೩೨ ++++ + +
- *
ಸ, ಚಂದ್ರಿಕ. ಹೀಗೆ ತಾಪವನ್ನು ಂಟು ಮಾಡಿದೆ? ಆಕೆಯ ಅಖಂಡ ಪ್ರೇಮಕ್ಕೆ ನನ್ನಿಂದ ಈ ತರದ ಸನ್ಮಾನವೇ? ಹಾ ಏನು ಮಾಡಲಿ, ಹ್ಯಾಗೆ ಮಾಡಲಿ? ಎಂಬ ದಶಾಕ್ಷರೀ ಮಂತ್ರವನ್ನು ಜಪಿಸುತ್ತ ಕುಳಿತುಕೊ ಳ್ಳಬೇಕಾಯಿತಲ್ಲ! ಎಂಬ ಶಬ್ದಗಳು ಹೊರಟವು. ನಿರೂಪಮೆಗೆ ಕುಮಾರನ ಭಾಷಣದ ಮಥಿತಾರ್ಥವಾಗಲಿಲ್ಲ. ಅದರಿಂದ ಆಕೆಗೆ ವಿಪಾದ ವಾಗುವದೊತ್ತಟ್ಟಿಗೇ ಉಳಿದು, ಅವಳು ಪ್ರೇಮ ಭರದಿಂದ ನಿಸ್ತಬ್ಬವಾದ ಆ ಏಕಾಂತದಲ್ಲಿ ಒಮ್ಮೆಲೆ ಮುಂದ ರಿದು ಹಿಂಬದಿಯಿಂದಲೇ ಕುಮಾರನ ಕಣ್ಣು ಮುಚ್ಚಿದಳು. ಕುಮಾರ ನಿಶಕ್ತಿಯೇ ತನ್ನ ಕಣ್ಣ ಮುಚ್ಚಿರುವಳೆ೦ಬ ಭಾಸವಾಗಲು, ಅವನುಶಕ್ತಿ, ಎಲೆ ಶಕ್ತಿ, ಬಿಡು, ಕಣ್ಣು ಬಿಡು, ಎಂದನು. ಕೂಡಲೆ ನಿರೂಪಮೆಯ ಎಯ ದಾರಕರು, ಕೈಕಾ ಲುಗಳು ನಡುಗಹತ್ತಿದವು. ಸಿಟ್ಟಿನಿಂದ ತುಟಗಳ ಕಾತರ ಹೊಂದಿ ದಪು. ಅಗ ಅವಳು ಕುವರನನ್ನು ಕುರಿತು ನಾನು ನಿರೂಪ ಮಯು! ಎಂಬದಿಷ್ಟೇ ಉತ್ತರವನ್ನು ಕೊಟ್ಟಳು. ನಿರೂಪಮೆಯು ಸದಾ ಶಾಂತ ಸ್ವಭಾವದವಳೂ, ಸುಗುಣ ಪೂರ್ಣಳೂ ಆಗಿದ್ದರೂ ಆಕೆಯು ಹೀಗೆ ಕ್ರೋಧವಶಳಾದಳೇಕೆ? ಅವಳಾದರೂ ಸ್ತ್ರೀ ಸ್ವ ಭಾ ವ ದ ೦ ತೆ ಸವತಿ ಮತ್ಸರದಿಂದಲೇ ಹೀಗೆ ವರ್ತಿಸಿದಳೆಂದು ವಾಚಕರು ಅಂದುಕೊಳ್ಳ ಬಹುದು, ಆದರೆ ಹಾಗಲ್ಲ; ನಿರೂಪಮೆಯು ಕ್ರೋಧವಶಳಾಗಲಿಕ್ಕೆ ಸವತಿಮತ್ಸರವು ಕಾರಣವಾಗಿದ್ದಿಲ್ಲ. ಅಂಥ ದುಷ್ಟತನವು ಇದ್ದರೆ ಆಕೆಯು ಸದಾ ಶಾಂತಳೂ, ಸುಗುಣಪೂಣ೯ ಹ್ಯಾಗಾಗುತ್ತಿದ್ದಳು. ಆದರೆ ಶಕ್ತಿ ಯು ಕುಮಾರನ ಬಾಲ ಸಬಿಯ, ಅತ್ಯಂತ ಪ್ರೇಮಪಾತ್ರಳೂ ಆಗಿದ್ದರೂ ಆ ಶಕ್ತಿಯು ಕೆಲವು ದಿವಸಗಳ ಮುಂಡ ಪರ ಪುರುಷನಯವನನ ಅರ್ಧಾಂಗಿನಿಯಾಗಿರಲು, ಕುಮಾರನು ಅಂಧ ಆ ಭ್ರಷ್ಟಶಕ್ತಿ ಮಯಿಯ ಹೆಸರನ್ನೆತ್ತಿದ್ದನ್ನು ಕೇಳಿ ನಿರೂಪನೆಗೆ ಸಿಟ್ಟು ಬಂದಿತು,