ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಕರ್ಣಾಟಕ ಕಾವ್ಯಕಲಾನಿಧಿ-- ಚಂಡಕರಮಂಡಲೋಚ್ಚಂಡ ತೇಜಃಪ್ರಕಾಂಡಕಾಂಡ ಷಂಡಖಂಡಿತಾಖಂಡ ಶೌರ್ಯಪರಿಮಂಡಿತ ಭಂಡನೋದ್ದಂಡಾರಿಮಂಡಲ ಕಂಡೂಲದೋರ್ದಂಡ ಪಾಂಡಿತ್ಯ ಪಾಂಡುರುಚಖಂಡಡಿಂಡೀರಪುಂಡರೀಕ ಪರಿಪಾಂಡುರಯಶಃಪಿಚಂಡಿಲ ಬ್ರಹ್ಮಾಂಡ ಭಾಂಡೋದ್ಭಟಕಾಲಕೂಟ ಪ್ರತಿಭಟಕಳು ಕಪನಿಶಾಟಕೂಟಪಾಟನಲಂಪಟನಿಟಿಲಪು ಟಘಟಿತವಿಕಟಕೃಪೀಟಿಯೋನಿಕುಟಿಲಮೋಹಾಂಧಕಾರಟಾವಿಘಟನ ಪಟು ನಟನ್ನ ಹಾನಟಮಕುಟತಟಪರ್ಯಟಟಿನೀತಾಂತರಿಂಗದಭಂಗೋತ್ತುಂಗತರಂಗ ಸಂಗರ ಭಂಗದಸಂಭ್ರಮೋಜೃಂಭಮಾಣಗಂಭೀರವಾಗುಂಭಸಂಭಾವಿತ ಗರನಗರವರನಿ ಲಯ ಚಂದ್ರಚೂಡಚರಣಾರವಿಂದ ಸೇವಾಮರಂದನಿರಂತರನಿಷೇವಣ ಸ್ವಯಂವೃತ ಕವಿತಾವಧ್ರರತ್ನರಾಜಾಧಿರಾಜಮಹಾರಾಜ ಶ್ರೀ ಚಾಮರಾಜೇಂದ್ರ ಪುತ್ರಾಯ ಸಗೋತ್ರ ಪವಿತ್ರಚರಿತ್ರ ಶಂಖಚಕ್ರಮಕರಮಶರಭಸಾಳ್ವಗಂಡಭೇರುಂಡಧರ ದೇವರಾಹಹನೂಮದ ರುಡಕಂಠೀರವಾದ್ಯನೇಕ ಬಿರುದಾಂಕಿತ ನರಪತಿಬಿರುದ ಬಿರು - ದಂತೆಂಬರ ಗಂಡ ಪ್ರತಾಪಮಾರ್ತಾಂಡ ಶ್ರೀಚಾಮುಂಡಿಕಾವರಪ್ರಸಾದಂ ಮಹೀ ಶೂರ ಮಹಾಸಂಸ್ಥಾನಮಧ್ಯದೇದೀಪ್ಯಮಾನ ಕುಲಕ್ರಮಾಗತದಿವ್ಯರತ್ನ ಸಿಂಹಾಸನಾ ರೂಢಭಯಕವಿತಾ ವಿಚಕ್ಷಣ ಶ್ರೀ ಕೃಷ್ಣರಾಜಕಂಠೀರವರು-ಸಂತುಷ್ಟ ಹೃದಯ ರಾಗಿ ಸರ್ವವಿಘೋಪಶಾಂತಿಗೋಸುಗ ಅನಿಷ್ಟ ನಿವೃತ್ತಿ ಪೂರ್ವಕ ಇಷ್ಟ ಪ್ರಾಪ್ತಿಗೋ ಸುಗ ಗ್ರಂಥಾಗಿಯಲ್ಲಿ ಸ್ವಷ್ಟ ದೇವತಾಪ್ರಾರ್ಥನೆಯಂ ಗೈದು-ಸಂತತಸಂಪೂಜಿತಪರ ಶಿವಪದಾಂಭೋಜನಾದ ಭೋಜರಾಜನಂ, ಕಾಳಿಕಾಚರಣದಾಸನಾನ ಕಾಳಿದಾಸನಂ, ವಿದ್ಯಾಲತೆಗೆ ಆಶ್ರಯದಂಡನಾದ ದಂಡಿಯಂ, ಸರಸ್ವತೀಕೃಪಾಲಬ್ದ ಸಮಸ್ತ ವಿದ್ಯಾ ವಿಭೂತಿಯುಳ್ಳ ಭವಭೂತಿಯಂ, ಕವಿಮನೋಭೀಮನಾದ ಭೀಮನಂ, ಕವಿತಾವನಿ ತಾಪಂಚಬಾಣನಾದ ಬಾಣನಂ, ಇನ್ನು ಮಾಘಮಯರ ಮೊದಲಾದ ಸುಕವಿಸಮು ದಾಯಮಂ ಭಕ್ತಿಯಿಂ ಮನದೊಳ'ವಂದಿಸಿ ಗುಣದೋಷಂಗಳಂ ತಿಳಿಯದೆ ಉಪಮಾ ನೋಲ್ಲೇಖ ಮೊದಲಾದ ಕವಿತಾಚಮತ್ಕಾರವನ್ನ ಜಿಯದೆ ಮುಳ್ಳುಗಿಡಕ್ಕೆ ಮುಖ ನನ್ನಿ ಕುವ ಒಂಟೆಗಳಂತೆ ಗುಣದಲ್ಲಿ ಬುದ್ದಿ ಯನ್ನಿರಿಸದೆ ದೋಷೋಕದೃಷ್ಟಿಗಳಾಗಿರುತ್ತ, ಅನ್ಯ ಪುತ್ರರಂ ನೋಡಿ ಅಸೂಯೆಯಂ ಕೊಳ್ಳುವ ವಂಧ್ಯ ಜನರುಗಳಂತೆ ತಾವು ಕವಿತ್ವ ವಂ ಮಾಡುವುದಕ್ಕೆ ತ್ರಾಣವಿಲ್ಲದೆ ಇದ್ದರೂ ಪರಗ್ರಂಥಗಳಂ ನೋಡಿ ಸಂತಾಪಂ ಗೋಳುತಲಿರುವ ಕುಕವಿಗಳಂ ನಿರಾಕರಿಸಿ-ನ್ಯಾಯಮೀಮಾಂಸವ್ಯಾಕರಣವೇದಾಂತ ವೈದ್ಯ ಜ್ಯೋತಿಷಗಳೆಂಬ ಶಾಸ್ಕಾಂಬುಧಿಯ ತೀರವಂ ಸೇರಿ ಕಾವ್ಯನಾಟಕಾಲಂಕಾರ ಮೊದಲಾದ ಕಲಾಕಲಾಪಾಲಂಕೃತರಾಗಿ ದಿನದಿನಪ್ರಬಂಧನಿಬಂಧನಧುರೀಣರಾಗಿ