ರಾದ ಶಂಕರಾಚಾರ್ಯರನ್ನು ಕುರಿತು "ಎಲೈ,ಬ್ರಾಹ್ಮಣನೇ ! ನಿನ್ನನ್ನು ನೋಡಿದರೆ
ಶಿವಪೂಜಾಧುರಂಧರನಂತೆ ಕಾಣುವಿ ; ಆದರೆ ನೀನು ನನ್ನಂತೆ ಕಪಾಲವಂ ಮಾತ್ರ
ಧರಿಸಿಲ್ಲ ; ಕಪಾಲವನ್ನು ಧರಿಸದಿದ್ದರೆ ಶಿವನು ತೃಪ್ತನಾಗುವುದಿಲ್ಲವೆಂದು ನೀನರಿ
ಯೆಯೋ ? ಇನ್ನು ಮೇಲಾದರೂ, ನರಕಪಾಲವಂ ಧರಿಸಿ ದೇವರನ್ನು ತೃಪ್ತಿಗೊಳಿಸು”
ಎಂದನು.
ಅದನ್ನು ಕೇಳಿ ಆಚಾರ್ಯರು ಕೋಪದಿಂದ ಅವನನ್ನು ತಮ್ಮ ಗುಂಪಿನ ದೆಸೆ
ಯಿಂದ ಬಹಿಷ್ಕಾರವನ್ನು ಮಾಡಲು, ಆ ಕ್ರಕಚನು ಇದರಿಂದ ಕ್ರುದ್ಧನಾಗಿ ಹೊರಕ್ಕೆ
ಹೋಗಿ ತನ್ನ ಶಿಷ್ಯರಾದ ಲಕ್ಷಾಂತರಮಂದಿಗಳಿ೦ ಸಹಿತನಾಗಿ ಯುದ್ಧಕ್ಕೆ ಬಂದನು.
ಆಗ ಸುಧನ್ವರಾಯನು ಧನುರ್ಬಾಣಧರನಾಗಿ ಯುದ್ಧಕ್ಕೆ ನಿಂತನು.
ಆದರೂ ಕಾಪಾಲಿಕರು ಬ್ರಾಹ್ಮಣರಮೇಲೆ ನುಗ್ಗಿ ಬಂದರು. ಅದನ್ನು ನೋಡಿ
ಶಂಕರಭಗವತ್ಪಾದರು ಕೋಪದಿಂದ "ಹಾ” ಎನ್ನಲು ಅವರೆಲ್ಲರೂ ಭಸ್ಮೀಕೃತ
ರಾದರು
ತನ್ನ ಶಿಷ್ಯರೆಲ್ಲಾ ನಾಶವಾದದ್ದನ್ನು ಕಂಡು ಕ್ರಕಚನು ತನ್ನ ಕೈಲಿದ್ದ ಕಪಾ
ಲದ ಮದ್ಯದಲ್ಲಿ ಅರ್ಧವನ್ನು ಪಾನಮಾಡಿ ಕಪಾಲಭೈರವನನ್ನು ಧ್ಯಾನಿಸಲು, ಭೈರ
ವನು ಕೂಡಲೇ ಪ್ರತ್ಯಕ್ಷನಾದ್ದನ್ನು ನೋಡಿ
ಕ್ರಕಚನು ನಿನ್ನ ಭಕ್ತಜನದ್ರೋಹಿ
ಯಾದ ಇವನನ್ನು ಕೊಲ್ಲು" ಎನ್ನಲು ನನ್ನ ವತಾರರೂಪಿಯಾದ ಶ್ರೀಶಂಕರನಲ್ಲಿ
ಹೇಗೆ ಅಪರಾಧವನ್ನಾಚರಿಸುವಿ? ” ಎಂದು ಕೋಪಗೊಂಡವನಾಗಿ ಆ ಕ್ರಕಚನನ್ನೇ
ಸಂಹರಿಸಿ ಅಂತರ್ಹಿತನಾದನು.
ಅನಂತರ ಕೌಪೀನಮಾತ್ರಧಾರಿಯಾದ ಒಬ್ಬ ಕ್ಷಪಣಕನು, ಒಂದು ಕೈನಲ್ಲಿ
ಗೋಲಯಂತ್ರವನ್ನೂ, ಮತ್ತೊಂದರಲ್ಲಿ ತುರೀಯಂತ್ರವನ್ನೂ ಧರಿಸಿದವನಾಗಿ ಬಂದು
ಆಚಾರ್ಯರನ್ನು ಕುರಿತು "ಸ್ವಾಮೀ ! ಅತ್ಯಂತ ಆಶ್ಚರ್ಯಕರವೂ ಶುಭದಾಯಕವೂ,
ಆದ ನನ್ನ ಮಾತನ್ನು ಕೇಳಿ ; ಪೂರ್ಣಸಮಯನೆಂದು ಹೆಸರುಳ್ಳ ನಾನು ಕಾಲಪ್ರವ
ರ್ತಕನಾದ ಸೂರ್ಯನನ್ನು ಈ ಯಂತ್ರಗಳಿಂದ ಬಂಧಿಸಿ ತ್ರಿಲೋಕಗಳಲ್ಲಿ ನಡೆ
ಯುವ ಶುಭಾಶುಭಗಳನ್ನು ತಿಳಿಯುತ್ತೇನೆ ; ನಾನು ಯಾವುದನ್ನು ಒಳ್ಳೆಯದೆಂದು
ನಂಬಿರುವೆನೋ ಅದನ್ನು ತಪ್ಪಿಸಲು ಕಾಲನೂ ಸಮರ್ಥನಲ್ಲ ; ಆದ್ದರಿಂದ ಕಾಲಜ್ಞಾ
ನದಿಂದ ಜ್ಞಾನವನ್ನು ಸಂಪಾದಿಸಿ ತನ್ಮೂಲಕ ಮೋಕ್ಷವನ್ನು ಹೊಂದಬೇಕಲ್ಲದೆ ಬೇರೆ
ಅಲ್ಲ.” ಎಂದನು.
ಪುಟ:ಶಂಕರ ಕಥಾಸಾರ.djvu/೭೭
ಈ ಪುಟವನ್ನು ಪ್ರಕಟಿಸಲಾಗಿದೆ
ಶಂಕರಕಥಾಸಾರ
೬೧