& ಶಕ್ತಿಮಯಿ, ಪಾತ-ರಕ್ತಪಾತವನ್ನು ಮಾಡಿದರೂ ಭಗವಾನನು ನಿನ್ನನ್ನು ಕ್ಷಮಿ... ಶಕ್ತಿಯಿಂದ ಮುಂದಿನ ವಚನಗಳನ್ನು ಕೇಳುವದಾಗಲಿಲ್ಲ. ಫಕೀರವೇಷಧಾರಿಯಾದ ಮುಸಲ್ಮಾನನ ಅಂತರಂಗದ ಸೇಡಿನ ಸ್ವರೂಪ ವನ್ನು ತಿಳಿದ ಶಕ್ತಿಯ ಹೃದಯವು ಸಿಟ್ಟಿನಿಂದಲೂ ಅವಮಾನದಿಂದ ಲೂ ಕಂಪಿಸತೊಡಗಿತು. ಆಗ ಅವಳು ಇಲ್ಲ; ನಾನು ಅವನ ಮರಣವನ್ನು ಬಯಸುವದಿಲ್ಲ. ಅವನ ವಿಷಯದ ನನ್ನ ಸೇಡು ಅವ ನ ಮರಣವನ್ನು ಕುರಿತು ಇರುವದಿಲ್ಲ. ನಾನು ಅವನನ್ನು ಪ್ರೀತಿ ಸುತ್ತೇನೆ. ಗಣೇಶದೇವನು ನನ್ನಲ್ಲಿಯ ಪ್ರೇಮದಿಂದ ಉನ್ಮತ್ತನಾಗಿ ಎಂದಿಗೆ ತಾಯಿ, ಬಂಧುಬಳಗ, ಮುಂತಾದವರನ್ನು ಕೂಡ ಬಿಡಲಿಕ್ಕೆ ಸಿದ್ಧನಾಗುವನೋ ಮತ್ತು ಅವನು ನನ್ನ ವಾಕ್ಯವೇ ಅನುಗ್ರಹವಾಕ್ಯ ವೆಂದು ಭಾವಿಸಿ ಪ್ರತ್ಯಕ್ಷ ನರಕದಲ್ಲಿ ಬೀಳಲಿಕ್ಕೆ ಕೂಡ ಹಿಂದೆಮುಂದೆ ನೋಡಲಿಕ್ಕಿಲ್ಲವೋ ಅದೇ ದಿವಸ ನನ್ನ ಹೃದಯದ ಆಶೆಯು ತೀರಿದಂ ತಾಗುವದು. ಇದೇ ನನ್ನ ಸೇಡು. ಇದರ ವಿನಃ ಮತ್ತೇನನ್ನೂ ನಾನು ಬಯಸುವದಿಲ್ಲ, ಮುಸಲ್ಮಾನನು ವ್ಯಂಗ್ಯವಾಗಿ ನಕ್ಕು-ಇಚ್ಛಿಸಿದರೆ ನೀನು ಇಂಥನೂರಾರು ರಾಜಮಹಾರಾಜರ ಹೃದಯಗಳನ್ನು ಕಾಲಿನಿಂದ ತುಳಿ ಯಬಲ್ಲೆ. ಈ ಸಾಮಾನ್ಯನ ಅನುಗ್ರಹವನ್ನು ಬಯಸುವ ಭಿಕ್ಷು ಕಿಯೇ, ಇದೇ ಏನು ನಿನ್ನ ಸೇಡಿನ ಗುಟ್ಟು? ಮುಸಲ್ಮಾನನ ಮಾತನ್ನು ಕೇಳಿ ಶಕ್ತಿಗೆ ಪುರಾತನ ಸಂಗತಿ ಯು ನೆನಪಿಗೆ ಬಂತು. ಹುಟ್ಟಿದಾಗಿನಿಂದ ಆಕೆಯನ್ನು ನೋಡಿದ ಎಲ್ಲ ಜ್ಯೋತಿರ್ವಿದರು ಆಕೆಗೆ ನೀನು ರಾಜರಾಜೇಶ್ವರಿಯಾಗುವೆ ಎಂಬದೊಂದೇ ಮಾತನ್ನು ಹೇಳುತ್ತ ಬಂದಿದ್ದರು. ಜೋಯಿಸರು “ಈಕೆಯ ಹದಿನೈದನೆಯ ವರ್ಷ ಈಕೆಯ ಸ್ವಯಂವರವಾಗುವ ದೆಂದು ಈಕೆಯ ಜನ್ಮ ಕುಂಡಲಿಯಲ್ಲಿ ಬರೆದಿಟ್ಟ ಮಾತಿನಲ್ಲಿ ವಿಶ್ವಾಸ
ಪುಟ:ಶಕ್ತಿಮಾಯಿ.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.