ಈ ಪುಟವನ್ನು ಪರಿಶೀಲಿಸಲಾಗಿಲ್ಲ.

k -ಶಾಕುಂತಲನಾಟಕ ನವೀನಟೀಕೆಗುಣ್ಣೆ ಕಪಕ್ಷಪಾತಿಗಳಾಗಿ ನಿರ್ಮಲಾಂತಃಕರಣವುಳ್ಳ ವಿದ್ವಾಂಸರು ನಾನು ಪೇಟ್ಟಿ ಕೃತಿಯಲ್ಲಿ ಪದಾರ್ಥಗತದೋಷಗಳೇನಿದ್ದರೂ ತಿದ್ದಿ ಈಕೃತಿಯಂ ಜಗದ್ವಿಖ್ಯಾ ತವಂ ಮಾಳ್ಳುದೆಂದು ವಿನಯಪರರಾಗಿ ಬೇಡಿಕೊಂಡು - ಈಗ್ರಂಥಕ್ಕೆ ಕೃಷ್ಣರಾಜ ವಾಣೀವಿಲಾಸರತ್ನಾಕರವೆಂದು ನಾಮಾಂಕಿತವಂ ಗೈದು-ಸರಸಜನಾನಂದಕರವಾ ಗುವಂತೆ ಲೋಕೋಪಕಾರಾರ್ಥವಾಗಿ ನವರಸಭರಿತಮಾಗಿ ದುಷ್ಯಂತಶಕುಂತಳಾಕ ಥಾಸಂದರ್ಭಗರ್ಭಿತವಾಗಿ ಕವಿಸಾರ್ವಭೌಮ ಕಾಳಿದಾಸವಿರಚಿತಮಾದ ಶಾಕುಂತ ಲವೆಂಬ ನಾಟಕವಂ ಕರ್ಣಾಟಕಭಾಷೆಯಿಂ ವಚನಕಾವ್ಯವಂ ರಚನೆಗೆಯ್ಯುವರು. <?xpreಯಾವ ಸುರಾಸುರವಂದ್ಯನಾದ ಪರಮೇಶ್ವರನು ಬ್ರಹ್ಮನ ಆದಿಸೃಷ್ಟಿಯಾದ ಜಲಮಯತನು ವಿನಿಂದಲೂ,ಮಂತ್ರ ಪೂರ್ವಕವಾಗಿ ದೇವತೋದ್ದೇಶ್ಯವಾಗಿ ಹೋಮ ವಂ ಗೈವ ಹವಿಸ್ಸಂ ವಹಿಸುತಿರುವ ಅಗ್ನಿ ರೂಪವರ್ತಿಯಿಂದಲೂ, ಯಜ್ಞಾಧಿಕಾ ರಿಯಾದ ಯಜಮಾನರೂಪವಿಗ್ರಹದಿಂದಲ, ದಿವಾರಾತ್ರಿಗಳೆಂಬ ಕಾಲಂಗಳಂ ನಿರ್ಮಿಸುತ್ತಿರುವ ಸೂರ್ಯಚಂದ್ರರೂಪಂಗಳಾದ ಕಾಯಂಗಳಿಂದಲೂ, ಶಬ್ದಗುಣ ಕರವಾಗಿ ಸಮಸ್ತಪ್ರಪಂಚವಂ ವ್ಯಾಪಿಸಿರುವ ಆಕಾಶರೂಪವಾದ ದೇಹದಿಂದಲೂ, ಸಕಲಜನಕ್ಕೂ ಆಧಾರವಾಗಿರುವ ಭೂರೂಪವಾದ ಶರೀರದಿಂದಲೂ, ಸಮಸ್ತ ಪ್ರಾಣಿಗಳಿಗೂ ಪ್ರಾಣರೂಪವಾದ ವಾಯುರೂಪಗಾತ್ರದಿಂದಲೂ ಈಪ್ರಕಾರಂಗ ಳಾಗಿ ಲೋಕವೇದಪ್ರಸಿದ್ದಂಗಳಾದ ಅಷ್ಟಮೂರ್ತಿಗಳಿಂ ಯುಕ್ತನಾಗಿರುವನೋ ಆಸದಾಶಿವನು ನಮ್ಮ ರಕ್ಷಿಸಲಿ ! ಎಂದು ನಾಂದೀಶ್ಲೋಕದಲ್ಲಿ ಕವಿಯು ಈಶ್ವರಪ್ರಾರ್ಥನೆಯಂ ಗೈದು ಆದುಷ್ಯಂತರಾಯನ ಕಥೆಯಂ ವರ್ಣಿಸುವ ನದೆಂತೆನೆ:- ಲವಣೇಕ್ಷು ಸುರಾಸರ್ತಿದಧೀಕ್ಷಿರಜಲಂಗಳೆಂಬ ಸಪ್ತಸಮುದ್ರಂಗಳಲ್ಲಿ ಮೊದ ಲನೆಯದಾದ ಲವಣಸಮುದ್ರದಿಂ ಸುತ್ತುವರಿಯಲ್ಪಟ್ಟು, ಜಂಬೂ ಕುಶ ಕ್ರೌಂಚ ಶಾಕ ಶಾಲ್ಮಲಿ ಪುಷ್ಕರಂಗಳಲ್ಲಿ ಮೊದಲನೆಯದಾದ ಜಂಬೂದ್ವೀಪದಲ್ಲಿ ಅಂಗವಂಗ ಕಳಿಂಗ ತ್ರಿಲಿಂಗ ಕಾಂಭೋಜ ಲಾಟ ಮರಾಟ ಬಂಗಾಳ ನೇಪಾಳ ಮಲೆಯಾಳ ಕೇರಳ ಸಿಂಹಳ ಕೇಕಯ ಕಾಶ್ಮಿರಾಂಧ್ರ ಪಾರಸೀಕ ಮೊದಲಾದ ದೇಶಗಳೆಂಬ ಕಮಲಕ್ಕೆ ಕರ್ಣಿಕಾಯಮಾನವಾಗಿ, ಸಮಸ್ತ ಸೌಖ್ಯಂಗಳಿಗೂ ಆಶ್ರಯವಾಗಿ, ಅಷ್ಟ ಲಕ್ಷ್ಮಿಯರಿಗೆ ಜನ್ಮ ಭೂಮಿಯಾಗಿ, ಗಂಗಾಯಮುನಾಸಂಗಮಮಧ್ಯದಲ್ಲಿ ಪ್ರತಿಷ್ಟಾನಪಟ್ಟಣವು ಪ್ರಕಾಶಿಸುತ್ತಿರುವುದು.