ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಶಾಕುಂತಲನಾಟಕ ನವೀನಟೀಕೆ ೧೩೩ ವಾದ ಸ್ಥಳದಲ್ಲಿ ಏನೋ ಒಂದು ಕಾರವು ಆಲೋಚನೆಯಂ ಗೆಯ್ಯುತ್ತಿರುವನು. ಮತ್ತು ಹಾಸಿಗೆಯಲ್ಲಿ ಸಂತಾಪದಿಂ ಹೊರಳುತ್ತ ನಿದ್ರೆಯಂಗೆಯ್ಯದೇನೆ ರಾತ್ರಿಗಳಂ ಕಳೆಯುತ್ತಿರುವನು ಮತ್ತು ಅತಿದಾಕ್ಷಿಣ್ಯದಿಂದಂತಃಪುರಸ್ತ್ರೀಯರುಗಳಿಗೆ ಪ್ರತ್ಯು ತರವಂ ಯಾವಾಗ ಹೇಳುವುದಕ್ಕೆ ಯತ್ನಿ ಸುವನೋ ಆಗ ಆಸ್ತ್ರೀಯರಂ ಶಕುಂತಲೆ ಎಂದು ಕರೆದು, ಅಷ್ಟ ಇಲ್ಲೇ ಎಚ್ಚತ್ತು ಲಜ್ಜೆಯಿಂದೊಡಗೊಂಡು ಅಕಾರವಾದು ದೆಂದಾಶ್ಚರಯುಕ್ತನಾಗುವನು. ಇಂತು ಪಲಬಗೆಯಾದ ಶಕುಂತಲೆಯ ವಿರಹ ಚಿಂತನೆಗಳಿಂದಾಕ್ರಾಂತ ಚಿತ್ತವುಳ್ಳವನಾದ್ದಲ' ೦ದೀವಸಂತೋತ್ಸವವಂ ನಿಲ್ಲಿಸುವಂತೆ ಆಜ್ಜೆಯನ್ನಿತ್ತನು ಎಂದು ಹೇಳಲು; ಸಾನುಮತಿಯು ಈ ವಾಕ್ಯವಂ ಕೇಳಿ-ನಮ್ಮ ಶಕುಂತಲೆಯಂ ಸ್ಮರಿಸಿ ಕೊಂಡು ವಿರಹವ್ಯಾಕುಲನಾದ್ದಿ೦ದೆನಗೆ ಪ್ರೀತಿಯುಂಟಾದುದು ” ಎಂದು ತಿಳಿಯುತ್ತಿರಲು; ವನಪಾಲಕಿಯರು- ವಸಂತೋತ್ಸವವಂ ನಿಲ್ಲಿಸಿದ್ದು ಈಗ ಯುಕ್ತ ಮಾದುದು ' ಎಂದು ನುಡಿಯುತ್ತಿರಲು; ಅಷ್ಟರಲ್ಲೇ ದುಷ್ಯಂತರಾಯನ, ಶಕುಂತಲೆಯ ವಿರಹವಂ ಸೈರಿಸಲಾಗಿದೆ, ಪ್ರಮವನಕ್ಕೆ ಹೋಗಿ ಈಗ ಸಂತಾಪವಂ ಹೋಗುವಂತೆ ಮಾಡುವೆನು, ಎಂದು ಮನದಂದು, ವಿದೂಷಕನಂ ಸಂಗಡ ಬರುವಂತೆ ಆಜ್ಞೆಯನ್ನಿತ್ತು ಒಬ್ಬ ಸೇವಕ ನಿಂದೊಡಗೊಂಡು ಆ ಪ್ರಮವನವಂ ಪ್ರವೇಶವಂ ಗೆಯ್ಯುತ್ತಿರಲು; ಅಷ್ಟಕಲ್ಲೇ ಆ ಕಂಚುಕಿಯು ರಾಯನು ಬರುವುದು ತಿಳಿದು ಎಲೆ ವನಪಾಲಕರುಗಳಿರಾ, ಸ್ವಾಮಿಯಾದವನು ಈ ವನಕ್ಕೆ ಬಿಜಯಂಗೆಯ್ಯುವನು. ನಿಮ್ಮ ಕಾಲ್ಬಂಗಳಲ್ಲಿ ಜಾಗರೂಕರಾಗಿರಿ ಎಂದು ಅವರಿಲ್ವರಂ ಕಳುಹಿಸಿ ಕೊಡಲು; ವಿದೂಷಕನು 16 ಇತ್ತಲು ಬಿಜಯಂಗೆಯ್ಯಬಹುದು ' ಎಂದು ಉಪಚಾ ರೋಕ್ತಿಗಳಂ ನುಡಿಯುತ್ತಿರಲು; ಕಂಚುಕಿಯು ರಾಯನಂ ಕಂಡು,..(ಸುಂದರಾಕಾರವುಳ್ಳ ಜನರುಗಳು ಯಾವ ಅವಸ್ಥೆಗಳಲ್ಲಿಯ ರಮಣೀಯರಾಗಿರುವರು. ಹೇಗೆಂದರೆ:-ಈನಮ್ಮ ರಾಯನು ವಿರಹದಿಂ ವ್ಯಾಕುಲನಾಗಿ ಇದ್ದರೂ ನೇತ್ರಾನಂದಕರವಾಗಿ ಇರುವನು. ಮತ್ತು ಹಾರಕಂಕಣಗಳೆಂ ವಿರಹಿತನಾಗಿ ಎಡದ ಮುಂಗೆಯ್ಯಲ್ಲಿ ಧರಿಸಿರುವ ಒಂದು ಸುವರ್ಣದ ಬಳೆ ಯುಳ್ಳವನಾಗಿ, ಬಿಸಿಯಾಗಿ ಪೊ ಮಡುವ ನಿಟ್ಟುಸಿರುಗಳಿ೦ ಬೆಳ್ಳಿ