ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತ ವಿವೇಕಸಾರ ಪಿ 2 ರಿ ಕೆ. ಈ ಗ್ರಂಥದಲ್ಲಿ ಅದೈತ ಮತಸಿದ್ಧಾಂತ ಪ್ರಕ್ರಿಯೆಯು ಐವತ್ತೊಂದು ಪ್ರಕರ ಣವಾಗಿ ವಿಭಾಗಿಸಲ್ಪಟ್ಟು ಪ್ರಶ್ನೆತ್ತರ ರೂಪದಲ್ಲಿ ಅಧೋತೃಗಳ ಮನಸ್ಸಿಗೆ ಸಾಲ ಭವಾಗಿ ಅಧಿರೂಢವಾಗುವಂತೆ ಕನ್ನಡದ ಭಾಷೆಯಲ್ಲಿ ಗದ್ಯರೂಪವಾಗಿ ಬರೆಯ ಲ್ಪಟ್ಟಿದೆ. ಗ್ರಂಥಕರ್ತನು, ಗ್ರಂಥದಲ್ಲಿ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ಈತನು ಯಾವ ಕನ್ನಡದೇಶದ ಯಾವ ಭಾಗದಲ್ಲಿ ಯಾವ ಕಾಲದಲ್ಲಿ ಇದ್ದವನೂ ತಿಳಿದು ಬರುವದಿಲ್ಲ. ಗ್ರಂಥಾರಂಭದಲ್ಲಿ« ಯಸ್ಯಾತ್ಮಭೂತಸ್ಯ ಗುರೋಃಪ್ರಸಾದಾದಹಂ ವಿಮುಕ್ರೋಸ್ಮ ಶರೀರಬಂಧಾತit ಸರೋಪದೇಷ್ಟು ಪುರುಷೋತ್ತಮಸ್ಯ ತಾಂತ್ರಿಸಂ ಪ್ರಣತೋಸ್ಮಿನಿತ್ಯಂ ಎಂದೂ, ( ಮಢಾನ್ವಿವೇಕಿನಃ ಕೃತ್ರಾ ಲೋಕೇ ಸರೋಪದೇಶಕಃ। ಯಸ್ತಿಷ್ಠತಿ ಚ ತಂ ಶ್ರೀಮದ್ವಾಸುದೇವಯತಿಂ ಭಜೇ | ೨೨ ಎಂದೂ ಹೇಳಿಕೊಂಡಿರುವುದರಿಂದ ಈತನು ವಾಸುದೇವನೆಂಬ ಹೆಸರುಳ್ಳ ಒಬ್ಬ ಪ್ರಸಿದ್ಧನಾಗಿಯ ಸರೋಪದೇಷ್ಟ ಕನಾಗಿಯೂ ಇದ್ದ ಯತೀಶ್ವರನ ಶಿಷ್ಯನಾಗಿ ರಬೇಕು. II ಅನುಗ್ರಹಾರ್ಥ೦ ಮತ್ಯಾಕೆ ನಾಂ ಸಂಸ್ಕೃತಾನಧಿಕಾರಿಣಾಂ! ವಿವೇಕಾರಕ್ಕೊ ತೃಣಾಂ ರಚ್ಯತೇಭಾಷಯಾ ಮಯಾ || ?? ಎಂದರೆ ಸಂಸ್ಕೃತದಲ್ಲಿ ಅನಧಿಕಾರಿಗಳಾಗಿ ಕೇಳಬೇಕೆಂಬ ಆಶೆಯುಳ್ಳ ಮನುಷ್ಯರಿಗೆ ಅನುಗ್ರಹಾರ್ಥವಾಗಿ ವಾಸುದೇವಯತೀಂದ್ರರ ವಿವೇಕಸಾರವೆನಿಸುವ ಗ್ರಂಥವು ನನ್ನಿ ೦ದ ಕರ್ಣಾಟಕ ಭಾಷಾರಚನೆಯಾಗಿ ಹೇಳಲ್ಪಡುತ್ತದೆ ಎಂದು ಹೇಳಿರುವುದ ರಿ೦ದ, ಈ ಗ್ರಂಥದ ಮೂಲವು ಸಂಸ್ಕೃತದಲ್ಲಿದ್ದಂತೆಯ, ಆ ಮೂಲಗ್ರಂಥಕರ್ತ ನು ವಾಸುದೇವಯತಿಯೆಂದೂ ಅದನ್ನು ತಾನು ಕನ್ನಡಿಸಿದಂತೆಯ ಈ ಗ್ರಂಥ ಕರ್ತನು ಹೇಳುತ್ತಾನೆ, ಸಂಸ್ಕೃತಭಾಷೆಯಲ್ಲಿ (• ವಾಸುದೇವ ಮನನ ?” ವೆಂದು ಪ್ರಸಿದ್ದವಾದ ವಚನರೂಪವಾದ ಒಂದು ಅದ್ಯೆತಗ್ರಂಥವಿದೆ, ಆ ಗ್ರಂಥವು ಬಲುಮಟ್ಟಿಗೆ ಈ ಗ್ರಂಥದ ಅಭಿಪ್ರಾಯಾನುವಾದವಾಗಿರುವುದರಿಂದಲೂ, ಈ ಗ್ರಂಥದಲ್ಲಿ ಹೇಳಿರುವಷ್ಟು ವಿಷಯಗಳು ಅದರಲ್ಲಿ ಹೇಳಿಲ್ಲವಾದುದರಿಂದಲೂ, ಈ