ಕಾದಂಬರೀಸಗ್ರಹ ೧೬ ತಗಳನ್ನೂ, ಗ್ರಾಮಗಳನ್ನೂ, ಜನಗಳನ್ನೂ, ಪಶುಗಳನ್ನೂ , ನೋಡುತ್ತಾ ಉಪನಿಷತ್ತ್ವ ರೂಪಿಣಿಯಾದ ಗೋವನ್ನು ಎಳೆಯುತ್ತಿರುವ ವಾದಿಗಳ ದೆಸೆಯಿಂದ ಸಂರಕ್ಷಿಸಲು ಕೋಲು ಬೇಕಾಗಲು, ಈ ದಂಡವನ್ನು ಧರಿಸಿರುವ ಎಂಬಂತೆ ದಂಡಧಾರಿಗಳಾಗಿ ಹೊರಟು ಗೋವಿಂದಭಗವತ್ಪಾದರ ತಪೋವನವನ್ನು ಸಾಯ೦ಕಾಲಕ್ಕೆ ಸುಯಾಗಿ ಸೇರಿ, ಚಂದ್ರಪ್ರಭವನದಿಯ ತೀರದಲ್ಲಿ ನಿಂತರು. ಆಚಾರರು, ಸಾಪದಲ್ಲಿ ಒಂದು ಗುಹೆಯೊಳಗೆ ಯೋಗಾರೂಢರಾಗಿ ಕುಳಿ ತಿರುವ ಗೋವಿಂದ ಭಗವತ್ಪಾದರನ್ನು ಕಂಡು, ಅಲ್ಲಿಗೆ ಹೋಗಿ ಗೋವಿ:ದಭಗತ್ಪಾದ ರನ್ನು ಬಹಳವಾಗಿ ಸ್ತುತಿಸಲು, ಅವರು ಬಹಿರ್ಮುಲರಾದಮೇಲೆ ಶಂಕರಯತಿಯಂ ಕುರಿತು :( ನೀನು ಯಾರು ” ಎನ್ನಲು ಶಂಕರರು ( ಸ್ಥಾಪಿ: ! ನಾನು ಸೃಥಿವಿಯಲ್ಲ; ಜಲವಲ್ಲ; ತೇಜಸ್ಸಲ್ಲ; ವಾಯವಲ್ಲ; ಆ ಶವಲ್ಲ; ಇದನೇಂದ್ರಿಯಗಳೂ ಅಲ್ಲ; ಆನಂದಸ್ವರೂಪಿಯಾದ ಪರಶಿವನೇ ನಾನಾಗಿದ್ದೇನೆ” ಎಂದುತ್ತರವಿತ್ತರು. ಅದನ್ನು ಹೇಳಿ ಗೋವಿಂದರಾದರು ( ಶಂಕರಯತಿಯೇ ! ನಿನ್ನನ್ನು ಶಂಕ ರನೆಂಬದಾಗಿ ತಿಳಿದಿರುವೆನು; ನೀನು ಲೋಕಾನುಗ್ರಹಕ್ಕಾಗಿ ಅವತರಿಸಿರುವ ದನ್ನೂ ತಿಳಿದಿರುವೆನು, ನಾನೇ ನೀನಾಗಿರುವಲ್ಲಿ ಹೇಳಬೇಕಾದ್ದೇನೂ ಇರುವದಿಲ್ಲ. ಆದರೂ, ಶುಕಾಚಾತ್ಯರ ಶಿಷ್ಯರಾದ ಗೌಡಪಾದ ದುರ್ಯಗಳಿಂದ ನನಗೆ ಉಪದೇಶಿಸಲ್ಪ ಟ್ಟಿರುವ ಬ್ರಹ್ಮವಿದ್ಯಾರಪಸ್ಸನ್ನು ನಿನಗೆ ಉಪದೇಶಿಸುತ್ತೇನೆ” ಎಂದು ಹೇಳಲು ಶಂಕ ರದೇಶಿಕರು ಓಂಕಾರವನ್ನು ಕ್ಷಸಿ ಗುರುಪಾದನೆ ಸ್ವಮಸ್ತಕರಾದರು. ಆಗ ಗುರುಗಳು ಶಿಷ್ಯನನ್ನು ಮೇಲಕ್ಕೆತ್ತಿ, ಕ್ರಮಸನ್ಯಾಸವಿತ್ತು, ಚತುರ್ವೆದ ಸಾರಗಳಾದ ಅನೇಕ ಮಹಾಮಂತ್ರಗಳನ್ನೂ ಬ್ರಹ್ಮವಿದ್ಯಾರಹಸ್ಯವನ್ನೂ , ರಾಜ ಯೋಗಸಿದ್ಯಾರಹಸ್ಯವನ್ನೂ ಉಪದೇಶಿಸಿದರು. ಶಂಕರರು ಗುರುಗಳ ಸಾಪದಲ್ಲಿ ಸೇವೆ ಮಾಡಿಕೊಂಡ ಬಹಳ ಕಾಲ ಏದ್ದರು. ಅಲ್ಲಿದ್ದ ಇತರ ಮತಗಳ ಶcತರರನ್ನು ಪರಮಹಂಸ' ರೆಂದು ಸ್ತುತಿಸು ತಿದ್ದರು. - ಒಂದಾನೊಂದು ಕಾಲದಲ್ಲಿ ಮಹರ್ಷಿಗಳೆಲ್ಲರೂ ಚಾತುರ್ಮಾಸ್ಯವ್ರತವಂ ಕೈಕೊಂಡು ಸಮಾಧಿಸಿರಾಗಿರುವ ಕಾಲದಲ್ಲಿ ಚಂದ್ರಪ್ರಭವ (ನರ್ಮದಾ) ನದಿಯ ಪೂರ್ಣಪ್ರವಾಹದೊಡನೆ ದಡಾ ಯುಯುತ್ತಿದ್ದಿತು. ಪ್ರವಾಸವು ಕ್ರಮೇಣ 4 4 JU
ಪುಟ:ಶಂಕರ ಕಥಾಸಾರ.djvu/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.