ಬ್ಬನೇ ಬ್ರಹ್ಮ ವಿಷ್ಣು ಗಳಿಗೂ ಮತ್ತು ಲೋಕಗಳಿಗೂ ಕಾರಣಭೂತನು ; ಜಗತ್ಸಂಹಾರ
ಕಾರಿಣಿಯಾದ ಶಕ್ತಿಯು ಮದಿಚ್ಛಾರೂಪಿಣಿಯು ; ನನ್ನಿಂದಲೇ ಸೃಷ್ಟಿ ಮಾಡಲ್ಪಟ್ಟ
ಆ ಶಕ್ತಿಯು ನನ್ನಿಂದಲೇ ನಾಶವನ್ನು ಹೊಂದಿ ಪುನಃ ನನ್ನಿಂದಲೇ ಸೃಷ್ಟಿಸಲ್ಪಡು
ತ್ತಾಳೆ ; ಅವ್ಯಯರಾದ ಏಕಾದಶರುದ್ರರೂ, ನನ್ನಿಂದಲೇ ಸೃಷ್ಟಿಸಲ್ಪಟ್ಟರು ; ಸೃಷ್ಟಿ
ಕರ್ತನನ್ನು
ರಾಜಸಗುಣಯುಕ್ತನನ್ನಾಗಿಯೂ, ರಕ್ಷಕನನ್ನು ಸಾತ್ವಿಕಗುಣಯುಕ್ತ
ನನ್ನಾಗಿಯೂ, ನಾಶಕನನ್ನು ತಮೋಗುಣಯುಕ್ತನನ್ನಾಗಿಯೂ ಸೃಷ್ಟಿಸಿದೆನು ; ಅವರೇ
ಬ್ರಹ್ಮ ವಿಷ್ಣು ಮಹೇಶ್ವರರು' ಎಂದು ಮೊದಲಾಗಿ ಹೇಳಿದ್ದಾನೆ. ರುದ್ರಪೂಜಾಸಕ್ತ
ರೂ, ರುದ್ರಜಪಮಾಡತಕ್ಕವರೂ, ಪಂಚಾಕ್ಷರೀಜಪರ ತರೂ, ರುದ್ರಾಕ್ಷಿಗಳಿಂದಲಂಕೃತ
ರಾದ ಅಂಗಗಳುಳ್ಳವರೂ ಮತ್ತು ವಿಭೂತಿಯಿಂದ ಬಳಿಯಲ್ಪಟ್ಟ ದೇಹಗಳುಳ್ಳವರೂ
ಆದ ಜನರು ಶಿವಲೋಕಕ್ಕೆ ಹೋಗುತ್ತಾರೆ; ಇದಲ್ಲದೇ 'ಸತ್ಯಂ ಜ್ಞಾನಮನಂತಂ'
ಇತ್ಯಾದಿ ಶ್ರುತಿವಾಕ್ಯಗಳಿಂದಲೂ ಈಶ್ವರನು ಹೇಳಲ್ಪಟ್ಟಿದ್ದಾನೆ ; ಅವನು ತನ್ನ ತೇಜ
ಸ್ಸನ್ನು ಸೂರ್ಯಾಕಾರದಿಂದ ಸೃಷ್ಟಿಸಿದನು. ;ಕ್ಲೇಶದಾಯಕನಾದ ಶನಿಯನ್ನೂ ಅವನೇ
ಸೃಷ್ಟಿಸಿದನು ; 'ನತತ್ರಸೂರ್ಯೋಭಾತಿನ ಚಂದ್ರತಾರಕಂ' ಇತ್ಯಾದಿ ಶೃತಿವಾಕ್ಯಗ
ಳಿಂದ ಸೂರ್ಯಾದಿಮಂಡಲಗಳೂ ಈಶ ತೇಜಸ್ಸಿಲ್ಲದೆ ಸ್ವಯಂ ಪ್ರಕಾಶಿಸಲಾರವು; ಆದ್ದ
ರಿಂದ ನೀವೂ ನಮ್ಮಂತೆ ಚಿಹ್ನಧಾರಣೆಯಂ ಮಾಡಿಕೊಂಡು ಈಶ್ವರನನ್ನು ಉಪಾಸನೆ
ಮಾಡಿ ” ಎಂದರು.
