ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ MM ಪರಿಚ್ಛೇದ ೨ ಪ್ರತಿಯೊಬ್ಬರೂ ಈ ರೀತಿಯಲ್ಲಿರಬೇಕೆಂದು ದೇವರು ಹಣೆಯಲ್ಲಿ ಬರೆಯು ವನೆಂಬುದೂ ವಿಜ್ರಂಭಣೀಯವಲ್ಲ, ಮಕ್ಕಳಲ್ಲಿ ತಾಯಿತಂದೆಗಳ ಬುದ್ದಿ ಶಕ್ತಿಯ ದೇಹಶಕ್ತಿಯೂ ಇರುವುವು. ಜನ್ಮವನ್ನೆತ್ತಿದಮೇಲೆ ಯಾವ ಸಹವಾಸವೂ ಯಾವ ಕರವೂ ಜನಗಳಿಗೆ ಲಭ್ಯವಾಗುವುವೋ, ಅದಕ್ಕನು ರೂಪವಾದ ಫಲವು ಅವರಿಗುಂಟಾಗುವುದು. ಸತ್ಸಹವಾಸವೂ ಸತ್ಕರ ಗಳೂ ಲಭ್ಯವಾಗಬೇಕಾದರೆ ಜನ್ಮಾಂತರ ಸುಕೃತವಿರಬೇಕೆಂದು ಹೇಳು ವದುಂಟು. ಇದು ಅದೃಷ್ಟವಾದುದಾವಾಗ್ಯೂ, ನಂಬುವುದಕ್ಕರ್ಹವಾದ ಮಾತಾಗಿರುತ್ತದೆ, ಹಾಗೆ ನಂಬದಿದ್ದರೆ, ಕಾಠ್ಯತಃ ತೋರತಕ್ಕೆ ಅನೇಕ ಪರಿಣಾಮಗಳಿಗೆ ಕಾರಣಗಳೇ ಗೊತ್ತಾಗುವುದಿಲ್ಲ, ಯಾವ ಪ್ರಯತ್ನ ಗಳನ್ನೂ ಮಾಡದೆ, ಕೆಲವರು ಕುಬೇರಪದವಿಗೆ ಬರುತ್ತಾರೆ, ಹಾಗೆ ಬರುವದಕ್ಕೆ ಉಂಟಾದ ಸನ್ನಿವೇಶಗಳು, ಜನ್ಮಾಂತರಸುಕೃತಪರಿಪಾಕ ಗಳಾಗಿರಬಹುದೆಂದು ಹೇಳಬೇಕಾಗುತ್ತದೆ. ಜನ್ಮಾಂತರಶಬ್ದಕ್ಕೆ, ಪೂರ್ವ ಚನ್ನವೆಂದು ಕೆಲವು ಸಂದರ್ಭಗಳಲ್ಲಿ ಅರ್ಧಮಾಡಲ್ಪಟ್ಟಾಗ್ಯೂ, ಇದಕ್ಕೆ ಬೇರೆಯಾದ ಅರ್ಧವು ಮಾಡಲ್ಪಡಬೇಕು. ಈ ಜನ್ಮದಲ್ಲಿ ನಾವು ಅನುಭವಿ ಸತಕ್ಕ ಶುಭಾಶುಭಗಳಿಗೆ ಕಾರಣವಾದ ಕರ್ಮಗಳು, ಇದಕ್ಕೆ ಪೂರ್ವ ದಲ್ಲಿ ಮಾಡಲ್ಪಟ್ಟಿರಬೇಕು. ಈ ದಿನ ದಿರ್ವಾಗಿರಿಮಾಡತಕ್ಕವನು ದಿರ್ವಾ ಗಿಗೆ ಹೇಗೆ ಬಂದನೆಂದು ಪರೀಕ್ಷಿಸಿದರೆ, ಅವನು ಬಾಲ್ಯದಲ್ಲಿ ಶ್ರದ್ದೆ ಯಿಂದ ವಿದ್ಯಾಭ್ಯಾಸಮಾಡಿ, ದೇಶಾಟನದಿಂದಲೂ ಪಂಡಿತಭಾಷಣ ದಿಂದಲೂ ಅಸಾಧಾರಣವಾದ ಬುದ್ಧಿ ವಿಕಾಸವನ್ನು ಹೊಂದಿ, ಪ್ರಜಾರಂ ಜನೆಯಲ್ಲಿ ಸಮರ್ಥನಾಗಿ, ಕೂಡಿದಮಟ್ಟಿಗೂ ನಿಸ್ಪೃಹತೆಯನ್ನು ಸಂಪಾ 10