ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೮೧ ಪಕ್ಕೆ ಬಂದಿರ್ದುದು ಆನೆಯೇ ನಿಶ್ಚಯವೇದು ತಿಳಿಯುವಂತೆ ನಾನು ಇವಳು ಎದುರಿಗೆ ಬಂದಿದ್ದಾಗ ಎನ್ನ ಪತ್ನಿಯೇ ಅಲ್ಲ ಎಂದು ಇವಳು ಪೋದಮೇಲೆ ವಿವಾ ಹವಾದದ್ದು ನಿಶ್ಚಯವೋ ಅಪದ್ಧ ವೋ ಎಂಬ ಸಂಶಯವುಳ್ಳವನಾಗಿ ಉಂಗರವಂ ನೋಡಿದ ಮೇಲೆ ಇವಳು ನನ್ನ ಪತ್ನಿ ಯಹುದೆಂದು ತಿಳಿಯುತ್ತಾ ವಿಕಾರಬುದ್ದಿ ಯುಳ್ಳವನಾದೆನು. ಇದಕ್ಕೆ ಕಾರಣವೇನು? ಎಂದು ಬಿನ್ನೆ ಸಲು; ಮಾತಲಿಯು ಎಲೈ ರಾಮನೇ, ನೀನು ಅಪರಾಧಿಯೆಂದು ನಿನ್ನಲ್ಲಿ ಶಂಕೆಯನ್ನು ಮಾಡಬೇಡ ಎನ್ನಲು ; ಮಾರೀಚ ಮಹರ್ಷಿಯು ಎಲೈ ದುಷ್ಯಂತರಾಯನೇ, ಈ ಪ್ರಕಾರ ಮಾಗಿ ಅವಿವೇಕವಂ ಮಾಡಿದೆನೆಂದು ತಿಳಿಯದಿರು. ನಿನ್ನಲ್ಲಿ ಅಂಥ ಅಜ್ಞಾನವು ಪುಟ್ಟುವುದು ಯುಕ್ತವಾಗಿಯೇ ಇರುವುದು. ಅದಕ ಸಂಗತಿಯೆಂ ಪೇಳುವೆನು, ಕೇಳು ನೀನು ಈ ಶಕುಂತಳೆ ಯುಂ ತಿರಸ್ಕಾರವಂ ಗೆಯ್ಯಲು ಪುರೋಹಿತನೊಡ ಗಡಿ ಹಿಂದಿರುಗಿ ಅಪ್ಪರಸೀರ್ಥಸಮಾಪಕ್ಕೆ ಬರಲು ಅಷ್ಟ ಅಲ್ಲಿ ಇವಳ ತಾಯಿ ಯಾದ ಮೇನಕೆಯು ಕಳುಹಿಸಿದ್ದ ಸಾರಸಿಕೆಯು ಈ ಶಕುಂತಲೆಯಂ ಮೇನ ಕಿಯ ಸವಿಾಪಕ್ಕೆ ತೆಗೆದು ಕೊಂಡು ಬರಲಾ ಮೇನಕಿಯು ಈ ಶಕುಂತಲೆಯ ಕರೆದುಕೊಂಡು ದಕ್ಷ ಪುತ್ರಿಯಾದ ಅದಿತಿಯ ಸಮೀಪಕ್ಕೆ ಬಂದು ಈ ವೃತ್ತಾಂ ತವಂ ಪೇಳಲಾಗ ನಾನು-ದುರಾ ಸಋಷಿಯ ಶಾಪದಿಂ ಶಕುಂತಲೆಯಂ ತಿರಸ್ಕಾ ರವಂ ಗೆಯ್ದನಲ್ಲದೆ ಇನ್ನೊಂದು ಕಾರಣವಿಲ್ಲ ಎಂಬದಾಗಿಯ ಆ ಋಷಿಯು ನೀನಿತ್ತ ಉಂಗರದ ಸಂದರ್ಶನದಿಂ ತಾನಿತ್ತ ಶಾಪವು ಪೋಗುವದೆಂಬ ಶಾಪಾವಸಾ ನವಂ ಪೇಳಿರುವ ಸಂಗತಿಯೆಲ್ಲ ವಂ ಜ್ಞಾನದೃಷ್ಟಿಯಿ೦ ತಿಳಿದೆನು ಎನ್ನಲು ; ರಾಯನು ನಿಟ್ಟುಸಿರು ಬಿಟ್ಟು, 66 ಎಲೈ ಮಹಾಮಹಿಮನೇ, ನೀನಿಂತು ಅಪ್ಪಣೆಯನ್ನಿತ್ತು ದಹಿ೦ ಲೋಕಾಪವಾದದಿಂದ ಬಿಡಲ್ಪಟ್ಟನು ” ಎನ್ನಲು ; ಶಕುಂತಲೆಯು ತನ್ನ ಮನದಲ್ಲಿ . ( ಈ ಕಾರಣವಿರ್ದುದಿ೦ದಲೇ ರಾಯನು ಎನ್ನ೦ ತಿರಸ್ಕಾರವಂ ಗೆಯ್ದ ನು, ಮತ್ತು ನಾನು ಅತ್ಯಂತ ವಿರಹಾತುರಳಾಗಿ ಆ ತಪೋವನವಂ ಬಿಟ್ಟು ಈ ರಾಯನ ಪುರಕ್ಕೆ ಬರುವ ಕಾಲದಲ್ಲಿ ಅನಸೂಯೆ ಪ್ರಿಯಂವದೆಯರೆಂಬ ಎನ್ನ ಸಖಿಯರೀರ್ವರು-ಎಲೈ ಶಕುಂತಲೆ, ರಾಯನು ನಿನ್ನ ಮ% ತವನಾದರೆ ಈ ಮುದ್ರಿಕೆಯಂ ತೋಲಿಸೆಂದು ಎನಗೆ ಕೊಟ್ಟರು. ಅದು ಈಗ ಸ್ಮರಿಸಿಕೊಂಡಲ್ಲಿ ಇದೆಲ್ಲಾ ಯಥಾರ್ಥವಾಗಿ ತೋಯುವುದೆಂದು ಆಲೋಚನೆ ಯಂ ಗೆಯ್ಯುತ್ತಿರಲು ;