ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ರಮ, ೭ ದಿಲ್ಲ. ಸದಾ ಶಾಂತಸ್ವಭಾವದ ಆ ಸುಗುಣ ಖನಿಯು ತನ್ನಂತೆ ಎರಡ ನೆಯವರೆಲ್ಲರೂ ಸರಳ ಸ್ವಭಾವದವರೇ ಇರುತ್ತಾರೆಂದು ಭಾವಿಸಿ ನಡೆ ಯುತ್ತಿದ್ದಳು. ಆದ್ದರಿಂದ ಆ ಪ್ರೇಮಲಮೂರ್ತಿಯು ಕುಮಾರನನ್ನು ಕೇವಲ ಪ್ರೇಮ ವಾತ್ಸಲ್ಯದಿಂದ ಹುಡುಕ ಬಂದಿದ್ದಳೇ ಹೊರತು, ಮತ್ತಾವ ಕುತ ನೆವಕ್ಕಾಗಿ ಬಂದಿದ್ದಿಲ್ಲ. ಆಕೆಯು ಉಪವನವನ್ನು ಹೊಕ್ಕಳು, ಕುಮಾರನೆಲ್ಲಿಯಾದರೂ ಗಾನ ಲೋಲುಪನಾಗಿ ವಿಶ್ರ ಮಿಸಿರಬಹುದೆಂದು ತಿಳಿದು ಆಕೆಯು ಅಲ್ಲಲ್ಲಿ ನಿಂತು ದನಿಯನ್ನು ಆಲಿಸಹತ್ತಿದಳು. ಯಾವ ಕಡೆಯಿಂದಲೂ ಆಕೆಗೆ ಸ್ವರವು ಕೇಳಿಸ ಲಿಲ್ಲ. ಬಳಿಕ ದಿನಾಲು ತಾನು ಕುಮಾರನೊಡನೆ ಸುಖಸಲ್ಲಾಪಗಳ ನಾಡುತ್ತ ವಿಹರಿಸುವ ಆ ಉಪವನದ ಮಧ್ಯಭಾಗದ ಕಡೆಗೆ ನಡೆ ದಳು, ಆ ಭಾಗದಲ್ಲಿ ಮಲ್ಲಿಗೆ, ಸಂಪಿಗೆ, ಜಾಜಿ, ಗುಲಾಬಿ, ಸುರಿಗೆ ಮುಂತಾದ ಅತ್ಯುತ್ತಮ ಪುಷ್ಪಗಳ ಲತಾಮಂಟಪಗಳು ಬಹು ಸೊಗ ಸಾಗಿ ಹಚ್ಚಲ್ಪಟ್ಟಿದ್ದವು ಅವುಗಳ ಮಧ್ಯದಲ್ಲಿ ಒಂದೆರಡು ಕಾರಂ ಜಿಗಳು ತುಂತುರವನಿಗಳನ್ನು ಚಿಮ್ಮುತ್ತಿದ್ದವು. ಕಾರಂಜಿಯ ಸುತ್ತಲು ಕೆಲವು ಅಂತರದ ಮೇಲೆ ಗೋಲಾಕಾರವಾಗಿ ಕಲ್ಲಿನ ಆಸನಗಳು ನಿರ್ಮಿ ಸಲ್ಪಟ್ಟಿದ್ದವು. ನಮ್ಮ ಕುಮಾರನಾದರೂ ಆ ಆಸನಗಳಲ್ಲೊಂದರಲ್ಲಿ ಧ್ಯಾನಸ್ಥನಾಗಿ ಕುಳಿತದ್ದು ನಿರೂಪಮೆಗೆ ಕಂಡಿತು. - ಆಗ ಅವಳು ತನ್ನ ಕಾಲ ಸಪ್ಪಳವನ್ನು ಮಾಡದೆ ಕುಮಾರನ ಹಿಂಬದಿಗೆ ಹೋಗಿ ತುಸು ಅ೦ತರದ ಮೇಲೆ ನಿಂತಳು. ಕುಮಾರನು ಇದಾವುದನ್ನೂ ಅರಿಯನು. ಅವನು ಶಕ್ತಿಯ ಬಗ್ಗೆ ಮನದಲ್ಲಿ ಯೋಚಿಸುತ್ತಿರಲು ಅವನ ಬಾಯಿಂದ ಅಕಸ್ಮಾತ್ತಾಗಿ ಬಾ, ಇತ್ತ ಬಾ; ವಿಂಚಿಹೋದ ಮಾತಿಗೆ ಚಿಂತಿಸಿ ಫಲವೇನು? ನಾನು ಏನು ಮಾಡಿದರೆ ನಿನಗೆ ಸಂತೋಷವೆನಿಸೀತು?ಹ್ಯಾಗೆ ನಡೆದರೆ ಹಿತವಾದೀತು? ಭಗವಾನ್, ನನ್ನ ಯಾವ ಅಪರಾಧದ ಸಲುವಾಗಿ ನನ್ನಿಂದ ಅವಳಿಗೆ