ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ .-ಕರ್ಣಾಟಕ ಕಾವ್ಯಕಲಾನಿಧಿಶೃಂಗಾರವಂ ಗೆಯ್ಯುವ ಕಾರ್ಯದಲ್ಲಿ ಸಿದ್ಧವಾಗಿರುವ ನಾವು ವಸಂತೋತ್ಸವವಂ ನಿಲ್ಲಿಸಿದ ಸಂಗತಿಯಂ ತಿಳಿದವರಲ್ಲ ಎಂದು ನುಡಿಯಲಾ ಕಂಚುಕಿಯು- ಎಲ್‌ ಸ್ತ್ರೀಯರುಗಳಿರಾ, ಇದುವರೆಗೂ ಈ ವೃತ್ತಾಂತವಂ ತಿಳಿಯದೆ ಕಾರ್ಯವಂ ನಡೆ ಸಿದಂತೆ ಮುಂದೆ ಪಲ್ಲವಪುಷ್ಪಗಳಂ ಕೊಯ್ಯುವ ಕಾರ್ಯವಂ ನಡೆಯಿಸದಿರಿ, ” ಎಂದು ನುಡಿಯಲವರಿರ್ವರು- ಎಲೈ ಕಂಚುಕಿಯೆ, ಏನು ಕಾರಣದಿಂದಾರಾ ಯನು ವಸಂತೋತ್ಸವವಂ ನಿಲ್ಲಿಸಿರುವನೋ ಆ ಕಾರಣವಂ ಪೇಳಬೇಕೆಂಬ ಕುತೂಹಲವುಂಟಾಗಿರುವುದು; ಹೇಳು. ” ಎಂದು ನುಡಿಯಲು; ಇತ್ತಲು ಸಾನುಮತಿಯೆಂಬ ಅಪ್ಪರಸ್ತ್ರೀಯು ಮನುಷ್ಯರಾದವರು ಉತ್ಸವಪ್ರಿಯರಾಗಿರುವರು, ಹೀಗಿರುವಲ್ಲಿ ದೊರೆಯಾದ ದುಷ್ಯಂತರಾಯನು ವರ್ಷಂಪ್ರತಿ ವರ್ಷದಲ್ಲಿಯ ತೀರ್ಥವಸಂತೋತ್ಸವವಂ ನಿಲ್ಲಿಸಬೇಕಾದಲ್ಲಿ ಮಹ ತಾದ ಕಾರಣವಿರಬೇಕು ಎಂದು ತನ್ನ ಮನದಲ್ಲಿ ಆಲೋಚನೆಯಂ ಗೆಯ್ಯು ತಿರಲು; ಇತ್ತಲು, ಕಂಚುಕಿಯು- ಎಲೆ ಸ್ತ್ರೀಯರುಗಳಿರಾ, ಕೀಳಿ, ಶಕುಂತಲೆಯಂ ತಿರಸ್ಕಾರವಂ ಗೆಯ್ಯುದು ಬಹಳವಾಗಿ ಪುಟ್ಟಿರುವ ಲೋಕಾಪವಾದದ ವೃತ್ತಾಂತವು ನಿಮ್ಮ ಕರ್ಣ ಮಾರ್ಗಕ್ಕೆ ಗೋಚರವಾಗಲಿಲ್ಲವೇನು ? ಎಂದು ನುಡಿಯಲ) ; ವನಪಾಲಕಿಯರು- ಎಲೆ ಪೂಜ್ಯನಾದ ಕಂಚುಕಿಯೇ, ಕೇಳು. ದೊರೆಯ ಭಾವಮೈದುನನಾದ ಮಿತ್ರಾವಸುವಿನ ಮುಖವಚನದಿಂ ರಾಯನು ರತ್ನ ಮುದ್ರಿ ಕೆಯ ಸಂದರ್ಶನವಂ ಗೈದ ಸಂಗತಿಯಂ ಮೂತ್ರ ಸ್ವಲ್ಪವಾಗಿ ತಿಳಿದಿರುವೆನು ಎನಲು ; ಕಂಚುಕಿಯು .... ಎಲ್‌ ಸ್ತ್ರೀಯರುಗಳಿರಾ, ನೀವು ತಿಳಿದಿದ್ದ ಮೇಲೆ ಸ್ವಲ್ಪ ಮಾಗಿ ವಿವರಿಸುವೆನು, ಕೇಳಿ, ಗ್ರಾಮಾಧಿಪತಿಯು ರತ್ನ ಮುದ್ರಿಕೆಯಂ ತೋ? ಸಲಾಕ್ಷಣದಲ್ಲಿ ಪೂಜ್ಯಳಾದ ಶಕುಂತಲೆಯಂ ಒಬ್ಬರೂ ತಿಳಿಯದಂತೆ ಗಾಂಧರ್ವ ವಿ ವಾಹದಿಂ ಧರ್ಮಪತ್ನಿಯನ್ನಾಗಿ ಮಾಡಿಕೊಂಡು ಈಗ ಅಜ್ಞಾನದಿಂದಿವಳಂ ತಿರಸ್ಕಾ ರವಂಗೆಯ್ದನೆಂದೂ, ಇವ್ರ ಮೊದಲಾದ ತಾನು ಮಾಡಿದ ಕಾಠ್ಯಗಳಂ ಸ್ಮರಿಸಿಕೊ ಳ್ಳುತ್ತಾ ವಸಂತೋತ್ಸವ, ಚಂದ್ರಿಕಾ ವಿಹರಣ, ಉಪವನಾಲೋಕನ, ಗಂಧ ತಾಂಬ ಲ, ಶಯ್ಕೆ ಮೊದಲಾದ ರಮ್ಯ ಪದಾರ್ಥಗಳಲ್ಲಿ ದ್ವೇಷವಂ ಗೆಯ್ಯು, ಮೊದಲಿ ನಂತೆ ಸಾಮಾಜಿಕ ಸೇನಾಪತಿ ಮೊದಲಾದ ಪ್ರಜೆಗಳಿ೦ ಪರಿವೃತನಾಗದೆ, ವಿಜನ