ಪರಿಚ್ಛೇದ ೧. ೪೩ ಭಯವೇ, ಈ ಕಂಪನಕ್ಕೆ ಕಾರಣವು, ನನ್ನನ್ನು ರಕ್ಷಿಸುವುದಕ್ಕೂ ಮಹಾ ಸ್ವಾಮಿಯವರ ಜನಗಳನ್ನು ಮೂಲೋತ್ಪಾಟನಮಾಡಿ ಈ ರಾಜಧಾನಿ ಯನ್ನೂ ಈ ರಾಜ್ಯವನ್ನೂ ಆಕ್ರಮಿಸುವುದಕ್ಕೂ, ದುರ್ಬುದ್ಧಿಯ ಅವನ ಸೈನಿಕರೂ ಸನ್ನದ್ಧರಾಗಿರುತ್ತಾರೆ. ಮಹಾಸ್ವಾಮಿಯವರು, ನನ್ನ ಅಪ ರಾಧಕ್ಕೆ ತಕ್ಕ ಶಿಕ್ಷೆಯನ್ನು ನನಗೆ ಮಾಡಿ, ನನ್ನಿ ಹಿತವಾಗಿರತಕ್ಕೆ ಅಪಾ ಯವನ್ನು ತಪ್ಪಿಸಿಕೊಂಡು, ನನ್ನ ಕುಟುಂಬವನ್ನು ರಕ್ಷಿಸಬೇಕು. ಎಂದು ಪ್ರಾರ್ಧಿಸಿದನು. ಕೂಡಲೆ, ಆ ರಾಜನು, ನಾಪಿತನ ಅಪರಾಧವನ್ನು ಕ್ಷಮಿಸಿ, ಸೈನ್ಯಗಳನ್ನು ಸಿದ್ಧ ಮಾಡಿಕೊಂಡು, ದುರ್ಬುದ್ಧಿಯನ್ನೂ ಅವನ ಸೈನಿರನ್ನೂ ಸೋಲಿಸಿ, ಅವರುಗಳಿಗೆ ತಕ್ಕ ಪ್ರತೀಕಾರವನ್ನು ಮಾಡಿ, ಫಕೀ ರನಿಂದ ಕೊಂಡುಕೊಳ್ಳಲ್ಪಟ್ಟ ಹಿತೋಕ್ತಿಗಾಗಿ ಕೊಟ್ಟ ದ್ರವ್ಯಕ್ಕೆ ಲಕ್ಷ ದಷ್ಟು ಪ್ರತಿಫಲ ದೊರೆಯಿತೆಂದು ಸಂತುಷ್ಟನಾದನು. ಬಳಿಕ, ಆ ನಾಸಿ ತನ ಕುಟುಂಬರಕ್ಷಣೆಗೆ ತಕ್ಕ ಏರ್ಪಾಡನ್ನು ಮಾಡಿದನು. ಪೂರ್ವಾಪರಗಳನ್ನು ಪರಾಲೋಚಿಸುವ ಶಕ್ತಿಯನ್ನು ಪಡೆಯು ವುದೇ, ಸಕಲ ವಿದ್ಯೆಗಳಿಗೂ ಮುಖ್ಯ ಲಕ್ಷಣವು, ಅಂಧ ಶಕ್ತಿಯನ್ನುಂಟು ಮಾಡತಕ್ಕ ವಿದ್ಯಾಭ್ಯಾಸವೇ, ನಿಜವಾದ ವಿದ್ಯಾಭ್ಯಾಸವು, ಹಾಗೆ ಮಾಡು ವುದಕ್ಕೆ ಸಾಧಕವಾಗದಿರತಕ್ಕೆ ವಿದ್ಯಾಭ್ಯಾಸವು, ಎಂದಿಗೂ ಸದ್ವಿದ್ಯಾ ಭ್ಯಾಸವಾಗುವುದಿಲ್ಲ, ಅದನ್ನು ದುರ್ವಿದ್ಯಾಭ್ಯಾಸವೆಂದು ಹೇಳಬೇಕು. ಏತಕ್ಕೆಂದರೆ, ಅಂಧ ವಿದ್ಯಾಭ್ಯಾಸದಿಂದ ಪ್ರಯೋಜನವಿಲ್ಲದೆ ಹೋಗು ವುದು ಮಾತ್ರವಲ್ಲದೆ, ಕೆಲವು ಸಂದರ್ಭಗಳಲ್ಲಿ ಅನರ್ಧಗಳೂ ಆಗ ಬಹುದು,
ಪುಟ:ವಿದ್ಯಾರ್ಥಿ ಕರಭೂಷಣ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.