ, ನಾನು ಇಂಧ ಪಾಪಕೃತ್ಯವನ್ನು ಮಾಡಿದರೆ ನನಗೂ ನನ್ನ ಕುಟುಂಬಕ್ಕೂ ಉಂಟಾ ಗಬಹುದಾದ ಅನರ್ಧಗಳು ಮನಸ್ಸಿಗೆ ತೋರಿದುವು, ಅದರಿಂದ ಉಂಟಾದ
ಪುಟ:ವಿದ್ಯಾರ್ಥಿ ಕರಭೂಷಣ.djvu/೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.