ಈ ಪುಟವನ್ನು ಪರಿಶೀಲಿಸಲಾಗಿದೆ
268
ಶಾಸನ ಪದ್ಯಮಂಜರಿ

ದಾಂಗುಡಿಮರಲ್ಲು = ಹಬ್ಬಿ ವ್ಯಾಪಿಸಿ, 61. ಕುಳಭವನಂ = ತವರುಮನೆ. ನಿಧಾನಂ= ನಿಧಿ, ಮಾಂತನ = ದೊಡ್ಡಸ್ತಿಕೆ, ಆಗರ = ಮನೆ, ವಿಧು=ಚಂದ್ರ, 62, ಚಾಂದ್ರ ಮುಂತಾದವು ವ್ಯಾಕರಣಗಳು ; ಶಬ್ದಾನುಶಾಸನ ಶಾಕಟಾಯನಕೃತ, ಏಕಾಕ್ಷರಂ= ಅತಿಸುಲಭ. ಮೊಗ್ಗೆ = ಸಾಧ್ಯವೇ ? 63. ವಡ್ಡ ವ್ಯವಹಾರಿ = ದೊಡ್ಡ ವರ್ತಕ. ಉಕ್ಷ= ವೃಷಭ, ರಾಜೀವ-ಕಮಲ, ಮಧುಪ=ದಂಬಿ, ಯಥಾಸಂಖ್ಯಾಲಂಕಾರ. 64, ಶೇಷಾಲಂಕಾರ, ವಿಬುಧ = ದೇವತೆಗಳು, ವಿದ್ವಾಂಸರು, ಉಮಾ = ಪಾರ್ವತಿ, ಯಶಸ್ಸು, ಆಶಾರದನಿ = ದಿಗ್ಗಜ, ದಾನ= ತ್ಯಾಗ, ಮದದ ನೀರು, 65, ಆರ್ವ= ಔದಾಯ್ಯ, ಆಹವ=ಯುದ್ದ, 66, ಎಟಿಗದ=ನಮಸ್ಕರಿಸದೆ, ಅದಟ - ಪರಾ ಕ್ರಮಶಾಲಿಗಳು. ತಿಂದ = ಕೊಡದ, ಅಂಕಚೇಯರ್ – ? ಯುದ್ದವೀರರು, ಬೆಳ್ಳು ಅದ = ನಡುಗದೆ, 67, ಬೆಸಕೆಯ್ದು ತು = ಸೇವೆಮಾಡಿತು. ಚೋಳಿಕ= ಚೋಳ ರಾಜ. G೯, ಸೀನ= ದಪ್ಪವಾದ, ಉದ್ವ = ಶ್ರೇಷ್ಟವಾದ. 69. ಮೇರೆ = ಎಲ್ಲೆ. ಎಬಿವಟ್ಟು = ಸ್ಥಾನ, ನೆಲೆ.

70. ಆಘಾಟ = ಎಲ್ಲೆ. ಬಲ್ಬಳನೆ= ಹೆಚ್ಚಾಗಿ, ಪ್ರಜ್ವಳಿಸಿದ = ಬೆಳಗಿದನು; ಬಿಂದುವಿಲ್ಲದ ಪ್ರಯೋಗ: ಕೃದಂತವೆಂದು ಭಾವಿಸಿದರೆ ಕ್ರಿಯೆಯನ್ನು ಅಧ್ಯಾಹಾರ ಮಾಡಬೇಕು. 71. ತಸಲವು = ನಿರ್ಣಯ ದೃಢಸಂಕಲ್ಪ. ದೇಗುಲ = ದೇವ ಕುಲ, ದೇವಸ್ಥಾನ. ಇ೦ = ಇನ್ನು, ಸಲೆ= ಚೆನ್ನಾಗಿ, 72. ನೆಗಟ್ಟಿ, ಇಲ್ಲಿಯ ಬಿಂದುವಿಲ್ಲದ ಪ್ರಯೋಗ; 70 ನ್ನು ನೋಡಿ. 73. ಜಳರಾಶಿ =ಸಮುದ್ರ. ಅಗ್ಗಳ೦= ಹೆಚ್ಚು. 7-4. ನಾಡಾಡಿ - ಸಾಮಾನ್ಯ. ಧವಳಾರ = ಧವಳಾಗಾರ, ಅರಮನೆ. ನೀಡ = ಗೂಡು, ಮನೆ. 76ಎಕ್ಕ ಲಾವಣ೦= ಏಕಾಯತ್ತ, ಏಗಣಜು= ಎಂಥ ಕಣಜ ? ಪೊಗಲುಗುಂ, ಪೊಗಂ ಎಂಬುದಕ್ಕೆ, ಸಮೀರಣ - ಗಾಳಿ, 77. ಮೈ ಮೆ=ಮಹಿಮೆ. ಓಜೆ = ಕಾಂತಿ. 78. ಸಲುಗೆ, ಗೆಲುವ; ಹೊಸಗನ್ನಡ, ಎಕ್ಕೆ= ಉನ್ನತಿ, ಅಕ್ಕೆ- ಆಗಲಿ, ಎಮ, ಅಂಗೀಕಾರಾರ್ಥ, 79, ಕೃತಕ = ಮೋಸ. 80. ಮಾಣ್ = ಬಿಡು, ತೋಡು, ಪಾಟಿ= ಸಮಾನ. ಕುಜಾತೆ = ಸೀತೆ.

81. ಘ೦ತೆ=ಸಮೂಹ. ಒಡ್ಡು = ಸೈನ್ಯ. ಚಕ್ರಿ= ಚಕ್ರವರ್ತಿ. 82. ಎರೆ ದವರ್ಗೆ = ಯಾಚಕರಿಗೆ, 53, ಅಸದಳಂ-ಶ್ರಮದಿಂದ, ವರ್ಗ ತ್ರಯ- ಧರ್ಮಾ ರ್ಥ ಕಾಮಗಳು, ಒಡರಿಸಿ= ಹೊಂದಿಸಿ. 84. ಬೆಳ್ಳುತ್ತುದು= ಹೆದರಿತು. ವೆಸ (ಬೆಸ= ಕೆಲಸ, ಪೂಣ್ಣ ತು=ಕೈಕೊಂಡಿತು. ಆಗಿದು= ಹೆದರಿ, ಮೆಲ್ಲು=ಮಾರ್ದವ, ಆವ ರ್ಚಿಸಿದ=ಒಳಕೊಂಡ. ಎಳಸು = ಅಪೇಕ್ಷಿಸು. ಎಸಕಂ = ತೇಜಸ್ಸು, ಕೆಯ್ದಕ್ಕೆ= ಹೆಚ್ಚಲು, 5. ಮಾನಸ = ಮನುಷ್ಯ, ಪಸಯಿತ, ಪಸಾಯಿತ= ? ಉಡುಪನ್ನು ಕೊಡುವವನು. . ಅಣುಗು -- ಪ್ರೀತಿಪಾತ್ರನಾದ. ತುಲಿಲಾಳ್ = ಯುದ್ಧ