ಹೀಗೆ ಹೇಳಲ್ಪಟ್ಟ ಆಚಾರ್ಯರು "ಎಲೈ ಮೂಢರೇ ! ಒಬ್ಬ ದೇವನೇ ಬ್ರಹ್ಮ
ರೂಪದಿಂದ ಸೃಷ್ಟಿಸಿ, ವಿಷ್ಣು ರೂಪದಿಂದ ರಕ್ಷಿಸಿ ರುದ್ರರೂಪದಿಂದ ಪ್ರಳಯವಂ
ಮಾಡುತ್ತಾನೆ. ನಾಭಿಯ ಮೇಲುಭಾಗದಲ್ಲಿ ಸೋಮಸರೂ, ನಾಭಿಯ ಕೆಳಭಾಗದಲ್ಲಿ
ಅಸೋಮಸರೂ ಆದ ದೇವತೆಗಳು ಇದ್ದಾರೆ. ವೇದವೇದಾಂತಸಾರಗನಾದ ಬ್ರಾಹ್ಮಣನ,
ಶಿಖಾ, ಶಿರ, ಲಲಾಟ, ಕಿವಿ, ಮೂಗು, ಕಪೋಲ , ಜಿಹ್ವಾ, ಓಷ್ಯ, ಚಿಬುಕ, ಕಂಠ,
ಅಂಸದ್ವಯ, ಭುಜದ್ವಂದ್ವ, ಬಾಹುಯುಗ್ಮ, ಹಸ್ತಯುಗ, ವಕ್ಷಸ್ಸು, ನಾಭಿ, ಕಟಿ,
ಲಿಂಗ, ವೃಷಣ, ಊರು, ಜಾನುಕ, ಗುಲ್ಬದ್ವಯ, ಪಾದಯುಗ್ಮ, ಇವುಗಳನ್ನು ನಾನೇ
ಮೊದಲಾದ ದೇವತೆಗಳೂ, ಪಿತೃಗಳೂ, ಮುನಿಗಳೂ, ಆಶ್ರಯಿಸಿಕೊಂಡು,
ಸ್ನಾನಾದ್ಯಾಹಾರವಮಿಶ್ರಿತಗಳಾದ ನಿತ್ಯಕರ್ಮಗಳಿಂದ ತೃಪ್ತರಾಗುತ್ತೇವೆ. ಎಂದು
ಬ್ರಹ್ಮನು ಅರುಣಕೇತುವಿಗೆ ಹೇಳಿದ್ದಾನೆ .'ಬ್ರಾಹ್ಮಣನ ದೇಹದಲ್ಲಿ ಸಕಲ ದೇವತೆಗಳು
ವಾಸಿಸುತ್ತಾರೆ' ಎಂದು ಶೃತಿವಾಕ್ಯವು ಬೋಧಿಸಿದರೂ, ದೇಹಕ್ಕೆ ತಾಪಮಾಡಿದರೆ
ಶೀರ್ಷಾದಿವಾಸಿಗಳಾದ ದೇವತೆಗಳು ಇವನನ್ನು ಶಪಿಸಿ ಓಡಿಹೋಗುತ್ತಾರೆ; ವ್ಯಾಧಿಯಿ
ಲ್ಲದೆ
ಕರ್ಮಯೋಗ್ಯವಾದ ದೇಹದಲ್ಲಿ ಚಿಹ್ನೆಯನ್ನು ನೋಡಿದರೆ ಲೋಕೇಶ್ವರ
ಪುಟ:ಶಂಕರ ಕಥಾಸಾರ.djvu/೬೮
ಈ ಪುಟವನ್ನು ಪ್ರಕಟಿಸಲಾಗಿದೆ
೫೨
ಕಾದಂಬರೀಸಂಗ್ರಹ