ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4

  • ಚಂದ್ರಿಕ, ಅವಶ್ಯಕವಾಗಿದೆ.
  • ಶಕ್ತಿ-ನಮಗೆ ಯಾವದರಿಂದ ಅನಂತ ಕಷ್ಟಗಳಾಗುವವೋ ಆ ಮಾಯೆಯೇ ಭಗವಂತನ ಉದ್ದೇಶಸಿದ್ಧಿಗೆ ಕಾರಣವೋ? ಹಾಗಾ ದರೆ ಈಶ್ವರನು ದಯಾಮಯನಲ್ಲ; ಅವನು ನಿಷ್ಟುರನೂ ಅಂತಃಕ ರಣಹೀನನೂ ಆಗಿರುತ್ತಾನೆ.

ಮುಸಲ್ಮಾನ-ಅವನು ನಿಮ್ಮ ರನೂ ಅಲ್ಲ; ದಯಾಮಯನೂ ಅಲ್ಲ, ಅವನ ಆದೇಶದಂತೆ ಯಾರು ನಡೆಯುವರೋ ಅವರಿಗೆ ಸುಖ ವಾಗುವದು; ಹಾಗೂ ಯಾರು ಅದಕ್ಕೆ ವಿರುದ್ಧವಾಗುವರೋ ಅವರಿಗೆ ದುಃಖವಾಗುವದು. ಮುಸಲ್ಮಾನನ ಈ ಭಾಷಣದ ಭಾವವು ಶಕ್ತಿಯ ತಲೆಯಲ್ಲಿ ಚೆನ್ನಾಗಿ ಬಿಂಬಿಸಲಿಲ್ಲ. ಯಾಕಂದರೆ ಅವಳ ಲಕ್ಷ್ಯವು ಬೇರೆಕಡೆಗೆ ಹರಿಯುತ್ತಿತ್ತು. ಆದ್ದರಿಂದ ಅವಳು ತಿರಸ್ಕಾರಯುಕ್ತವಾಗಿ ಭಗವಂತನಾದರೂ ಸೇಡನ್ನು ಬಯಸುವನೊ? ಅದು ಎಲ್ಲಿಯೂ ಬಿಟ್ಟಿ ಇವಷ್ಟೇ? ಹಾಗಾದರೆ ಈ ಕ್ಷುದ್ರಬಾಲೆಯ ಸೇಡಿನ ಇಚ್ಛೆಯಾ ದರೂ ದೋಷಯುಕ್ತವಾಗಲಾರದು. ಮುಸಲ್ಮಾನ...ಅದು ದೋಷವೇ ಆಗಿದ್ದರೆ ಭಗವಂತನು ಅಂಥ ಪ್ರವೃತ್ತಿಯನ್ನಾದರೂ ಏಕೆ ಕೊಡುತ್ತಿದ್ದನು? ಅನ್ಯಾಯಕ್ಕೆ ಯೋಗ್ಯ ಪ್ರತಿಫಲ ಕೊಡದಿದ್ದರೆ ಆ ಭಗವಂತನಾದರೂ ನ್ಯಾಯಿಯೆಂ ದು ಹ್ಯಾಗೆ ಅನ್ನಿಸಿಕೊಳ್ಳುತ್ತಿದ್ದನು! ನ್ಯಾಯವೇ ಅನ್ಯಾಯದಸೇಡು. ಶಕ್ತಿ--ನಾನು ಅದನ್ನೇ ಬಯಸುವೆನು, ಸೇಡು, ದೇವರೇ ನಾನು ಸೇರನ್ನು ಬಯಸುತ್ತೇನೆ; ಆದರೆ ಆ ವಿಶ್ವಾಸಘಾತಕನ-ಆ ಹೃದಯಭೇದಕನ ಸೇಡು ತೀರುವ ಬಗೆಯು ಈ ಸಂಸಾರದಲ್ಲಿ ಯಾವ ಪ್ರಕಾರದಿಂದಾದರೂ ಸಾಧಿಸಬಹುದೇ? ಮುಸಲ್ಮಾನನುಗಂಭಿರಸ್ವರದಿಂದ(ದೈವವಾಣಿಯಂತೆ)-ರಕ್ತ