ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೪೭ ಯರಿಂದೊಡಗೂಡಿ ಪರ್ಣಶಾಲೆಯಂ ಕುಳತು ಪೋಗುವ ಸಮಯದಲ್ಲಿ ವಿನಯ ದಿಂದೆನಗೆ ತನ್ನ ಮನದಲ್ಲಿರುವ ಅನುರಾಗವಂ ಪ್ರಕಟವಂಗೆಯ್ದಿ ರುವ ಪರಿಯಂ ವಿವ ರಿಸುವೆನು, ಕೇಳು, ಕೃಶಾಂಗಿಯಾದ ಆ ಶಕುಂತಲೆಯು ಸಮವಾದ ಭೂಮಿ ಯಲ್ಲಿ ನಾಲ್ಕಾ ಅಡಿಯಿಟ್ಟು ದರ್ಭಾಂಕುರದಿಂ ತನ್ನ ಚರಣವು ಗಾಯವಾದಂತೆ ನೆವವಿಲ್ಲದೆ ನಿಲ್ಲುವಳು; ಮತ್ತು ಅಲ್ಲಲ್ಲಿರುವ ವೃಕ್ಷಗಳ ಕೊಂಬೆಗಳಿಗೆ ತಾನುಟ್ಟಿ ರುವ ನಾರ ಸೀರೆಯು ತಗಲಿಕೊಳ್ಳದಿದ್ದರೂ ತಗಲಿಕೊಂಡಂತೆಯ, ಆದಂ ಬಿಡಿಸು ವಳಂತೆಯ ಮಾಡಿ, ಬಾರಿಬಾರಿಗೂ ಎನ್ನ ನೋಡುತ್ತ ಪೋದಳು ಎಂದು ನುಡಿ ಯಲು, ವಿದೂಷಕನು- ಎಲೈ ಸ್ವಾಮಿಯೇ, ಈಗ ನೀನು ಹೇಳಿದಂತೆ ಆ ಶಕುಂತಲೆಯು ವಿಲಾಸವಾದ ಚೇಷ್ಟೆಗಳಂ ಗೆಯ್ಯುದು ಯಥಾರ್ಥವಾದಲ್ಲಿ ಅವಳು ನಿನ್ನ ಸ್ವಾಧೀನಳಾಗುವುದಕಲ್ಲಿ ಸಂದೇಹವೇ ಇಲ್ಲ. ನೀನು ಗ್ರಹಿಕಲ್ಪಟ್ಟ ಅನುರಾ ಗದ ಬುತ್ತಿಯುಳ್ಳವನಾದೆ. ಈ ತಪೋವನವನ್ನೇ ಕ್ರೀಡಾಯೋಗ್ಯವಾದ ಉಪ ವನವಂ ಮಾಡುವನಂತೆ ತೋರುವೆ” ಎಂದು ನುಡಿಯು; ರಾಯನು- ಎಲೈ ವಿದೂಷಕನೇ, ಋಷಿಗಳು ಎನ್ನಂ ಕಂಡರೂ ಭಯ ವಿಲ್ಲದೆ ಈ ತಪೋವನವ ಕು? ತು ಪೋಗುವುದಕ್ಕೆ ಕಾರಣವಂ ಯೋಚನೆಯಂ ಗೆಯು ಪೇಳು ” ಎಂದು ನುಡಿಯಲು; ವಿದೂಷಕನು-- ಎಲೈ ರಾಯನೇ, ಉಪಾಯವಂ ಚಿಂತಿಸತಕ್ಕುದೇನಿರು ವುದು ? ಋಷಿಗಳು ನಿನ್ನಿಂದ ಸಂರಕ್ಷಿತರಾದಕಾರಣ ಈ ತಪೋವನದಲ್ಲಿ ಹುಟ್ಟಿದ ಧಾನ್ಯದ ಆ ಭಾಗದಲ್ಲೊಂದು ಭಾಗವು ದೊರೆಯಾದ ನಿನಗೆ ಸಲ್ಲ ತಕ್ಕುದು ಯುಕ್ತವಾಗಿರುವುದಕಂದಾಧಾನ್ಯ ಭಾಗವನ್ನಾ ಋಷಿಗಳಂ ಕೇಳುವುದಕ್ಕೆ ಪೋಗ ಬುದು ?” ಎನ್ನಲು; ಆ ವಾಕ್ಯವಂ ಕೇಳ ರಾಯನು-- ಎಲೈ ಮರ್ಖನಾದ ವಿದೂಷಕನೇ, ಈ ಋಷಿಗಳ ಸಮಸ್ತ ವಿಘ್ನ ವಂ ಪರಿಹರಿಸುತ್ತಿರುವುದw೨೦ ಅವರು ಮಾಡುವ ತಪ ಸ್ಪಿನ ಷಡ್ಯಾಗವು ಎನಗೆ ಬರತಕ್ಕು ದಿರುವುದು, ಆ ರತ್ನ ರಾಶಿಗಿಂತಲೂ ಅಧಿಕವಾದ ಬೆಲೆಯುಳ್ಳ ತಪೋಭಾಗವು ಕೇಳುವುದಂ ಬಿಟ್ಟು ತೃಣಧಾನ್ಯವಂ ಕೇಳಿ ಸಂತೋಷವಂ ಪೊಂದುವೆನೆ ? ಮತ್ತು ದೊರೆಯಾದವನಿಗೆ ಸಮಸ್ತಜಾತಿಯಂ ಸಂರಕ್ಷಿಸುವುದ೬೦ ದುಂಟಾಗುವ ಫಲವು ನಾಶವಂ ಪೊಂದುವುದು, ಅರಣ್ಯವಾಸಿಗಳಾದ ಈ ಋಷಿ ಗಳ ಸಂರಕ್ಷಣೆಯಂ ಗೆಯ್ಯುವುದು ಇವರು ಮಾಳ ತಪದಲ್ಲಿ ಆಡು ಭಾಗವು