ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಕರ್ಣಾಟಕ ಕಾವ್ಯಕಲಾನಿಧಿ - ನಾಶರಹಿತವಾದ ಸಮಸ್ತ ಶ್ರೇಯಸ್ಸನ್ನುಂಟುಮಾಡುತಿರುವುದು ” ಎಂದು ವಿದೂಷ ಕನೊಡನೆ ಸರಸಾಲಾಪವಂ ಗೆಯ್ಯುತ್ತಿರುವಷ್ಟಲ್ಲಿ ಒಬ್ಬ ಚಾರನು ಬಂದು ರಾಯರಿಗೆ ನಮಸ್ಕಾರವಂ ಗೆಯ್ಯು - ಇಬ್ಬರು ಋಷಿಕುಮಾರರು ನೀವು ಕುಳಿತಿರುವ ಸ್ಥಳವು ಕುತು ಬರುವರು ಎಂದು ಬಿನ್ನೆ ಸಲು, ರಾಯನು -'ಎಲೈ ಚಾರನೇ, ಜಾಗ್ರತೆಯಿಂ ನೀನಾಋಷಿಕುಮಾರರನ್ನಿಲ್ಲಿಗೆ ಬರುವಂತೆ ಮಾಡುವುದು' ಎನಲಾಚಾರನು ರಾಜಾಜ್ಞೆಯಂ ಶಿರದೊಳಾಂತು ಋಷಿ ಕುಮಾರರೀರ್ವರಂ ಕರೆದುಕೊಂಡು ಬರಲು ಖುಷಿಕುಮಾರರೀರ್ವರು ಆ ದುಷ್ಯಂತರಾಯನಂ ನೋಡಿ, ಅವನಿಲ್ಲೋರ್ವನು • ಮಹಾರಾಜನಾದ ಈ ರಾಜನು ತನ್ನ 'ರಾಜತೇಜದಿಂ ನೋಡುವುದಕ್ಕೆ ಭಯಂ ಕರನಾದರೂ ಶಾಂತನಾಗಿ ವಿಶ್ವಾಸಯೋಗ್ಯನಾಗಿ ತೋರುವನು. ಋಷಿಗಳಾದ ನಮಗೂ ಈ ರಾಯಂಗೂ ಸ್ವಲ್ಪ ಭೇದವಿರುವುದು. ಹೇ°ಂದರೆ:- ಸಮಸ್ತ ಪ್ರಾಣಿ ಗಳ ಪ್ರವೇಶಕ್ಕೆ ಸುಲಭವಾಗಿ ಇರುವ ಈ ತಪೋವನದಲ್ಲಿ ಈಗ ವಾಸವಂ ಗೆಯ್ಯು ತಿರುವನು. ವರ್ಣಸಾಂಕರ್ಯವುಂಟಾಗದಂತೆ ಸಮಸ್ತ ಪ್ರಾಣಿಗಳಂ ಸಲಹುವು ದೆಂಬ ತಪಸ್ಸಂ ನಿತ್ಯದಲ್ಲೂ ಆಚರಿಸುತಿರುವನು. ಮತ್ತು ಇಂದ್ರಿಯನಿಗ್ರಹಶಾಲಿ ಯಾದ ಇವನ ಪುಣ್ಯಕರವಾದ ಕೀರ್ತಿಯು ಗಂಧರ್ವಚಾರಣ ಮೊದಲಾದವರಿಂ ಗಾನವಂ ಗೆಯ್ಯಲ್ಪಟ್ಟಂಥದಾಗಿ ಸ್ವರ್ಗವಂ ವ್ಯಾಪಿಸುವುದಾದಿಂದ ರಾಜಶಬ್ದ ವೊಂದೇ ಹೆಚ್ಚಾಗಿರುವುದಲ್ಲದೆ ಈ ವನಚರ್ಯವೆಲ್ಲಾ ಋಷಿಚರ್ಯವಾಗಿರುವುದು' ಎಂದು ನುಡಿಯಲು; ಮತ್ತೊರ್ವನು ಆ ವಚನಕ್ಕೆ ಸಂದೇಹವೇ ಇಲ್ಲ ಎಂದು ನುಡಿದು, ಈ ರಾಯನ ಮಾಹಾತ್ಮವಂ ಪೇಳುವೆನು ಕೇಳು. ಪುರದ್ವಾರದ ಲಾಳಮುಂಡಿಗೆ ಯಂತ ಅತಿ ದೀರ್ಘವಾದ ಬಾಹುಗಳುಳ್ಳ ಇವನು ಸಮಸ್ತಭೂಮಂಡಲವಂ ಧರ್ಮದಿಂ ಪರಿಪಾಲನೆಯಂ ಗೆಯ್ಯುತ್ತಿರುವನೆಂಬುವುದಾಶ್ಚರ್ಯವಲ್ಲ. ಸ್ವರ್ಗದಲ್ಲಿ ದೇವತಾಸ್ತ್ರೀಯರುಗಳು ದೇವತೆಗಳಿಗೂ ರಾಕ್ಷಸರುಗಳಿಗೂ ಯುದ್ಧವುಂಟಾಗುವ ಸಮಯದಲ್ಲಿ ನಾರಿಯಿಂ ಸೇರಿದ ಈ ದುಷ್ಯಂತರಾಯನ ಧನುಸ್ಸಿನಲ್ಲಿಯ ಇಂದ್ರ ಸಂಬಂಧಿಯಾದ ವಜ್ರಾಯುಧದಲ್ಲಿಯ ಜಯವುಂಟಾಗಲೆಂದು ದೇವತಾಪ್ರಾರ್ಥನೆ ಯಂ ಗೆಯ್ಯುತಿರುವರು. ರಾಕ್ಷಸರುಗಳಿ೦ ಇಂದ್ರನಿಗೆ ಬಾಧೆಯುಂಟಾದರೆ ಈ ರಾಯನು ಸ್ವರ್ಗಕ್ಕೆ ಪೋಗಿ ಆ ರಾಕ್ಷಸನಿಗ್ರಹವಂ ಮಾಡುತಿರುವನಾದ್ದ೦ ಈ ಭೂಮಿಯಂ ಸಂರಕ್ಷಿಸುವುದು ಆಶ್ಚರ್ಯವಲ್ಲವೆಂದು ನುಡಿದೆನು. "