ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಶ್ರೀಮತೀಪರಿಣಯಂ ನಾರದಂ-ದೇವೆಂದಾ : ಐಶ್ವರ ಮದಮತ್ತರಾದ ನಿಮ್ಮಂತವರಿಗೆ, ಹೇಗೆ ತಾನೇ ಯುಕ್ತಾಯುಕ್ಕವಿಚಾರವು ತೋರುವುದು.? ಕಂ11 ಧನಮುಂ ಪ್ರಭುತ್ವ ಮುಂ ಯಾ ವನಮೆಂಬೀ ಫರಸನ್ನಿ ಪಾ ತತ್ರಯದೊಳ61 ಮನುಜಂ ಸರೇಂದ್ರಿಯಬಂ ಧನದಿಂ ಪ್ರಜ್ಞಾವಿಹೀನನಪ್ಪುದೆ ಸಹಜ೦11 ಹಾಗಿಲ್ಲದೆ ನೀನು ಯುಕ್ತಾಯುಕ್ತ ವಿವೇಚನಪರನಾಗಿದ್ದ ಪಕ್ಷ ದಲ್ಲಿ, ಹಿಂದೆ ದೂರ್ವಾಸಮಹರ್ಷಿಯನ್ನು ಅನಾದರಿಸಿ, ರಾಜ್ಯ ಭ್ರಷ್ಟನಾಗುತಿದ್ದೆಯಾ? ಆ ಅನರ ಕ್ಯೂ ನಿನ್ನ ಐಶ್ವಯ್ಯಮದವೇ ಕಾರಣವೆಂದು ತಿಳಿ ! ದೇವೇಂದ್ರಾ ! ಹೋದುದು ಹೋಗಲಿ? ಈಗಲೂ ನಿನಗೊಂದು ತತ್ವವನ್ನು ಹೇಳುವೆನು! ಇನ್ನು ಮೇಲಾ ದರೂ ನೀನು ಅದನ್ನು ಚೆನ್ನಾಗಿ ನೆನಪಿನಲ್ಲಿಟ್ಟು, ವಿವೇಕಿ ಯಾಗಿರು! ಈನಿನ್ನ ಪದವಿಗಾಗಿ ನೀನು ಗರಪಡಬಾರದು!ಇದನ್ನೆ ಒಂದು ದೊಡ್ಡ ಪುರುಷಾಧ್ಯವೆಂದೆಣಿಸಬೇಡ ! ಪುರುಷಾರ ತತ್ವ ವನ್ನು ತಿಳಿದವರು, ಈ ನಿನ್ನ ಪದವಿಯನ್ನಾಗಲಿ, ಇದಕ್ಕಿಂತ ಲೂ ಮೇಲಾದ ಬ್ರಹ್ಮಪದವಿಯನ್ನಾಗಲಿ, ಕೇವಲ ತುಚ್ಛವೆಂ ದೇ ಭಾವಿಸುವರೇ ಹೊರತು, ಸ್ವಲ್ಪ ಮಾತ್ರವೂ ಗೌರವಿಸ ಲಾರರು. ದೇವೇಂದ್ರಾ ! ಇವೆಲ್ಲವೂ ಅಶಾಶ್ವತಗಳು ಶಾಶ್ವತ ಸುಖಹೇತುವಾದ ಮೋಕ್ಷಮಾರ್ಗಕ್ಕೂ ಪ್ರತಿಬಂಧಕಗಳು! ಆದುದರಿಂದ ಈ ಅಲ್ಪಕಾಲಸುಖಕ್ಕಾಗಿ ನೀನು ಅಹಂಕಾರ ಪಟ್ಟು,ಸೈಛಾಚಾರಿಯಾಗಿ ನಡೆಯಬಾರದು, ಭೂಲೋಕದಲ್ಲಿ ಐಶ್ವದಲ್ಲಿಯೂ, ಭೋಗಸಮೃದ್ಧಿಯಲ್ಲಿಯೂ ನಿನ್ನನ್ನು ಮೀ ರಿಸಿದವರೆಷ್ಟೋ ಮಂದಿಯುಂಟು ! ಈಗ ಭೂಲೋಕದಲ್ಲಿ ಏಕ ಚೈತ್ರಾಧಿಪತ್ಯದಿಂದ ರಾಜ್ಯವನ್ನಾಳುತ್ತಿರುವ ಅಂಬರೀಷರಾಜ ನ ಪ್ರಭಾವವನ್ನು ನೀನೂ ಕೇಳಿಬಲ್ಲೆಯನ್ನೈ ? ಸಾಕ್ಷಾದ್ರಿಷ್ಟು ಚಕ್ರವೇ ಅವನ ಹಸ್ತಗತವಾಗಿರುವುದು! ನಿನಗಿಂತಲೂ ಅವನು