ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪9 -ಕರ್ಣಾಟಕ ಕಾವ್ಯಕಲಾನಿಧಿ ಮಾತಲಿಯ,_* ಇವನು ದುಷ್ಯಂತರಾಯನು, ಇವಳು ಇವನ ಧರ್ಮ ಪತ್ನಿ ಯದ ಶಕುಂತಲೆಯು, ಇವನ ಪುತ್ರನಿವನು ” ಎಂದು ಪ್ರತ್ಯೇಕ ಪ್ರತ್ಯೇಕ ವಾಗಿ ಆ ಖುಷಿಗೆ ತೋ? ಸಲು ; ಋಷಿಯು- ಎಲೈ ಮಹಾರಾಜನೇ, ಪೂಜ್ಯನಾದ ನೀನು ನಿನಗೆ ಯೋ ಗ್ಯಳಾದ ಪತಿವ್ರತಾಶಿರೋಮಣಿಯಾದ ಶಕುಂತಲೆಯು ಪತ್ನಿ ಯಾದದ್ದು ಇವಳ ಗರ್ಭದಲ್ಲಿ ವಂಶವರ್ಧಕನಾದ ಈ ಪುತ್ರನು ಹುಟ್ಟಿದ್ದೂ ಅಧಿಕ ದ್ರವ್ಯವೂ ಆ ದ್ರ ವ್ಯಾನುಗುಣವಾದ ಭಕ್ತಿಯ ಆ ಭಕ್ತಿಗೆ ಅನುಕೂಲವಾದ ಸತ್ಪಾತ್ರವೂ ಇವು ಮಯೂ ದೊರಕಿದಂತಾದುದು, ಎಂದು ಅಪ್ಪಣೆಯನ್ನೀಯಲು, ರಾಯನು ಎಳ್ಳೆ ಮಹಾಮುನಿಯೇ, ನಿನ್ನ ಅನುಗ್ರಹವು ಅಪೂರ್ವ ಮಾಗಿ ತೋಯುತ್ತಿರುವುದು. ಮೊದಲು ಮನಸಾಭೀಷ್ಟ ಸಿದ್ಧಿಯು, ಅನಂತರದಲ್ಲಿ ತಮ್ಮ ದರ್ಶನವಾದುದು. ತಮ್ಮ ಅನುಗ್ರಹವು ಅಪೂರ್ವವಾದುದು. ಕುಸುಮೋ ತ್ಪತ್ತಿಯಾದಮೇಲೆ ಫಲಂಗಳಾಗುತ್ತಿರುವುದು. ಹಾಗೆಯೇ ಮೇಧೋದಯವಾದ ಮೇಲೆ ಜಲವುಂಟಾಗುವುದು. ಈ ರೀತಿಯಲ್ಲಿ ಲೋಕದಲ್ಲಿ ಕಾರಣಗಳಿಂದ ಕಾ ರ್ಯಂಗಳು ಪಟ್ಟು ತ್ತಿರುವುದು ವಿಹಿತವು. ನಿನ್ನ ಅನುಗ್ರಹವಾದರೋ ಸಂದರ್ಶ ನಕ್ಕೆ ಮೊದಲೇ ಸಮಸ್ತ ಸಂಪತ್ತುಗಳನ್ನೀಯುವುದು' ಎನ್ನ ಲು; ಮ ತಲಿಯು–ಮಹಾತ್ಮರಾದಂಥವರು ಈರೀತಿಯಿಂದಲೆ ಸಮಸ್ತ ಜನರಿಗೆ ಪ್ರಸನ್ನರಾಗುತ್ತಿರುವರು' ಎಂದು ನುಡಿಯಲು; ರಾಯನು - ಎಲೈ ಷಡ್ಡು ಜೈಶ್ವರ್ಯಸಂಪನ್ನ ನಾದ ಮಹಾಮುನಿಯೇ, ನಿನ್ನ ಆಜ್ಞಾ ವಾಹಕಳಾದ ಶಕುಂತಲೆಯಂ ವಿವಾಹಿತಳನ್ನಾಗಿ ಮಾಡಿಕೊಂಡು ನಾನು ಪುರಕ್ಕೆ ಬಂದ ಕೆಲವುದಿವಸದಮೇಲೆ ಒಂಧುಗಳಾದ ಖುಷಿಶಿಷ್ಯರು ಇವಳಂ ಎನ್ನ ಸವಿತಾಪಕ್ಕೆ ಕರೆತರಲಾಗ ನಾನು ಜ್ಞಾನಶೂನ್ಯನಾಗಿ ಇವಳಂ ಎನ್ನ ಪತ್ನಿ ಯಲ್ಲ ಎಂದು ತಿರಸ್ಕಾರವಂ ಗೆಯ್ತು, ನಿನ್ನ ಗೋತ್ರೋತ್ಪನ್ನನಾದ ಕಣ್ವಮುನಿಗೆ ಮಹಾಪರಾಧಿಯಾದೆನು. ಆಬಳಿಕ ನಾನೀ ಶಕುಂತಳೆಗೆ ಗುರುತಾಗಿ ಕೊಟ್ಟಿರ್ದ ಉಂಗುರವಂ ನೋಡಿದಮೇಲೆ ಇವಳ ವಿವಾಹಿತಳನ್ನಾಗಿ ಮಾಡಿಕೊಂಡುದು ನಿಶ್ಚಯವೆಂದು ತಿಳಿದೆನು, ಇದೆಲ್ಲ ವಂ ಪರಿಭಾವಿಸಿ ನೋಡಲು, ಅತ್ಯಾಶ್ಚರ್ಯ ವಾಗಿ ನನಗೆ ತೋKುತ್ತಿರುವುದು, ಮತ್ತು ಒಬ್ಬಾನೊಬ್ಬ ಮಂದಬುದ್ದಿಯಾದ ಪುರುಷನು ಮುಂಭಾಗದಲ್ಲಿರ್ದ ಗಜಮಂ ಕಂಡು ಇದು ನಿಶ್ಚಯವಾಗಿ ಗಜವಲ್ಲ ವೆಂದು ತಿಳಿದು ಅದು ಪೋದಮೇಲೆ ಆ ಆನೆಯ ಹೆಜ್ಜೆಗಳಂ ನೋಡಿ ಎನ್ನ ಸವಿತಾ