೨೧ ಶ+ಮ . ಗಳನ್ನು ನಾಚಿಸುವಂತಹ ನೀಲನಯನಗಳು ಇವೆಲ್ಲವುಗಳು ಅತ್ಯಂತ ಗರ್ವಯುಕ್ತವಾದ ಆಕೆಯು ಶ್ರೇಷ್ಠ ಸೌಂದರ್ಯವನ್ನು ಹೊರಚೆಲ್ಲುತ್ತಿ ದೃವು, ಆಕೆಯ ಮುಖದ ಈ ಪ್ರಕಾರದ ತೇಜಸ್ಸು, ಮಾಸಿದ ಆಕೆಯ ಸೀರೆ, ಕೊಂಕಿದಮುಂಗುರುಗಳ ಸ್ಪರ್ಶದಿಂದಯುಕ್ತವಾದ ಕಣ್ಣುಗಳ ಪ್ರೇಮಚಾಂಚಲ , ತುಟಿಗಳ ಆನಂದವಿನ್ನೂರಿತಭಾವ ಇವುಗಳಲ್ಲಿ ಆ ತಿಮಧುರವಾದ ಕೋಮಲ ಲಾವಣ್ಯವನ್ನು ಉಂಟುಮಾಡುತ್ತಿತ್ತು, ಆಕೆಯ ಈ ಪ್ರಕಾರದ ಅತ್ಯುತ್ಕೃಷ್ಟ ರೂಪವನ್ನು ನೋಡಿದ ಕುಮಾ ಸಿಗೆ ಅರಣ್ಯವಾಸಿಸಿಯಾದ ಶಕುಂತಲೆಯನ್ನು ನೋಡಿದ ದುಷ್ಯಂತನು ಹೊರಡಿಸಿದ ಉದ್ದಾರವು ನೆನಪಿಗೆ ಬರಲು, ಅವನು ಸರಸಿಜಮನುವಿದ್ದಂ ಶೈವಲೇನಾಪಿ ರಮ್ಯ೦! ಮಲಿನಮ: ಮಾಂಶೂರ್ಲಕ್ಷ್ಯ ಲಕ್ಷ್ಮಿ೦ ತನೋತಿ|| ಇಯಮಧಿಕಮನೋಜ್ಞಾ ವಕ್ಕಲೇನಾಪಿ ತ! ಕಿಮಿವಹಿ ಮಧುರಾಣಾಂ ಮಂಡನನ್ನಾ ಕೃತೀನಾಂ !!೧!! ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿರಲು ಅವನಲ್ಲಿ ದೇಹ ಭಾನವು ಇಲ್ಲದಾಯಿತು. ಯಾವ ಶಕ್ತಿಯು ತಾನು ಹದಿನಾಲ್ಕು ವರ್ಷದವನಿರುವಾಗ ಸರೋವರತೀರದ ಉಪವನದಲ್ಲಿ ತನ್ನ ಬಾಲ್ಯಸ ವಿಯ ರಾಣಿಯ ಆಗಿದ್ದಳೊ, ಆಕೆಯೇ ಈಗ ಇಲ್ಲಿ ಬಂದಿರು ವಳಲ್ಲ, ಎಂಬ ಆನಂದದಿಂದ ಮಗ್ನನಾದ ಅವನು, ಮೆಲ್ಲಮೆಲ್ಲನೆ ನಿಂತಳಬಿಟ್ಟು ಆಕೆಯ ತೀರ ಸಮೀಪಕ್ಕೆ ಹೋಗಿ ಕುಳಿತುಕೊಂ ಡದ್ದು ಕೂಡಆವನಿಗೆ ಸ್ಮರಣದಲ್ಲುಳಿಯಲಿಲ್ಲ.ಯಾವಾಗಶಕ್ತಿಯು 'ರಾಜಕುಮಾರ ಆಗಿನಂತೆ ಈಗಾದರೂ ಕೊಳಲೂದುತ್ತಿರುವೆಯಾ?' ಎಂದು ಪ್ರಶ್ನೆ ಮಾಡಿದಳೋ ಆವಾಗ ಅವನಿಗೆ ದೇಹಭಾನಉಂಟಶ ದಂತಾಯಿತು. ಆಗ ಅವನು ಒಂದು ದೀರ್ಘ ನಿಶ್ವಾಸವನ್ನು ಬಿಟ್ಟು ತುಸಸರಿದು ಕುಳಿತನು, ಆದರೆ ಕೂಡಲೆ ಅಲ್ಲಿಂದೆದ್ದು ತನ್ನ ಪೂರ್ವದ
ಪುಟ:ಶಕ್ತಿಮಾಯಿ.djvu/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.