೭೨ ೭೨ ವಿದ್ಯಾರ್ಥಿ ಕಂಭೂಷಣ ಗ್ರವುಳ್ಳುದಾಗಿರಬೇಕು. ವ್ಯಾಸಂಗಮಾಡುವ ಕಾಲದಲ್ಲಿ ವಿಷಯಾಂ ತರಗಳಿಂದ ಆಕರ್ಷಿಸಲ್ಪಟ್ಟರೆ, ಮನಸ್ಸು ವ್ಯಾಸಂಗದಲ್ಲಿ ನಿಲ್ಲುವುದಿಲ್ಲ. ಹಾಗೆ ನಿಲ್ಲದಿದ್ದರೆ, ಅಭ್ಯಾಸಕ್ಕೆ ವಿಷಯವಾದ ಗ್ರಂಥಗಳು ಸ್ವಾಧೀನವಾ ಗುವುದಿಲ್ಲ, ಹಾಗೆ ಸ್ವಾಧೀನವಾಗದಿದ್ದರೆ, ಪರೀಕ್ಷೆಗಳಲ್ಲಿ ತೇರ್ಗಡೆಯಾ ಗುವುದಿಲ್ಲ, ಹಾಗೆ ತೇರ್ಗಡೆಯಾಗದಿರತಕ್ಕವರಿಗೆ, ವ್ಯಾಸಂಗದ ಫಲವುಂ ಟಾಗುವುದಿಲ್ಲ. ವಿದ್ಯಾರ್ಥಿಗಳು, ವ್ಯಾಸಂಗವನ್ನು ತಸಸ್ಪೆಂದು ಭಾವಿಸಿ, ಸಕಲ ಪ್ರಯತ್ನಗಳಿಂದಲೂ ತಾವು ವ್ಯಾಸಂಗಮಾಡತಕ್ಕ ಗ್ರಂಧಗಳ ತತ್ಕಾರ್ಧವು ಮನಸ್ಸಿನಲ್ಲಿ ನಿಲ್ಲುವಂತೆ ಏಕಾಗ್ರಚಿತ್ತದಿಂದ ವ್ಯಾಸಂಗಮಾ ಡಬೇಕು, ಹಾಗಿಲ್ಲದಿದ್ದರೆ, ಬುದ್ದಿ ಬಂದಿಂದ ಬದುಕಬೇಕೆಂಬ ಆಶೆಯನ್ನು ಬಿಟ್ಟು, ಕೃಷಿ-ಕೈಗಾರಿಕೆ ವ್ಯಾಪಾರ ಮೊದಲಾದುವುಗಳಲ್ಲಿ ಉದ್ಯುಕ್ತ ರಾಗಿ, ಅದರಿಂದ ಜೀವಿಸುವ ಪ್ರಯತ್ನ ವನ್ನು ಮಾಡಬೇಕು. ಇವುಗಳ ಲ್ಲಿಯೂ ಕೂಡ ಪೂರ್ವಾಪರಜ್ಞಾನವು ಅತ್ಯಂತ ಆವಶ್ಯಕವು. ಆದರೆ, ಬುದ್ದಿ ಯ), ಇಂಧ ಬೇರೆ ಕೆಲಸಗಳಲ್ಲಿ ಚುರುಕಾಗುವುದುಂಟು. ಅನೇಕ ರಿಗೆ, ಒಂದು ವೃತ್ತಿಯಲ್ಲಿ ಬುದ್ದಿಯು ಪ್ರವೇಶಿಸದಿದ್ದರೆ ಇನ್ನೊಂದು ವೃತ್ತಿ ಯಲ್ಲಿ ಪ್ರವೇಶಿಸಬಹುದು. ಆದುದರಿಂದ, ಯಾವುದರಲ್ಲಿ ಬುದ್ದಿಯೋಡು ವುದಿಲ್ಲವೋ ಅದರಲ್ಲಿ ಬುದ್ದಿಯೋಡುವಂತೆ ಮಾಡಿಕೊಳ್ಳತಕ್ಕೆ ಶಕ್ತಿಯಿಲ್ಲ ದವರು, ತಮ್ಮ ಇಷ್ಟಕ್ಕನುರೂಪವಾದ ಬೇರೆ ವೃತ್ತಿಯನ್ನವಲಂಬಿಸಿ, ಅದ ರಲ್ಲಾದರೂ ಮನಸ್ಸು ನಿಲ್ಲಿಸುವುದನ್ನು ಕಲಿತುಕೊಳ್ಳುವುದುತ್ತಮವು. ಜನ್ಮತಃ ಬೃಹಸ್ಪತಿಗಳಾಗಿ ಯಾರೂ ಹುಟ್ಟುವದಿಲ್ಲ, ಸರಸ್ವತಿಯು ಯಾರಿಗೂ ಬೀಜಾಕ್ಷರಗಳನ್ನು ಬರೆಯುವುದಿಲ್ಲ. ಜನ್ಮವನ್ನೆತ್ತಿದಾಗಲೇ
ಪುಟ:ವಿದ್ಯಾರ್ಥಿ ಕರಭೂಷಣ.djvu/೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.