ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೬೩.] ದಶಮಸ್ಕಂಥವು. ೨೨೧೫ ಟವೇಷಗಳಿಗಾಗಿ ಹೀಗೆ ಆತ್ಮಸ್ತುತಿಯನ್ನು ಮಾಡಿಕೊಳ್ಳುವೆಯೋ, ಆ ಚಿಹ್ನಗಳನ್ನು ನಾನು ತೆಗೆಸಿಬಿಡುವೆನು ಕೋಡು ಮತ್ತು ನೀನು ನನ್ನಲ್ಲಿ ಶರ ಣಾಗತನಾಗಬೇಕೆಂದು ಯಾವ ಬಾಯಿಂದಾಡಿದೆಯೋ, ಆ ಬಾಯನ್ನು ಮುಚ್ಚಿಸಿ, ನಿನ್ನನ್ನು ರಣರಂಗದಲ್ಲಿ ಮಲಗಿಸಿ, ಆ ನಿನ್ನ ದೇಹ ವನ್ನು ಹದ್ದು ಕಾಗೆಗಳಿಗೂ, ನರಿನಾಯಿಗಳಿಗೂ ಆಹಾರವಾಗಿ ಮಾ ಡುವೆನು.” ಎಂದು ಹೇಳಿ ಕಳುಹಿಸಿಬಿಟ್ಟನು. ಆ ದೂತನೂಕೂಡ ಕೃ ಷ್ಯನು ಹೇಳಿದ ಮಾತುಗಳನ್ನೇ ತಂದು ತನ್ನ ರಾಜನಿಗೆ ಯಧಾವತ್ತಾಗಿ ತಿಳಿಸಿದನು. ಇಷ್ಟರಲ್ಲಿಯೇ ಕೃಷ್ಣನು ಯುದ್ಧಸನ್ನದ್ಧನಾಗಿ ರಥವನ್ನೇರಿ, ಕರೂಶದೇಶಕ್ಕೆ ನೆರೆಯಲ್ಲಿದ್ದ ಕಾಶೀಪಟ್ಟಣದ ಬಳಿಗೆ ಬಂದನು. ಕೃಷ್ಣನು ಬಂದಿರುವ ಸಂಗತಿಯನ್ನು ಕೇಳಿ ಪೌಂಡ್ರಕನೂ ಕೂಡ, ಅಕ್ಷ ಹಿನೇ ಸೈ ವ್ಯದೊಡನೆ ಯುದ್ಯೋದ್ಯುಕ್ತನಾಗಿ ತನ್ನ ಪಟ್ಟಣದಿಂದ ಹೊರಟುಬಂದ ನ. ಓ ರಾಜೇಂದ್ರಾ? ಆ ಪೌಂಡ್ರಕಸಿಗೂ, ಕಾಶೀರಾಜನಿಗೂ ಅನ್ನೋ 'ಸ್ನೇಹವಿದ್ದುದರಿಂದ, ಪಂಡ್ರಕನಿಗೆ ಬೆಂಬಲವಾಗಿ ಕಾಶೀರಾಜನು ಮೂರಕ್ಷೆಹಿಣೀಸೈನ್ಯಗಳನ್ನು ಸಿದ್ಧಪಡಿಸಿಕೊಂಡು ಯುದ್ಧಕ್ಕೆ ನಿಂತನು. ಆಗ ಆ ಪೌಂಡ್ರಕನ ಕಪಟವೇಷದ ಆಡಂಬರವನ್ನು ಕೇಳಬೇಕೆ ? ಚತು ರ್ಭುಜಗಳು!ಆ ನಾಲ್ಕು ಭುಜಗಳಲ್ಲಿಯೂ ಶಂಖ ಚಕ್ರ ಗದಾ ಖಡ್ಗ ಶಾರ್ಬಿ ಗಳೆಂಬ ಪಂಚಾಯುಧಗಳು!ಎದೆಯಲ್ಲಿ ಶ್ರೀವತ್ಸವೆಂಬ ಮಜ್ಜೆಯ ಗುರುತು! ವಕ್ಷಸ್ಥಳದಲ್ಲಿ ಕೌಸ್ತುಭಮಣಿ! ಕಂಠದಲ್ಲಿ ವನಮಾಲಿಕೆ ! ಮೈಮೇಲೆ ಹೊಂ ಬಣ್ಣದ ಎರಡುಪಟ್ಟೆ ಮಡಿಗಳು ! ರಥಧ್ವಜದಲ್ಲಿ ಗರುತ್ಮಂತನ ಆಕೃತಿ! ತಲೆ ಯಕ್ತಿಯೂ, ಕಿವಿಗಳಲ್ಲಿಯೂ,ಅಮೂಲ್ಯಗಳಾದ ಕಿರೀಟಮಕರಕುಂಡಲಗಳು! ನಾಟಕದಲ್ಲಿ ವೇಷಧಾರಿಯಾಗಿ ಬಂದ ನಟನಂತೆ ಹೀಗೆ ಕೃತ್ರಿಮವೇಷವನ್ನು ಧರಿಸಿ ಬರುತ್ತಿರುವ ಆ ಪೌಂಡ್ರಕನನ್ನು ನೋಡಿ ಕೃಷ್ಣನು,ತಡೆಯಲಾರದ ನಗೆಯಿಂದ ಕೇಕೆಹಾಕಿ ನಕ್ಕನು. ಕೃಷ್ಣನು ಅಟ್ಟಹಾಸದಿಂದ ನಗುತ್ತಿರುವು ದನ್ನು ನೋಡಿ,ಶತ್ರುಗಳು ಮತ್ತಷ್ಟು ಕೋಪದಿಂದ, ಅವನಮೇಲೆ ಶೂಲ, ಗದೆ, ಪರಿಫು, ಶಕ್ತಿ, ಪ್ರಾಸ, ತೋಮರ, ಕತ್ತಿ, ಪಟ್ಟಸ,ಬಾಣ,ಮೊದಲಾ ದ ಅನೇಕಶಸ್ತ್ರಗಳನ್ನು ಪರಂಪರೆಯಾಗಿ ಪ್ರಯೋಗಿಸಿದರು. ಆದರೇನು ? 140 B.