ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಿಲನಾಟಕ ನವೀನಟೀಕೆ ೧೨೯ ತ್ವಮಂ ಮಾಡುವುದಕ್ಕೆ ಮದ್ಯವಂ ಮಾವ ಸ್ಥಾನಕ್ಕೆ ಜತೆಗೊಂಡು ಪೋಗಲು; ಇತ್ತಲು ಶಾವತಾರತೀರ್ಥವೆಂಬ ಸರೋವರವಂ ಕು* *ತು ಪೋಗಿರ್ದ ಸಾನುಮತಿಯೆಂಬ ಅಪ್ಪರಸ್ತ್ರೀಯು-ಶಕುಂತಲೆಯೆಂಬುವಳು ಈ ಮಾರ್ಗದಿಂ ಖುಷಿ ಶಿಷ್ಯರಿಂದೊಡಗೂಡಿ ಪ್ರತಿಷ್ಟಾನಪಟ್ಟಣಕ್ಕೆ ಪೋದಳೆಂಬ ವಾರ್ತೆಯಂ ಆ ತೀರ್ಥವಾ ಸಿಗಳಾದ ಜನರ ಮುಖವನದಿಂ ತಿಳಿದು, ಸಾರಸಿಕೆಯ ಪೋಗಿ ಬಲುಹೊತ್ತಾ ದುದು. ಅವಳು ಎಲ್ಲಿ ಪೋದಳೊ, ಶಕುಂತಲೆಯ ವೃತ್ತಾಂತವು ಎಂತಿರುವುದೋ, ಅದು ತಿಳಿದುಬರುವೆನೆಂದು ವಿಮಾನಾರೂಢಳಾಗಿ ಪ್ರತಿಷ್ಠಾನಪುರವಂ ಪ್ರವೇಶಿಸಿ, ಅಲ್ಲಿಯ ಶಕುಂತಲೆಯಂ ಕಾಣದೆ, ದುಷ್ಯಂತರಾಯನ ಅಂತಃಪುರಕ್ಕೆ ಯೋಗ್ಯ ಮಾದ ಪ್ರವದನನಕ್ಕೆ ಬಂದು, ಆ ವನದಲ್ಲಿ ವಿಮಾನವನ್ನಿಳುಹಿಸುತ್ತಾ, ತನ್ನೊಳು ತಾನು~ ನಾನು ಶಾವತಾರತೀರ್ಥದಲ್ಲಿ ಇರ್ದೆನಾದರೆ ಸತ್ಪುರುಷರುಗಳ ಸ್ಥಾನಕ್ಕೆ ವಿರೋಧವಾಗುವುದೆಂತಲೂ, ಶಕುಂತಲೆಯ ವೃತ್ತಾಂತವಂ ತಿಳಿದುಬರು ವೆನೆಂತಲೂ ಆಸರಸ್ಸಿನ ದೆಸೆಯಿಂ ಹಿಂದಿರುಗಿ ಬಂದೆನು. ಈಗ ರಾಜಋಷಿಯಾದ ದುಷ್ಯಂತರಾಯನ ವೃತ್ತಾಂತವನ್ನಾ ದರೂ ಚೆನ್ನಾಗಿ ತಿಳಿಯುವೆನು. ಮತ್ತು ಎನಗೆ ಪ್ರಾಣಪ್ರಿಯಳಾದ ಮೇನಕೆಯು ತನ್ನ ಮಗಳಾದ ಶಕುಂತಲೆಯ ವೃತ್ತಾಂತವಂ ತಿಳಿದು ಬರುವಂತೆ ಹೇಳಿರುವಳು. ಎಂದು ಯೋಚಿಸುತ್ತಾ, ಆ ಪ್ರಮದವನವ ಸುತ್ತಲೂ ನೋಡುತ್ತಾ, 'ನಮ್ಮ ಶಕುಂತಲೆಯು ಈ ರಾಯನ ಪುರಿಗೆ ಬಂದಿರ್ದಲ್ಲಿ ಮಹಾ ಉತ್ಸವಕಾಲವಾಗಿರಬೇಕು. ಈ ರಾಯನ ಮಂದಿರವಾದರೋ, ಗೀತವಾದ್ಯ ಗಳಿ೦ ವಿರಹಿತವಾಗಿರುವುದಕ್ಕೆ ಏನು ಕಾರಣವಿರುವುದೊ ತಿಳಿಯಲು ಜ್ಞಾನದೃಷಿ ಯೆಂ ಸಮಸ್ತವೃತ್ತಾಂತವಂ ತಿಳಿಯುವೆನೆಂಬ ಅಹಂಕಾರವು ಎನಗಿರುವುದು. ಆದರೂ ಸವಿಯಾದ ಮೇನಕೆಯು ತನ್ನ ಮಗಳ ಯೋಗಕ್ಷೇಮ ವಂ ತಿಳಿದುಬರುವುದೆಂದು ಪೇಳಿರುವ ಪ್ರಕಾರಕ್ಕೆ ನಡೆಯಬೇಕಾದ್ದಿ ೦ದ ಇಲ್ಲಿರುವ ವನಪಾಲಕಿಯರ ಪಾ ಶ್ವಗಳಲ್ಲಿ ತಿರಸ್ಕರಣೀ ವಿದ್ಯೆಯಿಂದ ಮರೆಯಾಗಿರುತ್ತೆ ಇಲ್ಲಿ ನಡೆಯುವ ಸಮಸ್ತ ವೃತ್ತಾಂತವಂ ತಿಳಿಯುವೆನು ಎಂದು ಯೋಚಿಸಿ, ವಿಮಾನದಿಂದ ಇಳಿದು, ಯಾ ದಿಗೂ ಗೋಚರಳಾಗದಂತೆ ಇರುತ್ತಿರಲು; - ಅಪ್ಪಿ ಮಧುಕರಿಕೆಯೆಂಬ ವನಪಾಲಕಿಯು ಒಬ್ಬ ಸಖಿಯೆಂದೂಡ ಗಡಿ, ವಸಂತಋತುವಿನಿಂದ ಸುಂದರವಾದ ಪ್ರಮದವನವಂ ಪೊಕ್ಕು,ರಾಯನು ಉದ್ಯಾನವನಕ್ಕೆ ವಸಂತೋತ್ಸವವು ವಿರಚಿಸುವುದಕ್ಕೋಸುಗ ಒರುವನು, ಪುಷ್ಪ ಫಂಗಳೆಂ ಮಾಧವೀಮಂಟಪ ಕ್ರೀಡಾಶಾಲೆ ಮೊದಲಾದ ರಮ್ಯಸ್ಥಾನಗಳ ಅಲಂಕ 17 S.