ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಕರ್ಣಾಟಕ ಕಾವ್ಯಕಲಾನಿಧಿ ಕೊಂಡು ಪೋದ ಉಂಗರದಿಂ ದುಷ್ಯಂತರಾಯನು ಸಂತುಷ್ಟನಾದನೆಂಬುವುದನ್ನು ಇವನಿಗೆ ಕೊಟ್ಟು ಕಳುಹಿಸಿದ ಉಡುಗೊರೆಯೇ ಹೇಳುತ್ತಿರುವುದು ಎನಲು; ಆ ಸೂಚಕನು- ಎಲೆ ಜಾನುಕನೇ, ರತ್ನಖಚಿತವಾಗಿ ಶ್ರೇಷ ಮಾದ ಆ ಉಂಗರವಂ ನೋಡಿದ ಮಾತ್ರದಿಂದಲೇ ರಾಯನು ಸಂತೋಷಯುಕ್ತ ನಾಗಲಾನು, ಇನ್ನೇನೋ ಕಾರಣವಿರುವುದು ಎಂದು ಊಹಿಸುತ್ತಿರುವೆನು. ಅಲ್ಲಿ ನಡೆದ ಸಂಗತಿಯೆಲ್ಲವೂ ಗ್ರಾಮಾಧಿಪತಿಗೆ ತಿಳಿದಿರಬಹುದು' ಎಂದು ನುಡಿಯಲು, ಆ ಗ್ರಾಮಪಾಲಕನು-'ಎಲೈ ಸೂಚಕನೇ ನಾನು ತೆಗೆದುಕೊಂಡು ಪೋದ ರತ್ನಾಂಗುಳಿಯ ದರ್ಶನದಿಂ ರಾಯನು ತನಗೆ ಪ್ರೇಮಪಾತ್ರವಾದ ಒಬ್ಬಾನೊಬ್ಬ ಜನವಃ ಸ್ಮರಿಸಿಕೊಂಡು ಒಂದು ಮುಹೂರ್ತ ಗಂಭೀರಸ್ವಭಾವನಾಗಿರ್ದು, ಆ ಬಳಿಕ ಕಣ್ಣೀರಿನಿಂ ಕೂಡಿದ ನೇತ್ರವುಳ್ಳವನಾಗಿ, ಅಧಿಕ ವ್ಯಸನಾತುರನಾದನು ” ಎಂದು ನುಡಿಯಲು ; ಆ ಸೂಚಕನು: ಎಲೈ ಸ್ವಾಮಿಯೇ, ನೀನು ಪೋಗಿ ಜಗತ್ತಿಗೆಲ್ಲಾ ಒಡವೆ ಯಾದ ದುಷ್ಯಂತರಾಯನ ನೇತ್ರಂಗಳಲ್ಲಿ ನೀರು ಬರುವಂತೆ ಚೆನ್ನಾಗಿ ಸೇವೆಯಂ ಮಾಡಿದೆ.” ಎಂದು ನುಡಿಯಲು : ಆ ವಾಕ್ಯಕ್ಕೆ ಜಾನುಕನು, ಎಲೈ ಸೂಚಕನೇ, ಗ್ರಾಮಾಧಿಪತಿಯಾದ ವನು ಏನು ಕಾರ್ಯವು ಪುರದಲ್ಲಿ ನಡೆದರೆ ಅದಂ ರಾಯರಿಗೆ ವಿಜ್ಞಾ ಪನೆಯಂ ಗೆಯ್ಯುವುದು ಯುಕ್ತವಾಗಿರುವುದು. ಆದ್ದರಿ೦ದಿವನಿಂ ದೋಷ ಮಿಲ್ಲ, ಮತ್ಮ ಶತ್ರುವಾದ ಈ ಬೆಸ್ತರವನಿಂದಲೇ ನಮ್ಮ ಸ್ವಾಮಿಯಾದ ದುಷ್ಯಂತ ರಾಯನ ನೇತ್ರಗಳಲ್ಲಿ ಜಲವಂಟಾದುದ. ” ಎಂದು ನುಡಿದು, ಆ ಬೆಸ್ತರವನಂ ಅಸೂಯೆಯಿಂ ನೋಡಲು; ಆ ಬೆಸ್ತರವನು ಎಲೈ ಗ್ರಾಮಾಧಿಪತಿಯೇ, ಕೆಲವು ನಿಮಗೆ ಪ್ರವಿ ಕ್ರಯ ಕ್ಕಾಗುವುದು. ಇದಂ ತೆಗೆದುಕೊಳ್ಳಬೇಕು ” ಎಂದು ಕೊಡಲು : ಆ ಜಾನುಕನು- ಎಲೈ ಬೆಸ್ತರವನೇ, ನೀನು ಹೇಳಿದ ವಾಕ್ಯವು ಯುಕ್ತ ಮಾಗಿರುವುದು ಎನಲು ; ಆ ಗ್ರಾಮಾಧಿಪತಿಯು ಅವಸಿ ದ್ರವ್ಯ ವಂ ತೆಗೆದುಕೊರು ಎಲೆ ಬೆಸ್ತರವನೇ, ಈಗ ಎನಗೆ ಮಹತ್ತರವಾದ ಪ್ರಿಯಮಿತ್ರ” ಎಂದು ನುಡಿದು ಪೋಗಳು; ಇವರೆಲ್ಲರೂ ಆ ದ್ರವ್ಯವು ಹಂಚಿಕೊಂಡು ಮದ್ಯಸಾಕ್ಷಿಯಾಗಿ ಮಿತ್ರ